'ಹನಿಟ್ಯ್ರಾಪ್’ ಎಂಬ ಈ ಸಂಕಲನದ ಶೀರ್ಷಿಕೆಯನ್ನು ನೋಡಿ ಓದುಗರು ಗಾಬರಿಯಾಗಬಾರದಾಗಿ ವಿನಂತಿ. ರಾಜಕಾರಣಿಗಳನ್ನು, ದೊಡ್ಡ ದೊಡ್ಡ ಅಧಿಕಾರಿಗಳನ್ನು, ಶ್ರೀಮಂತರನ್ನು ಬ್ಲಾಕ್ ಮೇಲ್ ಮಾಡಲು ನಡೆಸುವ ‘ಹನಿಟ್ಯ್ರಾಪ್’ ಎಂಬ ಕರಾಳ ದಂಧೆಗೂ ಈ ಸಂಕಲನಕ್ಕೂ ಯಾವುದೇ ಸಂಬಂಧ ಇಲ್ಲ. ನನ್ನ ಹನಿಗವನಗಳ ಅಭಿಮಾನಿಗಳೊಬ್ಬರು ಒಮ್ಮೆ ನನ್ನ ಬಳಿ ನೀವು ನಿಮ್ಮ ಹನಿಗವನಗಳ ಮೂಲಕ ಜನರನ್ನು ಆಕರ್ಷಿಸಿ ಸೆರೆಹಿಡಿಯುತ್ತೀರಿ. ಆದ್ದರಿಂದ ನೀವು ಮಾಡುತ್ತಿರುವುದು ಕೂಡಾ ಹನಿಟ್ಯ್ರಾಪ್” ಎಂದು ತಮಾಷೆ ಮಾಡಿದ್ದರು. ಸಂಕಲನಕ್ಕೆ ಯಾವ ಹೆಸರಿಡುವುದೆಂದು ಯೋಚಿಸುತ್ತಿದ್ದಾಗ ಅವರ ಮಾತು ನೆನಪಾಗಿ ಅದನ್ನೆ ಶೀರ್ಷಿಕೆಯಾಗಿ ಆರಿಸಿದೆ. ಈ ಸಂಕಲನದಲ್ಲಿ 317 ಹೊಸ ಹನಿಗವನಗಳಿವೆ ಎಂದು ಲೇಖಕ ಎಚ್.ಡುಂಡಿರಾಜ್ ಕೃತಿಯಲ್ಲಿ ತಿಳಿಸಿದ್ದಾರೆ.
ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ. ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. 2011ರಲ್ಲಿ ನಡೆದ ಸಂಯುಕ್ತ ಅರಬ್ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...
READ MORE