’ಹೋಲೆ…ಹೋಲೆ’ ಪಂಜಾಬಿ ಭಾಷೆಯ ಶಬ್ದವಾಗಿದ್ದು, ಕುಣಿತದ ಹಾಡುಗಳಲ್ಲಿ ಬರುವಂತದ್ದು. ಹರ್ಷ ಸಂತೋಷಗಳನ್ನು ಸೂಚಿಸುವಂತದ್ದು. ಲೇಖಕ, ಕವಿ ಶಾ. ಬಾಲುರಾವ್ ಅವರ ಐವತ್ತ ನಾಲ್ಕು ಕವನ ಸಂಗ್ರಹವೇ ಈ ಪುಸ್ತಕ. ಈ ಸಂಗ್ರಹದ ಹಲವಾರು ಕವಿತೆಗಳು ಕವಿಯ ಬದುಕಿಗೆ ಬಂದ ಮಾತು, ಸುತ್ತಣ ಇರುವ ಸೂರ್‍ಯ-ಚಂದ್ರ, ನೆಲ-ನೀರು, ಮಲೆ-ಹೊಳೆ, ,ಮರ-ಗಿಡ, ಬೆಟ್ಟ ಮತ್ತು ಮನುಷ್ಯರನ್ನು ಕುರಿತಾದದ್ದು ಇವರ ಕವಿತೆಗಳ ವಸ್ತುವಾಗಿದೆ.
ಕವಿ ಮತ್ತು ಕವಿತೆ, ಸೂರ್‍ಯಸ್ನಾನ, ನೆಲದ ಸೆಳೆತ, ಕಾಮನಬಿಲ್ಲು, ವರ್ಷಾಸಂಭ್ರಮ, ಕಾವಲು, ಬೆಳಕು, ಕಾಲ ಮತ್ತು ಲೇಖಕ, ಹಕ್ಕಿಪಾಠ, ಮಾಸ್ಕೋದಲ್ಲಿ ಹಿಮ, ರೂಪಾಂತರ, ನನ್ನ ಚಂದ್ರಿ, ಮಳೆಗಾಲದಲ್ಲಿ ನದಿ, ಒಬ್ಬ ಸೂಫಿ ಹೇಳಿದ್ದು ಹೀಗೆ ಅನೇಕ ಕವನಗಳು ಕಿರುಗವನಗಳ ಸೆಳೆತದ ಆಕರ್ಷಕ ಸಾಲುಗಳಾಗಿ ಓದುಗರ ಮನದಲ್ಲಿ ಉಳಿದು ಬಿಡುತ್ತದೆ.
ಶಾ. ಬಾಲುರಾವ್ ಅವರು 1929 ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಸಂಪಾದಕರಾಗಿದ್ದವರು. ಇವರ ಪ್ರಮುಖ ಕೃತಿಗಳೆಂದರೆ ಷೇಕ್ಸ್ಪಿಯರಿಗೆ ನಮಸ್ಕಾರ (ಸಂಪಾದಿತ), ಬೆಕ್ಕು–ಬಾವಿ, ಹೋಲೆ…ಹೋಲೆ ಬೆಳ್ಳಕ್ಕಿಮಾಲೆ, ನಡೆದದ್ದೇ ದಾರಿ, ಸೂರ್ಯ ಇವನೊಬ್ಬನೇ ಮುಂತಾದವು. ...
READ MORE