‘ಶಬ್ದ ಸೀಮೆಯ ಆಚೆ’ ಕೃತಿಯು ಪೂರ್ಣಿಮಾ ಸುರೇಶ್ ಅವರ ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಕೆ. ಎಸ್. ನಿಸಾರ್ ಅಹಮ್ಮದ್ ಅವರು, ‘ಮೊದಲನೆಯ ಸಂಕಲನದ ಕೆಲವೊಂದು ಕವನಗಳ ಭಾವ ತನ್ಮಯತೆ, ಚಮತ್ಕಾರಿಕ ಮಾತುಗಾರಿಕೆ ಮತ್ತು ಸ್ವಾನುಭವ ಪ್ರೇರಿತ ವಸ್ತುಗಳ ನಿರೂಪಣೆ ನನಗೆ ಬಹಳ ಹಿಡಿಸಿದ್ದವು. ಈ ಕವಿತಾ ಸಂಕಲನದಲ್ಲೂ ಆ ಅಂಶಗಳು ಅಂತರ್ಗತವಾಗಿರುವ ಜೊತೆಗೆ, ವಾಸ್ತವಪ್ರಜ್ಞೆ ಹಾಗೂ ಪೌರಾಣಿಕ ಸಂಗತಿಗಳ ಸಮ್ಮಿಳನವೂ ಒಂದು ಬಗೆಯ ಸ್ಥಾಯಿ ಆಸಕ್ತಿಯಂತೆ ಗೋಚರಿಸುವುದು ಪೂರ್ಣಿಮಾರವರ ವಿಶಿಷ್ಟತೆ ಎನ್ನಿಸುತ್ತದೆ. ಮಾತು ನಿರಾಡಂಬರವಾಗಿದ್ದರೂ ರೂಪಕಗಳ ಬಳಕೆ, ಭಾವದ ಕಾವಿನ ಹಿತ ಮಿತ ಅಭಿವ್ಯಕ್ತಿ ಹಾಗೂ ಸಂವಹನತೆಯಲ್ಲಿ ಸುಭಗತೆ ಮುದ ನೀಡುತ್ತವೆ. ಬಾಲಿಶತನ, ಕುಚೋದ್ಯ ಮತ್ತು ಅಸಂಗತ ವಿಚಾರ ಸರಣಿಗಳು ಇವರಲ್ಲಿ ವರ್ಜ್ಯ. ಈ ಪದ್ಯಗಳಲ್ಲಿ ಹಲವನ್ನು ನಾನು ಓದಿ ಚಪ್ಪರಿಸಿ ಹರ್ಷಿಸಿದ್ದೇನೆ. ಇಲ್ಲಿನ ಕೆಲವು ರಚನೆಗಳ ಸ್ವಾರಸ್ಯವನ್ನು ವಾಚಕರಿಗೂ ಹಂಚಿಕೊಡಲು ಈ ಮುನ್ನುಡಿ ನಿಮಿತ್ತವಾಗುವುದೆಂದು ಭಾವಿಸುತ್ತೇನೆ. ಈಗ ಮೊದಲಿಗೆ 'ಗಂಡಾಗುವುದನ್ನು ಕಲಿತಿಲ್ಲ' ಹಾಗೂ 'ಬೊಚ್ಚು ಬಾಯಿಯ ಅಜ್ಜಿ' ಪದ್ಯಗಳನ್ನು ಪರಿಗಣಿಸಬಹುದು. ನಾವು ಹೆಚ್ಚು ಆಸಕ್ತಿಯನ್ನು ತೋರದ, ಆವಜ್ಞೆಗೆ ಒಳಗಾದ, ಸಾರ್ಥಕ ಹಾಗೂ ನಿಸ್ವಾರ್ಥ ಬದುಕಿನ ಅಜ್ಜಿಯಂದಿರು ಮನೆ ಮನೆಯಲ್ಲೂ ಇದ್ದಾರೆ, ಕುಟುಂಬದ ಒಳಿತಿಗಾಗಿ ಜೀವ ಸವೆಸುವ ಅಂತಹ ಒಬ್ಬ ಅಜ್ಜಿ ಇಲ್ಲಿ ಆತ್ಮೀಯಳಾಗಿ ನಮ್ಮ ನೆನಪುಗಳನ್ನು ಎಚ್ಚರ ಗೊಳಿಸುತ್ತಾಳೆ, “ಬೊಚ್ಚು ಬಾಯಿಯ ಅಜ್ಜಿ' ಕವನದ ವಿಶೇಷತೆಯಾಗಿದೆ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ, ಪೂರ್ಣಿಮಾ ಸುರೇಶ್ ಅವರು ಮೂಲತಃ ಉಡುಪಿ ಜಿಲ್ಲೆಯ ಹಿರಿಯಡಕದವರು. ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಕಿರುತೆರೆ, ನಾಟಕ, ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಇಪ್ಪತ್ತೈದು ವರ್ಷಗಳಿಂದ ತೊಡಗಿಕೊಂಡಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ನಾಟಕದ ಬಿ ಗ್ರೇಡ್ ಕಲಾವಿದೆಯೂ ಆಗಿದ್ದಾರೆ. ಸಂಘಟಕಿ ಹಾಗೂ ನಿರೂಪಕಿಯಾಗಿರುವ ಅವರು ದೇಶವಿದೇಶಗಳಲ್ಲಿ ಪ್ರದರ್ಶನ ಕಂಡಿರುವ ಕನ್ನಡ ಮತ್ತು ಕೊಂಕಣಿ ಭಾಷೆಯ 25ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. ಅವರ ‘ಸತ್ಯನಾಪುರದ ಸಿರಿ’ ನಾಡಿನುದ್ದಕ್ಕೂ ಸುಮಾರು 35 ಪ್ರದರ್ಶನಗಳನ್ನು ಕಂಡಿದೆ. ಕರ್ನಾಟಕದ ಪ್ರಶಸ್ತಿಗಳು : ಗ್ಲೋಬಲ್ ಸಿನಿ ...
READ MORE