ಕೆ.ಪಿ. ಚೋಂದಮ್ಮ ಅವರ ‘ಲಲಿತ ಲಹರಿ’ ಕೃತಿಯು ಕವನ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಪ್ರಕೃತಿಯಲ್ಲಿ ಅಡಗಿರುವ ಧ್ವನಿ ಮಾಧುರ್ಯಗಳನ್ನು ಅನುಕರಿಸಿ, ಸಪ್ತ ಸ್ವರಗಳನ್ನು ಗುರುತಿಸಿ, ಲಯ, ತಾಳ, ಗೇಯತೆಯೊಂದಿಗೆ ಭಕ್ತಿ ರಸ ಮಿಲನಗೊಳಿಸಿ ಶ್ರೋತೃಗಳ ಹೃದಯ ಮುಟ್ಟುವಂತೆ ಮಾಡುವುದು ಸಂಗೀತ. ಇಂತಹ ಗೇಯತೆಯುಳ್ಳ ರಚನೆಗಳೆ, ಗೀತೆಗಳು, ದೇವರ ನಾಮ, ಕೀರ್ತನೆಗಳು, ಕೃತಿಗಳು, ಸುಗಮ ಸಂಗೀತಕ್ಕೆ ಬೇಕಾದ ದಾಸರ ಪದಗಳು. ಪ್ರಕೃತಿಯಲ್ಲಿ ಹುದುಗಿದ ಹಲವು ಗುಣ ವಿಶೇಷತೆಗಳನ್ನು, ದೃಶ್ಯ ವೈಭವಗಳನ್ನು ಹೊರಗೆಳೆದು ಕಣ್ಣಿಗೆ ಕಾಣುವಂತೆ ಹೃದಯವನ್ನು ಮುಟ್ಟುವಂತೆ ಭಾವವನ್ನು ಅಭಿವ್ಯಕ್ತಿಗೊಳಿಸುವ ಒಂದು ಕಲಾ ಮಾಧ್ಯಮವೇ ಕವನ. ಭಾವಗೀತೆಗಳು, ಕವನ, ಕವಿತೆ, ಕಾವ್ಯ, ಗದ್ಯ, ವಚನ ಮುಂತಾದವುಗಳು. ಹಲವು ಸಂದರ್ಭಗಳಲ್ಲಿ ಛಂದಸ್ಸು, ಅಥವಾ ಛಂದಸ್ಸಿನಿಂದ ಹೊರಬಂದು ಮಾನವನ ಮನಮುಟ್ಟಿ, ಹೃದಯ ತಟ್ಟುವುದರಲ್ಲಿ ಯಶಸ್ವಿಯಾಗಿದೆ. ಕವನ, ಕವಿತೆಗಳಲ್ಲಿ ಛಂದಸ್ಸನ್ನು ಬಿಟ್ಟರೂ ಮಾತ್ರಾ ಗಣನೆಯ ಮುಖಾಂತರ ಭಾವ, ಅಲಂಕಾರವನ್ನು ತುಂಬಿ, ಅರ್ಥವತ್ತಾದ ರಚನೆಗೆ ಗೇಯತೆ, ಲಯ, ತಾಳದ ಮಟ್ಟುಗಳು ಸಿಗುವಂತೆ ರಚಿಸಿದರೆ, ಅಂತಹ ರಚನೆಗಳು ಉತ್ಕೃಷ್ಟ ರಚನೆಯಾಗುತ್ತವೆ. ಈ ನಿಟ್ಟಿನಲ್ಲಿ ನನ್ನದೊಂದು ಸಣ್ಣ ಪ್ರಯತ್ನವೇ ಈ ಕವನ ಸಂಕಲನ. ತ್ರೈಮಾತ್ರಾ, ಚತುರ್ಮಾತ್ರಾ, ಪಂಚಮಾತ್ರಾ, ಚೌಕಟ್ಟಿನಲ್ಲಿ, ಉತ್ಸಾಹ , ಮಂದಾನಿಲ , ಲಲಿತ ಲಯ, ಮತ್ತು ಭಾಮಿನಿ ಲಯದೊಂದಿದೆ ತಮ್ಮ ಮುಂದಿಡಲು ಬಯಸಿರುವೆನು. ಓದುಗರ ಮನಮೆಚ್ಚಿಸಿದರೆ ನನ್ನ ಈ ಪ್ರಯತ್ನ ಸಾರ್ಥಕವಾಗುತ್ತದೆ ಎನ್ನುತ್ತಾರೆ ಕವಿ.
ಲೇಖಕಿ ಕೆ.ಪಿ. ಚೋಂದಮ್ಮ ಅವರು ಮೂಲತಃ ಕೊಡಗಿನವರು. 1956 ರಲ್ಲಿ ಬೇಂಗುನಾಡಿನ ಬೇಂಗೂರು ಗ್ರಾಮದಲ್ಲಿ ಜನಿಸಿದರು. ತಂದೆ ದಿವಂಗತ ಕೂಡಕಂಡಿ ಪೂವಯ್ಯ, ತಾಯಿ ಅಕ್ಕಮ್ಮ. ಚೋಂದಮ್ಮ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ. ಕತೆ, ಕವನ, ಲೇಖನ ಹಾಗೂ ಮಕ್ಕಳ ಸಾಹಿತ್ಯ ಅವರ ಬರವಣಿಗೆಯ ಪ್ರಕಾರಗಳು. ಕೃತಿಗಳು: ಛಂದಸ್ಸಿನ ಮಡಿಲು, ಲಲಿತ ಲಹರಿ(ಕವನ ಸಂಕಲನ) ...
READ MORE