ಹಿರಿಯ ಸಾಹಿತಿ ಪು.ತಿ. ನರಸಿಂಹಾಚಾರ್ ಅವರು ಬರೆದ ಕವನಗಳ ಸಂಕಲನ-ಗಣೇಶ ದರ್ಶನ. ಒಟ್ಟು 34 ಕವನಗಳಿವೆ. ನನ್ನ ನಾಯಿ, ಕವಿ ಬೇಂದ್ರೆ ಅವರು ಕುರಿತು, ಗಣೇಶ ದರ್ಶನ, ಪ್ರತೀಕ್ಷೆ, ಅವನು-ಅವಳು, ನರ್ತಕಿಯೊಬ್ಬಳ ನಾಟ್ಯವನ್ನು ನೆನೆದು.. ಹೀಗೆ ವಿವಿಧ ವಸ್ತು ವೈವಿಧ್ಯತೆಯೊಂದಿಗೆ ಇಲ್ಲಿಯ ಕವನಗಳು ಓದುಗರನ್ನು ಸೆಳೆಯುತ್ತವೆ.
ಪುತಿನ ಎಂದು ಚಿರಪರಿಚಿತರಾಗಿದ್ದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಮೇಲುಕೋಟೆಯಲ್ಲಿ 1905ರ ಮಾರ್ಚ್ 17ರಂದು ಜನಿಸಿದರು. ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ. ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ 1938ರಲ್ಲಿ ವ್ಯವಸ್ಥಾಪಕರಾಗಿಯೂ 1945ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು ಅನಂತರ 1952ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರ ...
READ MORE