ವಿ. ನಿಶಾ ಗೋಪಿನಾಥ ಅವರ ಕವನ ಸಂಕಲನ-ನೀಲಿ ನಕ್ಷತ್ರ. ಹಳ್ಳಿಯಲ್ಲಿ ಹಬ್ಬಿರುವ ಬೇಲಿಯ ಬಯಲು, ನದಿಯಂತೆ ಹರಿವ ಹೆಣ್ಣಿನ ಚಿತ್ರಣವನ್ನು ಇಲ್ಲಿಯ ಕಾವ್ಯಗಳು ತೀವ್ರವಾಗಿ ತೆರೆದಿಡುತ್ತವೆ. ಆಂತರಿಕ ತಳಮಳ ಹಾಗೂ ವೇದನೆಯನ್ನು ದಾಟ ಬಯಸುವ ಇವು ಪ್ರೀತಿ ಮತ್ತು ತಲ್ಲಣವನ್ನು ಒಟ್ಟಿಗೆ ಧ್ವನಿಸುತ್ತವೆ.
ಕವಯತ್ರಿ ವಿ ನಿಶಾ ಗೋಪಿನಾಥ್ ಅವರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸೊಣ್ಣನಾಯಕನ ಹಳ್ಳಿಯವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಪತ್ರಿಕೋದ್ಯಮದಲ್ಲಿ ಪದವೀಧರೆಯಾಗಿದ್ದು ಇನ್ನೋವೆಟಿವ್ ಸಿಸ್ಟಮ್ಸ್‌ನಲ್ಲಿ ಕೆಲವು ಕಾಲ ಕಂಪ್ಯೂಟರ್ ಅಧ್ಯಾಪಕಿಯಾಗಿ ಕೆಲಸ ಮಾಡಿದ್ದಾರೆ. ಮಯೂರ, ವಿಜಯ ಹಾಗೂ ಕಸ್ತೂರಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವವಿದ್ದು ನಾಡಿನ ಹಲವು ಪತ್ರಿಕೆಗಳಲ್ಲಿ ಅವರ ಕವಿತೆಗಳು ಪ್ರಕಟವಾಗಿವೆ. 'ಬೇಲಿ ಹೂ' ಅವರ ಮೊದಲ ಕಥಾ ಸಂಕಲನ. ಸಾಮಾಜಿಕ ಕಳಕಳಿ ಹೊಂದಿರುವ ನಿಶಾ ಗೋಪಿನಾಥ್, ಹಲವಾರು ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ‘ನೀಲಿ ನಕ್ಷತ್ರ’ ಅವರ ಕವನ ಸಂಕಲನ. ...
READ MORE