ಲೇಖಕಿ ಸಂಧ್ಯಾದೇವಿ ಅವರ ಕವಿತೆಗಳ ಸಂಕಲನ-ನೆನಪಿನ ಬೂದಿಗೆ ಜೀವ ಬರಲಿ. ಆತ್ಮಸಂತೋಷದ 50 ಕವಿತೆಗಳಿವೆ. ಬರವಣಿಗೆಯಲ್ಲಿ ಬದ್ಧತೆಯನ್ನು ತೋರುವುದಕ್ಕೆ ಕವಿಯತ್ರಿಯು ‘ಬರೆಯಬೇಕೆಂದರೆ ನಾವಿಬ್ಬರೂ ಬರೆಯಬೇಕು. ನೀರು ನೀರಿಗೆ ಸೇರಿದಂತೆ’ ಎನ್ನುವ ಸಾಲುಗಳು ಕವಿತೆಯ ಅರ್ಥವಂತಿಕೆಯನ್ನು ಹೆಚ್ಚಿಸುತ್ತವೆ. ಸೃಷ್ಟಿ-ಲಯದ ಸಂಕೇತವಾಗಿ ಬೂದಿಯಲ್ಲೇ ಜೀವ ಹುಟ್ಟಿಬರಲಿ ಎಂದಯು ಕವಿಯತ್ರಿ ಆಶಿಸುತ್ತಾರೆ.
ಕವಯಿತ್ರಿ ಸಂಧ್ಯಾದೇವಿ ಮೂಲತಃ ಪುತ್ತೂರಿನವರು. `ಮಾತು ಚಿಟ್ಟೆ, ಬೆಂಕಿ ಬೆರಳು, ಮುರಿದ ಮುಳ್ಳಿನಂತೆ ಜ್ಞಾನ' ಅವರ ಮೊದಲ ಕವನ ಸಂಕಲನ. ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಹಲವಾರು ಕವಿತೆಗಳು ಮಯೂರ, ಸುಧಾ, ಹೊಸ ಮನುಷ್ಯ ಮುಂತಾದ ಮಾಸಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಝಳಕ್ಕೆ ಮುಖ ಬೆಳಗುತ್ತದೆ ಮತ್ತು ‘ನೆನಪಿನ ಬೂದಿಗೆ ಜೀವ ಬರಲಿ’ ಅವರ ಮತ್ತೆರಡು ಕವನ ಸಂಕಲನ. ...
READ MORE