ಸುಡುತ್ತಿದ್ದಾನೆ ಸೂರ್ಯ ಸೋಮಲಿಂಗ ಬೇಡರ ಅವರ ಕವನ ಸಂಕಲನ. ಇದರಲ್ಲಿ ಒಟ್ಟು 75 ಕವನಗಳಿವೆ. ಎಲ್ಲ ಕವನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಬೆಳಕು ಕಂಡಿರುವುದು ಕವಿಯ ಹೆಗ್ಗಳಿಕೆಯಾಗಿದೆ. ದೈನಂದಿನ ಬದುಕನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸುವ ಕವಿ ವೈವಿಧ್ಯಗಳನ್ನು ವಿಭಿನ್ನ ನೆಲೆಗಳಲ್ಲಿ ಇಲ್ಲಿ ಅಕ್ಷರ ರೂಪದಲ್ಲಿ ಅಭಿವ್ಯಕ್ತಿಸಿದ್ದಾರೆ. ಇಲ್ಲಿನ ಕವನಗಳು ಸೂಜಿ ಚುಚ್ಚಿದಷ್ಟು ಚುರುಕಾದ ಭಾಷೆಯಿಂದ ಶಬ್ದ ಚಮತ್ಕಾರಗಳಿಂದ ಓದುಗನ ಗಮನ ಸೆಳೆಯಬಲ್ಲ, ಕಚಗುಳಿ ಇಡಬಲ್ಲ, ಒಂದು ದಟ್ಟವಾದ ನೋವನ್ನು, ವಿಷಾಧವನ್ನು ನೀಡಬಲ್ಲ, ಉತ್ಸಾಹದ ಚಿಲುಮೆಯಾಗಬಲ್ಲ ತಾಕತ್ತು ಇಲ್ಲಿನ ಕವಿತೆಗಳಿಗಿದೆ. ಈ ಕೃತಿಗೆ ಕಸಾಪ ದತ್ತಿ ಬಹುಮಾನ, ಅಡ್ವೈಸರ್ ಪ್ರಶಸ್ತಿ ಮೊದಲಾದ ಗೌರವ ಲಭಿಸಿವೆ.
ಸೋಮಲಿಂಗ ಬೇಡರ ಅವರು ಇಂಡಿ ಜಿಲ್ಲೆ ಆಳೂರ ತಾಲ್ಲೂಕಿನ ವಿಜಯಪುರದವರು. ಎಂ. ಎ. ಬಿಎಡ್ ವಿದ್ಯಾರ್ಹತೆಯನ್ನು ಹೊಂದಿರುವ ಇವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರು. ಪ್ರಕಟಿತ ಕೃತಿಗಳು : ಮುತ್ತಿನ ಮಳೆ ( ಕವನ ಸಂಕಲನ 2001),ಮುದ್ದಿನ ಹಕ್ಕಿ(ಮಕ್ಕಳ ಕವನಗಳು 2006), ಹಕ್ಕಿ ಗೂಡು ( ಮಕ್ಕಳ ಕವನಗಳು 2015) ಸುಡುತ್ತಿದ್ದಾನೆ ಸೂರ್ಯ (ಕವನ ಸಂಕಲನ 2017) , ಬಂಗಾರ ಬಣ್ಣದ ಹಕ್ಕಿ (ಮಕ್ಕಳ ಕಥನ ಕವನಗಳು) 2018) ಮಕ್ಕಳಿಗಾಗಿ ನೂರಾರು ಕವಿತೆಗಳು 2019 ( ಕಸಾಪ ಸಮೀರವಾಡಿ ದತ್ತಿ, ಮಕ್ಕಳ ...
READ MORE