ಅಗ್ನಿದಿವ್ಯ

Author : ನಾಗವೇಣಿ ಹೆಗಡೆ

Pages 100

₹ 120.00




Year of Publication: 2021
Published by: ಹೆಚ್.ಎಸ್.ಆರ್.ಎ.ಪ್ರಕಾಶನ
Address: ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯ ರಸ್ತೆ, ಭೈರವೇಶ್ವರ ನಗರ,ಲಗ್ಗೆರೆ, ಬೆಂಗಳೂರು 560058.
Phone: 7892793054

Synopsys

ಅಗ್ನಿದಿವ್ಯ - ಲೇಖಕಿ ನಾಗವೇಣಿ ಹೆಗಡೆ ಅವರು 65 ಬಗೆಯ ಬಣ್ಣಗಳ ಮಧುರ ಜ್ವಾಲೆಗಳಂತಹ ಕವನಗಳ ಪೋಣಿಸಿಟ್ಟ ಕೃತಿಯಿದು. ನಾಗವೇಣಿ ಹೆಗಡೆ ಎಂಬ ಕವಯಿತ್ರಿಯ ಈ ಸಂಕಲನದಲ್ಲಿ ಸುಡು ಸುಡು ಭಾವನೆಗಳಿವೆ. ಹಿತವಾದ ಬೆಚ್ಚನೆಯ ಕಾವು ಇದೆ. ಮನುಷ್ಯನೊಳಗೆ ಅವನ ಚಿಂತನೆಗಳು , ಭಾವನೆಗಳು , ಕಲ್ಪನೆಗಳು , ಅನುಭವಗಳು , ಅನುಭಾವಗಳು ಸದಾ ಮಂಥನ ನಡೆಸುತ್ತಲೇ ಇರುತ್ತದೆ.ಈ ಮಂಥನದಿಂದ ಏನು ಬೇಕಾದರೂ ಹುಟ್ಟಬಹುದು.ಹಾಲಾಹಲ , ಅಮೃತ......ಕೆಲವೊಮ್ಮೆ ಏನೂ ಹುಟ್ಟದೆ ಬೆಂಕಿ ಬೆಂಕಿ ಕೆಂಡ ಹುಟ್ಟಬಹುದು.ಅಂತಹ ಅಗ್ನಿಕುಂಡದಲ್ಲಿಯೇ ಪರೀಕ್ಷೆಗಳು ನಡೆಯುವುದು. ಇಲ್ಲಿನ ಕವಿತೆಗಳೂ ಹಾಗೇ....ಬದುಕೆಂಬ ಅಗ್ನಿಯಲ್ಲಿ ಸಾಂತ್ವನದ , ಪ್ರೇರಣೆಯ , ಹೊಸ ಸೃಷ್ಟಿಯ , ಜೀವ ಚೈತನ್ಯದ ದಿವ್ಯತೆಗಳನ್ನು ಅರಳಿಸುತ್ತ ಸಾಗುತ್ತವೆ. ಸೌಂದರ್ಯಾರಾಧನೆ,ಜ್ಞಾನೋಪಾಸನೆ ಮಾಡಿವೆ.ವ್ಯಾಕರಣದ ನೀರಸತೆಯನ್ನು ನೀಡದೆ , ನಿಘಂಟುವಿನ ಕಗ್ಗಂಟಿನಲ್ಲಿ ಓದುಗನ ಮುಳುಗಿಸದೇ ಸರಳವಾಗಿ ಕೃಷಿ ಮಾಡಿ ಬೆಳೆದ ಫಸಲಿನಂತೆ ಕಂಗೊಳಿಸಿವೆ. ಕೆಲವೊಮ್ಮೆ ಕವಯಿತ್ರಿಯ ಭಾವ ವಾಸ್ತವದೊಡನೆ ಬಡಿದಾಡಿದರೆ ಮತ್ತೊಮ್ಮೆ ವಾಸ್ತವದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ.ಏಕತಾನತೆಯ ಜಾಡ್ಯಕ್ಕಂಟದೇ ಪದ್ಮ ಪತ್ರದ ಜಲಬಿಂದುವಿನಂತಿವೆ ಇಲ್ಲಿಯ ಮನೋ ಲಹರಿಗಳು. ವಿಭಿನ್ನ ಮತ್ತು ವಿಶೇಷವೇ ಕವಿಯ ಶಕ್ತಿ.ಅದನ್ನು ಕವಯಿತ್ರಿ ಈ ಸಂಕಲನದ ಮೂಲಕ ಸಾಧಿಸಿದ್ದಾರೆ. ಅಗ್ನಿಯ ಜ್ವಾಲೆಗಳು ಯಾವಾಗಲೂ ಊರ್ಧ್ವಮುಖಿ. ಒಂದು ರೀತಿ ನೋಡಿದಾಗ ಈ ಸಂಕಲನವೂ ಊರ್ಧ್ವಮುಖಿಯಾಗಿಯೇ ಇದೆ.ವ್ಯಕ್ತಿತ್ವ ವಿಕಾಸ, ಸಾತ್ವಿಕ ಸಹವಾಸಗಳೆಡೆಗೆ ನಮ್ಮನ್ನು ಇಶಾರೆ ಮಾಡುವ ಮಾರ್ಗಮುಖಿಯಾಗಿದೆ.ಮೂಲತಃ ಕವಯಿತ್ರಿ ಸಮಾಜಮುಖಿ ಕಾರ್ಯದಲ್ಲಿರುವುದು ಬಹುತೇಕರಿಗೆ ತಿಳಿದ ವಿಷಯ. ಸಮಾಜಮುಖಿಯಾಗಿದ್ದೂ ಸಾಹಿತ್ಯಮುಖಿಯಾಗಿ ಬರೆದ ಕವಿತೆಗಳಲ್ಲಿ ಭಾವಮುಖಿ ಕವಿತೆಗಳಿಗೇನೂ ಕೊರತೆಯಿಲ್ಲ. ಇಲ್ಲಿನ ಝಳಗಳಿಗಷ್ಚೂ ವಿವಿಧ ರಂಗುಗಳು. ಸಮಾನತೆಯ ನಿಲುವು , ಸಾಧನಾ ಪಥಿಕರಿಗೆ ಛಲವು, ರಸಿಕರಿಗೆ ಒಲವು , ಅಳ್ಳೆದೆಯವರಿಗೆ ಬಲವು ತುಂಬುತ್ತ ಸಾಗಿದ ಚಂದದ ಸಂಕಲನವಿದು. ಈ ಅಗ್ನಿದಿವ್ಯ ವಿಚಾರ ದೀವಿಗೆಯೂ ಹೌದು.ಆಚಾರ ಪ್ರಣತಿಯೂ ಹೌದು. ವೈಚಾರಿಕ ಚಿಂತನೆಯಿಂದ ಹಿಡಿದು ಸಾಮಾಜಿಕ , ಭಾಷೆ , ಶಿಕ್ಷಣ , ಇತಿಹಾಸ , ದಂತಕಥೆ , ಧರ್ಮ , ಆಧ್ಯಾತ್ಮ ವಲಯದವರೆಗೂ ವಿಸ್ತರಿಸಿವೆ ಇಲ್ಲಿನ ಕವಿತೆಗಳು.

About the Author

ನಾಗವೇಣಿ ಹೆಗಡೆ

ಕವಯತ್ರಿ ನಾಗವೇಣಿ ಹೆಗಡೆ ಅವರು ಮೂಲತಃ ಶಿರಸಿಯ ಹೆಗ್ಗರ್ಸಿಮನೆ ಗ್ರಾಮದವರು. ಜನಿಸಿದ್ದು ಶಿರಸಿಯ ಬೊಮ್ಮನಹಳ್ಳಿಯಲ್ಲಿ. ತಂದೆ ಕಮಲಾಕರ, ತಾಯಿ ಸುನಂದಾ. ಗೃಹಿಣಿಯ ಹೊಣೆಗಾರಿಕೆ ಮಧ್ಯೆಯೂ ಫ್ಯಾಷನ್ ಡಿಸೈನ್ ಸೇರಿದಂತೆ ಸಾಹಿತ್ಯದಲ್ಲೂ ವಿಶೇಷ ಆಸಕ್ತರು. ಮೊದಲಿನಿಂದಲೂ ಕರಕೌಶಲಗಳಲ್ಲಿಆಸಕ್ತರು. ಮಾತ್ರವಲ್ಲ; ಭರ್ಚಿಎಸೆತ, ರೀಲೆ, ವಾಲಿಬಾಲ್ , ಕಬ್ಬಡ್ಡಿಗಳಲ್ಲೂ ಬಹುಮಾನ ವಿಜೇತರು. ನಾಡಿನ ಹಲವಾರು ಪತ್ರಿಕೆಗಳಲ್ಲಿಇವರ ಕಥೆ-ಕವನಗಳು  ಪ್ರಕಟಗೊಳ್ಳುತ್ತಿವೆ. `ಕಣ್ಣು'  ಪತ್ರಿಕೆಯ ಶಿರಸಿ ಉಪಸಂಪಾದಕಿ ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ಕಾವ್ಯಮಂಜರಿ (ಕವನ ಸಂಕಲನ-2018), ಅಗ್ನಿದಿವ್ಯ (ಕವನ ಸಂಕಲನ( 2021), ಒಲವ ಹಂಚುವ ಮುದುಕಿ(ಮಕ್ಕಳ ಕಾದಂಬರಿ-2021, ವಿನಯವಾಣಿ ...

READ MORE

Related Books