ಕನಸು ದೊರೆತ ಮಳಿಗೆ

Author : ಪ್ರತಿಭಾ ಪಾಟೀಲ

Pages 108

₹ 120.00




Year of Publication: 2024
Published by: ನವಿಲುಗರಿ ಪ್ರಕಾಶನ
Address: ಹಾಸನ
Phone: 9740053988

Synopsys

`ಕನಸು ದೊರೆತ ಮಳಿಗೆ’ ಪ್ರತಿಭಾ ಪಾಟೀಲ ಅವರ ಕವನ ಸಂಕಲನವಾಗಿದೆ. ಇದಕ್ಕೆ ರಾಗಂ ಅವರ ಬೆನ್ನುಡಿ ಬರಹವಿದೆ; ಬದುಕು ಬಗೆದಷ್ಟು ಭಿನ್ನ ಅರ್ಥಗಳು, ನಿಲುಕಿಯೂ ನಿಲುಕದ ಸನ್ನಿವೇಶಗಳು, ನಮ್ಮೊಳಗೇ ಹುಟ್ಟಿ ನಮ್ಮವಾಗದ ಭಾವಗಳು, ಕನಸು ಕವಿತೆಗಳು ಬಹುತೇಕ ನಮ್ಮನ್ನು ನಿರಂತರ ಶೋಧಕರಾಗಿ, ಬರಹಗಾರರಾಗಿ ಉಳಿಸಿವೆ. ಬರೆದದ್ದು ಕವಿತೆಯೋ, ಕಥೆಯೋ, ಕಾದಂಬರಿಯೋ ಅದು ನೆಪ ಮಾತ್ರ. ಪ್ರಪಂಚದ ಶ್ರೇಷ್ಠ ಲೇಖಕ ಟಾಲ್ ಸ್ಟಾಯ್ಗೆ ಜೀವನದ ಐವತ್ತು ವರ್ಷಗಳು ಉರುಳಿದ ಮೇಲೆ ಬರಹ ಎಂದರೆ ಏನು? ಎಂದು ಹೊಳೆಯಲು ಪ್ರಾರಂಭವಾಯಿತಂತೆ. ಗೊತ್ತಿರಲಿ, ಇಷ್ಟರೊಳಗೆ ಆತ ತನ್ನ ಬೃಹತ್ ಕಾದಂಬರಿಗಳನ್ನು ಬರೆದು ತೀರಿಸಿದ್ದ. ಹಾಗಿದ್ದರೆ ಈಗ ಬರೆಯುವುದೆಂದರೇನು? ಬದುಕುವುದೆಂದರೇನು? ಎನ್ನುವುದಕ್ಕೆ ಆತ ಕೊಟ್ಟ ಉತ್ತರ my only real reason for living and writing was to make myself perfect. ಇದು ಸಾಧ್ಯವಿಲ್ಲದ್ದು, ಅದು ಅವನಿಗೂ ಗೊತ್ತು. ಆದರೆ ಬದುಕಿಗೊಂದು ನೆಪ ಬೇಕಲ್ಲ. ಕವಯತ್ರಿ ಪ್ರತಿಭಾ ಪಾಟೀಲರ ಪ್ರಸ್ತುತ ಕಾವ್ಯ ಸಂಕಲನ ಇಂತಹದೇ ಒಂದು ನಿರುಪದ್ರವಿ ನೆಪ. ಕಾವ್ಯದ ಕಿರು ಬೆರಳು ಹಿಡಿದು ನಡೆಯುವ ಮಧುರ ಕನಸು, ಮತ್ತೇರಿದ ಕತ್ತಲಲ್ಲೂ ಮತ್ತೇನೋ ಹುಡುಕುವ ಧಾವಂತ, ಮಲ್ಲಿಗೆಯೊಂದಿಗೆ ನಿಮ್ಮ ನೆನಪುಗಳ ಮಡಿಚಿಟ್ಟು ತುಂಬಿಕೊಳ್ಳುವ ಮೌನದ ಮೈ ಸವರುವ ಬಯಕೆ.

About the Author

ಪ್ರತಿಭಾ ಪಾಟೀಲ

ಕವಿ, ಲೇಖಕಿ ಪ್ರತಿಭಾ ಪಾಟೀಲರು ಮೂಲತಃ ಸಾಹಿತ್ಯದ ತವರು ಮನೆ ಎಂದೇ ಖ್ಯಾತಿ ಪಡೆದಿರುವ ಧಾರವಾಡ ನಗರದ ಮನೆ ಮಗಳಾಗಿ, ಗೊಮ್ಮಟ ನಗರಿ ಎಂದೇ ಪ್ರಸಿದ್ದವಾದ ವಿಜಯಪುರ ಜಿಲ್ಲೆಯ ಗೂಗಧಡಿ ಗ್ರಾಮದವರು. ಎಂ.ಎ, ಬಿ.ಇಡಿ. ಪದವಿಧರೆಯಾದ ಶ್ರೀಮತಿ ಪ್ರತಿಭಾ ಪಾಟೀಲ ಅವರು 7 ವರ್ಷಗಳ ಕಾಲ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದು, ಸುಮಾರು 9 ವರ್ಷಗಳಿಂದ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನೇಕ ಕಥೆ, ಕವನ, ಲೇಖನ, ಚುಟುಕುಗಳನ್ನು ಬರೆದಿದ್ದಾರೆ. ಹಾಗೂ ಅನೇಕ ಪುಸ್ತಕಗಳನ್ನು ವಿಮರ್ಶೆ ಕೂಡಾ ಮಾಡಿದ್ದಾರೆ. ಕಾಲೇಜು ದಿನಗಳಿಂದಲೇ ಕವನಗಳನ್ನು ಬರೆಯುವ ಹವ್ಯಾಸ ಹೊಂದಿದ್ದ ಇವರು ಆ ಪ್ರತಿಭೆಯನ್ನು ಈಗಲೂ ...

READ MORE

Related Books