‘ಸೂರ್ಯ’ ಲೇಖಕ ಜಿ.ಎಚ್. ಜ್ಯೋತಿಲಿಂಗಪ್ಪ ಶಿವನಕೆರೆ ಕವನ ಸಂಕಲನ. ಈ ಕೃತಿಗೆ ಪದ್ಮಾಲಯ ನಾಗರಾಜ್ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ನಾನು ಕಾವ್ಯದ ಓದುಗನಾಗಿ ಮನುಷ್ಯ ನಿರ್ಮಿತ ನಾಗರೀಕತೆಗಳಲ್ಲಿ ಯುದ್ಧ, ಸುಲಿಗೆ, ಶೋಷಣೆ, ಮತ್ತದರ ರಾಜಕೀಯ ಸ್ಥಿತ್ಯಂತರಗಳನ್ನು ಹುಡುಕುವವ ಮಾತ್ರ. ಹಾಗಾಗಿ ನನಗೊಂದು ರೀತಿಯಲ್ಲಿ ಜ್ಯೋತಿಲಿಂಗಪ್ಪನವರ ಕಾವ್ಯ ತೀವ್ರವಾದ ಆಧ್ಯಾತ್ಮಿಕ ಕಗ್ಗಂಟಾಗುತ್ತದೆ. ಆದ್ದರಿಂದ ನನ್ನಂತಹವರು ಅವರ ಕವನಗಳಿಗೆ ಬರೆಯುವುದು ತೀರಾ ಕಷ್ಟವೆಂದುಕೊಂಡಿದ್ದೇನೆ’ ಆದರೆ ಅವರ ಕವನ ಸಂಕಲನ ಸೂರ್ಯ ಈ ಇಕ್ಕಟ್ಟಿನಿಂದ ಸ್ವಲ್ಪ ಸ್ವಲ್ಪ ಪಾರಾದ ಹಾಗೆ ಕಂಡಿರುವುದರಿಂದ ಒಂದಿಷ್ಟು ಹಾಯಾಗಿ ಬರೆಯಬಹುದೆಂದುಕೊಂಡಿದ್ದೇನೆ. ಸೂರ್ಯ ಕವನಗಳು..ಸೂರ್ಯನಿಲ್ಲದಾ ಬೈಕಿಲ್ಲದಾ ಲೋಕವೊಂದನ್ನ ವಿಡಂಬಿಸುತ್ತಾ ಪಯಣಿಸುವ ಅವರ ಕಾವ್ಯ ಪಯಣ ಸೂರ್ಯನನ್ನು ಓದುಗನ ಕೈಗೆ ಎಟುಕಿ ಎಟುಕದಂತೆ ಸತಾಯಿಸುವ ಚಮತ್ಕಾರವನ್ನು ಮುಂದಿಡುತ್ತದೆ ಎಂದಿದ್ದಾರೆ.
ಮೂಲತಃ ಚಿತ್ರದುರ್ಗದ ಬೇಡರ ಶಿವನಕೆರೆಯವರಾದ ಜ್ಯೋತಿಲಿಂಗಪ್ಪ ಅವರು 15-11-1950ರಂದು ಜನಿಸಿದರು. ತಂದೆ- ಹನುಮಂತಪ್ಪ ಎಸ್.ಜಿ., ತಾಯಿ- ಕಲ್ಲಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ, ಫ್ರೌಢಶಿಕ್ಷಣವನ್ನು ಸಿರಿಗೆರೆಯಲ್ಲಿ, ಬಿ.ಎಸ್ಸಿ ಪದವಿಯನ್ನು ಬೆಂಗೂರಿನಲ್ಲಿ ಪೂರೈಸಿದ್ದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ ಹಾಗೂ ಹಿಮಾಚಲ ಪ್ರದೇಶದ ಶೀಮ್ಲಾದಲ್ಲಿ ಎಂ.ಎಡ್, ಜೊತೆಗೆ ಮೈಸೂರಿನಲ್ಲಿ ಡಿಪ್ಲೊಮಾ ಇನ್ ತಮಿಳು ಪದವಿಗಳನ್ನು ಪಡೆದಿದ್ದಾರೆ. ಆನಂತರ ಭದ್ರಾವತಿಯ ಅಗರದಳ್ಳಿಯಲ್ಲಿ ಫ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು 1997ರಿಂದ 2010ರವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಗರದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಫೋಟೋಗ್ರಾಫಿಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರು ...
READ MORE