ಸಾಮಾಜಿಕ ಕಳಕಳಿಯುಳ್ಳ ಕವಿ ಸೈಫ್ ಜಾನ್ಸೆ ಕೊಟ್ಟೂರು. ಅವರ ಕವಿತೆಗಳು ಸಾಮಾಜಿಕ ನ್ಯಾಯವನ್ನು ಸಮರ್ಥಿಸುವ, ಜಾತಿ ಧರ್ಮದ ಅನ್ಯಾಯವನ್ನು ಖಂಡಿಸುವ, ನೊಂದವರ ಮನಸ್ಸುಗಳಿಗೆ ದನಿಯಾಗುವ ಸಾಧನಗಳು. ದೇಶ ಕಾಲಗಳನ್ನು ಗ್ರಹಿಸುವ, ಸಮಾನತೆಯ ನಿಲುವನ್ನು ಸಾಧಿಸುವ ಸೈಫ್ ಅವರ ಮನೋಧರ್ಮ ಅವರ ಪ್ರತಿಯೊಂದು ಕವಿತೆಗಳಲ್ಲಿ ಕಾಣುತ್ತದೆ. ನೊಂದವರ ಜೀವನಾಡಿಯಾಗಿರುವ ಇಲ್ಲಿನ ಕವಿತೆಗಳು ಸೈಫ್ ಅವರ ಕಾವ್ಯ ರಚನೆಯ ವಿಸ್ತಾರವನ್ನು ಹೆಚ್ಚಿಸಿವೆ.
ಸೈಫ್ ಜಾನ್ಸೆ ಕೊಟ್ಟೂರು ಎಂತಲೇ ಪರಿಚಿತರಾಗಿರುವ ಆರ್.ಎಸ್. ಸೈಫುಲ್ಲಾ ಅವರು ಜನಿಸಿದ್ದು 1978 ಅಕ್ಟೋಬರ್ 7ರಂದು. ಹುಟ್ಟೂರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರು. ಸ್ನಾತಕೊತ್ತರ ಪದವಿ ಪಡೆದಿರುವ ಇವರ ಪ್ರಸ್ತುತ ಸಂಡೂರು ತಾಲ್ಲೂಕಿನ ಮಲ್ಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದೆಡೆಗಿನ ಒಲವಿನಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಸೈಫ್ ಅಯ್ಯಂಗಾರಿಯ ಹತ್ತು ಪೈಸೆಯ ಬೆಡ್ರು ಇವರ ಚೊಚ್ಚಲ ಕವನ ಸಂಕಲನವಾಗಿದೆ. ಈ ಕವನ ಸಂಕಲನಕ್ಕೆ ಅರಳು ಸಾಹಿತ್ಯ ಪ್ರಶಸ್ತಿ, ದ.ರಾ.ಬೇಂದ್ರೆ ಗ್ರಂಥ ಬಹುಮಾನ ಪುರಸ್ಕಾರಗಳು ದೊರೆತಿವೆ. ಇವರ ಹುಲ್ಲಿಗೆ ಹುಟ್ಟಿದ ಬೀದಿ ಕವನ ಸಂಕಲನ ...
READ MORE