ಕವಯತ್ರಿ ಹೇಮಾ ಪಟ್ಟಣಶೆಟ್ಟಿ ಅವರ ಕವಿತೆಗಳ ಸಂಕಲನ. ಈ ಸಂಕಲನದ ಒಂದು ಕವಿತೆ ಹೀಗಿದೆ-
ನನ್ನ ಹಣೆಗೆರೆಗಳನು ನಾನೆ ಬರೆದಿರುವಾಗ ಜನ ಕೊಟ್ಟ ನೀರ ಬರೆ ನಿಲ್ಲುವವೆ ಹೊಳೆ-ಮೈಗೆ.
ಸಂಬಂಧ ಅನುಬಂಧ ನಿರ್ಬಂಧಗಳ ನಡುವೆ ಎಲ್ಲಿ ನಿಂತಿದೆ ಹೇಳು ಬದುಕ ಗೊಮ್ಮಟ ಸಾರ.
ಈಗಷ್ಟೆ ಅಮ್ಮಿ ಕುಡಿದು ತುಟಿ ತುಂಬ ಹಾಲು ತೊರೆ ಸವರಿಕೊಂಡು ಪಿಸು ನಗುವ ಮಗುವಂತೆ ಈ ಬೆಳದಿಂಗಳು.
ಬದುಕು ರಚಿಸುವುದನ್ನು ಕಾವ್ಯ ಬದುಕುವುದನ್ನು ಕೂಡಿ ಬದುಕುವ ಶಕ್ತಿ ಉಂಟು ನನಗೆ ನನ್ನ ನಂಬುವ ಭಕ್ತಿ ಉಂಟೆ ನಿಮಗೆ?
ಕೂಸಿನ ನೆತ್ತಿ ನೀರು. ಠಳ್ಳೆಂದು ಹರಿದು ಹೋದಂತೆ ನನ್ನ ಕೋಪ ತಾಪಗಳೆಲ್ಲ ಹೊರಗಾಗಿವೆ ಎದೆಯ ಹಕ್ಕಿಗಳೆಲ್ಲ ಬೆರಗಾಗಿವೆ.
ಈ ಬದುಕು ಈಗಲೂ ಗಹನ ಕದಳೀವನ. ಇಲ್ಲಿ ಉಸುರುತ್ತಿರುವ ಒಂದೊಂದು ಬಾಳೆ ಗರ್ಭದಲ್ಲಿ ನಿಟ್ಟುಸಿರು....
ಇದು ಸಂಕಲನದ ಶೀರ್ಷಿಕೆಯ ಪದ್ಯವೂ ಹೌದು. ಈ ಸಂಕಲನದಲ್ಲಿ ಡಯಾನಾ ಕುರಿತಾದ ಸೊಗಸಾದ ಪದ್ಯವೂ ಇದೆ.
ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ಅನನ್ಯ ಪ್ರಕಾಶನ ಸ್ಥಾಪಿಸಿ 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಂಕಲನ ...
READ MOREಕವಿ ಹೇಮಾ ಪಟ್ಟಣಶೆಟ್ಟಿ ಅವರ ಬಾಳೆ ಗರ್ಭದಲ್ಲಿ ಕವಿತೆಗಳ ಸಂಕಲನದ ಕುರಿತು ಮಾತುಗಳು.