ಹೋರಾಟ

Author : ಬಸವರಾಜ ಸಬರದ

Pages 48

₹ 4.00




Year of Publication: 1976
Published by: ಯುಗಧ್ವನಿ ಪ್ರಕಾಶನ
Address: ಧಾರವಾಡ

Synopsys

‘ಹೋರಾಟ’ ಲೇಖಕ ಬಸವರಾಜ ಸಬರದ ಅವರ ಮೊದಲ ಕಾವ್ಯ ಸಂಕಲನ. ಈ ಕೃತಿಗೆ ಸೋಮಶೇಖರ ಇಮ್ರಾಪೂರ ಅವರ ಮುನ್ನುಡಿ ಇದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ನನ್ನ ವಿದ್ಯಾರ್ಥಿ ಮಿತ್ರ ಬಸವರಾಜ ಸಬರದ ಅವರು ಸ್ವಪ್ರೇರಣೆಯಿಂದ ಹೊಸ ಕಾವ್ಯ ಕೃಷಿಗೆ ಮೊದಲಾಗಿದ್ದಾರೆ. ಮಾತು, ನಟನೆ ಎರಡರಲ್ಲೂ ನೆನಪಿಸುವ ವಿಶಿಷ್ಟ ವ್ಯಕ್ತಿತ್ವ ಹೊಂದಿದ ಅವರು ಈ ಹೋರಾಟ ಸಂಗ್ರಹ ಹೊರ ತರಲು ನಡೆಸಿದ ಹೋರಾಟವನ್ನು ನಾನು ಬಲ್ಲೆ. ಅಂತೆಯೇ ಅವರ ತಾಳ್ಮೆ, ಸಹನೆ ಹಾಗೂ ಕಾವ್ಯ ಕುರಿತ ಅವರ ಆದರ ನಿಜಕ್ಕೂ ನನಗೆ ಪ್ರಿಯವೆನಿಸಿತು ಇತ್ತೀಚಿನ ಕವಿಪೀಳಿಗೆಯಲ್ಲಿ ಕಾಣಸಿಗುವ ದುಡುಕುತನಕ್ಕೆ ಅವರು ಅಪವಾದವೆನ್ನುವ ವಿಚಾರವು ಸುಳಿಯಿತು. ಇದೀಗ ಸಬರದರ ಹೋರಾಟ ಹೊರಬಿದ್ದಿದೆ. ಇದು ಅವರ ಮೊದಲ ಸಂಗ್ರಹ, ಹೊಸಬನಲ್ಲಿ ಸಾಮಾನ್ಯವಾಗಿ ಕಾಣಸಿಗುವ ಅಲ್ಪ ದೋಷಗಳನ್ನುಳಿದು ಒಟ್ಟಾರೆ ಇದೊಂದು ಗಮನಾರ್ಹ ಕವನ ಸಂಗ್ರಹ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books