ವೃತ್ತಿಯಲ್ಲಿ ವೈದ್ಯರಾಗಿರುವ ಅಜಿತ್ ಅವರು ಪ್ರವೃತ್ತಿಯಲ್ಲಿ ಬರಹಗಾರರು ಹೌದು. ವೈದ್ಯ ಲೋಕದ ವಿಷಯಗಳನ್ನು ಅಂಕಣ, ಲೇಖನಗಳ ಮೂಲಕ ಓದುಗರನ್ನು ತಲುಪುತ್ತಿರುವ ಇವರ ಹೊಸ ಹಾಗೂ ವಿಭಿನ್ನ ಪ್ರಯತ್ನವಾಗಿ ’ಬಿಳಿಮಲ್ಲಿಗೆಯ ಬಾವುಟ’ ಕವನ ಸಂಕಲನ ಗಮನ ಸೆಳೆಯುತ್ತದೆ. ಇಂದಿನ ಪ್ರಸ್ತುತ ಸಮಾಜದ ಸ್ಥಿತಿಗತಿಗಳ ಕುರಿತು ಕವಿತೆ ಬರೆಯುವ ಲೇಖಕರು, ಪ್ರೀತಿ ಪ್ರೇಮದ ಕವನಗಳ ಜೊತೆಗೆ ಆಧ್ಯಾತ್ಮದ ಕವಿತೆಗಳನ್ನು ಬರೆದಿದ್ದಾರೆ. ಕವಿಯ ಗಟ್ಟಿಧ್ವನಿ ಅವರ ಕವನಗಳಲ್ಲಿ ಕಾಣುತ್ತವೆ. ಓ ನಾಲಾಯಕ್ ಗಂಡಸೇ ಗಂಡಸಾಗುವ ಮೊದಲು ಮನುಷ್ಯನಾಗು ಕವಿತೆ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ದೇಶದ ಒಳಿತನ್ನು ಬಯಸುವ ಸಾಮಾನ್ಯ ನಾಗರೀಕನಾಗಿ ಅವರಿಗಾಗುವ ಕಳವಳ, ಆತಂಕ ಎಲ್ಲವೂ ಈ ಕವನ ಸಂಕಲನದಲ್ಲಿ ಎದ್ದು ಕಾಣುತ್ತದೆ.
ಲೇಖಕ ಡಾ. ಅಜಿತ್ ಹರೀಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ, ಪದವಿಪೂರ್ವ ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿರುತ್ತಾರೆ. ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವೀಧರರಾದ ಇವರು, ಆಕ್ಯುಪಂಕ್ಚರ್ ಚಿಕಿತ್ಸೆ , ಹಿಪ್ನೋಥೆರಪಿಯಲ್ಲಿಯೂ ಪರಿಣಿತರು. ಪ್ರಸ್ತುತ ಹರೀಶಿಯಲ್ಲಿ ಖಾಸಗಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು. ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು. ಕಥಾಭರಣ ಸಂಪಾದಿತ ಕೃತಿಯಾಗಿದೆ. ಆರೋಗ್ಯದ ಅರಿವು ...
READ MORE