‘ಭರವಸೆಯ ಹೆಜ್ಜೆಗಳು’ ಕೃತಿಯು ಮಲ್ಲಿಕಾರ್ಜುನ ಬ. ಅರಬಿ ಅವರ ಕವನ ಸಂಕಲನ. ಕೃತಿಗೆ ಬೆನ್ನುಡಿ ಬರೆದಿರುವ ಎಚ್. ಎಸ್. ಸತ್ಯನಾರಾಯಣ ಅವರು, ‘ಮಲ್ಲಿಕಾರ್ಜುನ ಅವನೊಳಗೊಬ್ಬ ಜಾಗೃತ ಕವಿ ಇದ್ದಾನೆ. ಸಮಾಜದ ಎಲ್ಲ ಚಲನಶೀಲತೆಯನ್ನು ಸಂವೇದನಾ ಶೀಲವಾಗಿ ಗಮನಿಸುತ್ತಾ, ಸ್ಪಂದಿಸುತ್ತಾ ಕವಿತೆಗಳ ಹೂ ಅರಳಿಸುವ ಈ ಕವಿಗೆ, ಸಮಾಜದ ಸ್ವಾಸ್ಥ್ಯದ ಬಗ್ಗೆ ತೀವ್ರವಾದ ಕಾಳಜಿಯಿದೆ. ಪ್ರಸ್ತುತ ಸಮಾಜದ ಓರೆ-ಕೊರೆಗಳನ್ನು ತೊಳೆಯುವ ಹಣ-ಗುಣ, ಬಡತನ, ಹಟ-ಚಟ, ನೈತಿಕತೆ ಓಡಕು೦-ದನಿ ಏಕತೆ? ಸ್ವಚ್ಚಭಾರತ ಮತ್ತೆ ಹುಟ್ಟಿ ಬನ್ನಿ ಕವಿತೆಗಳು ಸಾಮಾಜಿಕ ಕಾಳಜಿಯು ಜಗತ್ತನ್ನು ಗಾಢವಾಗಿ ಪ್ರೀತಿಸುವ ಜೀವನಪ್ರೀತಿಗೂ ನೆಲೆಯೊದಗಿಸಿದೆ. ಮಾನವ ಧರ್ಮಕ್ಕಿಂತಲೂ ಮನೋಧರ್ಮ ದೊಡ್ಡದು ಎನ್ನುವುದನ್ನು ಮಲ್ಲಿಕಾರ್ಜುನ ತಮ್ಮ ಕವಿತೆಗಳಲ್ಲಿ ಪ್ರತಿಪಾದಿಸಿದ್ದಾರೆ. ಸಾಮಾನ್ಯ ಸಂಗತಿಗಳಿಗೂ ಕವಿತೆಯ ಪರಿವೇಷ ತೊಡಿಸಿ ಖುಷಿ ಪಡಿಸುವ ಈ ಸಂಕಲನದ ಎಲ್ಲ ಕವಿತೆಗಳು ಅನಾವರಣಗೊಂಡಿವೆ’ ಎಂದು ಪ್ರಶಂಸಿಸಿದ್ದಾರೆ.
ಮಲ್ಲಿಕಾರ್ಜುನ ಪಾಟೀಲ ಅವರು ಮೂಲತಃ ಧಾರವಾಡದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ಪಿಎಚ್ ಡಿ ಮತ್ತು ಹೈದರಾಬಾದಿನ ಇಎಫ್ ಎಲ್ ವಿಶ್ವವಿದ್ಯಾಲಯದಿಂದ ಪಿಜಿಡಿಟಿಇ ಪದವೀಧರರು. ಇಂಗ್ಲೆಂಡಿನ ಆಕ್ಸ್ ಫರ್ಡ್ ನಲ್ಲಿ ಫೆಲೋಶಿಪ್ ಪಡೆದು ಅಧ್ಯಯನ ನಡೆಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಹಾಗೂ ವಿಜಯಪುರ ಮಹಿಳಾ ವಿವಿಯಲ್ಲಿಅಸೋಶಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದು, ಸದ್ಯ ಕರ್ನಾಟಕ ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೇಡಿಯೋ-ಟಿ.ವಿ.ಗಳಲ್ಲಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ವಿದ್ವತ್ ಪೂರ್ಣ ವಿಚಾರಗಳನ್ನು ಮಂಡಿಸಿರುವ ಅವರು ಹಲವು ಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ. ತಮ್ಮ ವೃತ್ತಿಬದುಕಿನೊಂದಿಗೆ ಸಾಹಿತ್ಯಿಕ ಸೇವೆಯನ್ನೂ ಸಲ್ಲಿಸುತ್ತಿರುವ ಅವರು 'ಶಿವನಗೌಡ ಪಾಟೀಲ್' ...
READ MORE