ಕಾಡು ಮಲ್ಲಿಗೆ

Author : ಆ ರಾ ಬಾಲಕೃಷ್ಣ

₹ 100.00




Year of Publication: 2021
Published by: ವಿಕಾಸ ಟ್ರಸ್ಟ್(ರಿ) ಪ್ರಕಾಶನ
Address: ಕೆ.ಟಿ. 816/2, ನಂದನ, ಚಂದಗಾಲು ಬಡಾವಣೆ, ಶಂಕರನಗರ, ಮಂಡ್ಯ-571 401

Synopsys

ಆ ರಾ ಬಾಲಕೃಷ್ಣ ಅವರ ಕವನ ಸಂಕಲನ ‘ಕಾಡು ಮಲ್ಲಿಗೆ’. ಈ ಕವನ ಸಂಕಲನಕ್ಕೆ ಪ್ರದೀಪಕುಮಾರ ಹೆಬ್ರಿ ಅವರು ಬೆನ್ನುಡಿ ಬರೆದಿದ್ದಾರೆ. ನಮ್ಮ ಬದುಕಿಗೊಂದು ಅರ್ಥವಿರಬೇಕು. ಅಂದವಿರಬೇಕು. 'ಇಲ್ಲ' ಎಂದು ಕೊರಗುವುದಕ್ಕಿಂತ ಇದ್ದುದನ್ನು ಪರಿಣಾಮಕಾರಿಯಾಗಿ ಅರಳಿಸುವ ಆತ್ಮಸ್ಥೆಯ್ಯ ಬೇಕು. ಇದಕ್ಕೆ ಗ್ರಹಿಸುವಿಕೆ, ಅಭಿವ್ಯಕ್ತಿ, ಸಂವಹನ, ಸಂವೇದನೆಗಳನ್ನುವ 'ಮನೋಮಾಧ್ಯಮ'ವೂ ಬೇಕು. ಇರುವುದನ್ನು ಗುರುತಿಸಿಕೊಂಡು ದುಡಿಸಿಕೊಂಡರೆ 'ಯಶೋ ಶಿಖರ' ಖಂಡಿತಕ್ಕೂ ಗಗನ ಕುಸುಮವಲ್ಲ. ಇದನ್ನು ತೋರಿಗೊಟ್ಟಿರುವ ಕವಿ ಎಲ್ಲರಿಗೂ ಮಾದರಿ. ಭರವಸೆಯ ಬೆಳಕು. "ಕಾಡು ಮಲ್ಲಿಗೆ ಘಮಭರಿತವೂ, ಬಣ್ಣ ರೂಪಗಳಿಂದ ಕೂಡಿದುದೂ ಆಗಿದೆ. ಇದನ್ನು ದರ್ಶಿಸದಿದ್ದರೆ, ಆಘಾಣಿಸದಿದ್ದರೆ ಕರ್ತೃ ಕಳೆದುಕೊಳ್ಳುವುದೇನೂ ಇಲ್ಲ. ಆದರೆ, ಕಾವ್ಯಾಭಿಮಾನಿಗಳಿಗೆ ದೊಡ್ಡ ನಷ್ಟ” ಎಂಬುದಗಿ ಹೇಳಿದ್ದಾರೆ.

About the Author

ಆ ರಾ ಬಾಲಕೃಷ್ಣ
(05 March 1983)

ಆನಸೋಸಲು ಬಸರಾಳು ಹೋಬಳಿ ಮಂಡ್ಯ ತಾಲ್ಲೂಕು ಮಂಡ್ಯ ಜಿಲ್ಲೆ ದ್ಯಾಪಸಂದ್ರದ ದಾಸೇಗೌಡರು ಕುಟುಂಬಕ್ಕೆ ಸೇರಿದ ಆ ರಾ ಬಾಲಕೃಷ್ಣ ಇವರು ಪದ್ಮಮ್ಮ- ದಿ.ರಾಜಪ್ಪ ರವರ ಮಗನಾಗಿ ದಿನಾಂಕ 5 ಮಾರ್ಚ್ 1983ರಲ್ಲಿ ಹುಟ್ಟು ದೈಹಿಕ ಅಂಗವಿಕಲರಾಗಿ ಜನಿಸಿದ್ದರು. ತಮ್ಮ ಸ್ವಗ್ರಾಮವಾದ ಆನಸೋಸಲು ಗ್ರಾಮದಲ್ಲಿ 1988 ರಿಂದ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ ನಂತರ ಮಂಡ್ಯ ತಾಲ್ಲೂಕು ಶಿವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 1998ರಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿರುತ್ತಾರೆ 1998ರಲ್ಲಿ ತಮ್ಮ ತಂದೆಯ ಆಕಾಲಿಕ ಮರಣದಿಂದಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಏಳು ವರ್ಷದ ನಂತರ ಮಂಡ್ಯ ತಾಲ್ಲೂಕು ಕೆರಗೋಡು ಗ್ರಾಮಾಂತರ ಸಂಯುಕ್ತ ಪದವಿ ಪೂರ್ವ ...

READ MORE

Related Books