ನೆನಪುಗಳು ಸಾಯುವುದಿಲ್ಲ ಚನ್ನಪ್ಪ ಕಟ್ಟಿ ಅವರ ಕವನ ಸಂಕಲನ. ಬೆನ್ನತ್ತಿ ಕಾಡುವ, ಖುಷಿಕೊಡುವ ನೆನಪುಗಳ ಬೆನ್ನು ಬಿದ್ದ ಕವಿ ನೆನಪುಗಳು ಸಾಯುವುದಿಲ್ಲ ಎಂದು ಮರುಗುತ್ತಾನೆ. ಮತ್ತೆ ನೆನಪುಗಳು ಸಾಯುವುದಿಲ್ಲ ಎಂದು ಸಂತಸ ಪಡುತ್ತಾನೆ. ನೆನಪುಗಳಿಲ್ಲದ ಬದುಕೇ ಇಲ್ಲ ಎಂಬಂತ ವಿಶೇಷ ಕವಿತೆಗಳು ಚನ್ನಪ್ಪ ಅವರ ಈ ಸಂಕಲನದಲ್ಲಿವೆ.
ಯಾವ ನೆನಪಿಗೂ ಸಾವಿರುವುದಿಲ್ಲ ಬದುಕು ನೆನಪು ನೆಪಗಳ ಒಟ್ಟು ಮೊತ್ತವಾಗೇ ಸಾಗುತ್ತದೆ. ಕವಿಗೆ ನೆನಪೆಂಬುದು ಬಹುಮುಖ್ಯ ಕಾವ್ಯ ನೆನಪುಗಳಲ್ಲೇ ರೂಪು ಪಡೆಯುತ್ತದೆ. ಸೂಕ್ಷ್ಮ ಮನಸಿನ ಚನ್ನಪ್ಪ ಅವರು ತಮ್ಮ ನೆನಪುಗಳನ್ನು ಈ ಸಂಕಲನದ ಮೂಲಕ ದಾಖಲಿಸಿದ್ದಾರೆ ಎನ್ನಬಹುದು.
ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹಿರೇಹಾಳ ಗ್ರಾಮದಲ್ಲಿ ಮುಗಿಸಿದ ಅವರು ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವೀರಪುಲಿಕೇಶಿ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಶ್ರೀವೀರಪುಲಿಕೇಶಿ ಪದವಿ ಪೂರ್ವ ಮಹಾವಿದ್ಯಾಲಯ, ಬಾದಾಮಿಯಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದ ಅವರು, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಇಂಗ್ಲಿಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಸಿಂದಗಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ...
READ MORE