’ಚಂಪಾ’ ಅವರು ತುರ್ತು ಪರಿಸ್ಥಿತಿಯ ನಂತರ ದಿನಗಳಲ್ಲಿ ಪ್ರಕಟಿಸಿದ ಕವಿತೆಗಳ ಸಂಕಲನ ’ಓ ಎನ್ನ ದೇಶ ಬಾಂಧವರೆ’. ಈ ಸಂಕಲನದಲ್ಲಿರುವ ಕವಿತೆಗಳು:
ಓ ಎನ್ನ ದೇಶಬಾಂಧವರೇ, ಅರೆ ಮಾವೋ ಕ್ಯಾ ಹುವಾ, ನಮ್ಮ ಕಮ್ಯುನಿಜಮ್ಮ, ಒಂದಾನೊಂದು ಕಾಲಕ್ಕೆ, ಸಂಧ್ಯಾವಂದನೆ, ಮಂದಿ-ಕನ್ನಡ-ಸಾಹಿತಿ-ಪ್ರಲಾಪ, ಬಂಗಣೀಶೆಟ್ಟಿಯ ಕತೆ, ಅವನು, ಜೋಕು, ಅವರು, ಕವಿತೆ ಅಂದರೆ, ಬುದ್ಧಿ ಜೀವಿಯ ಸಿಟ್ಟು, ಕಾಳೀಭಕ್ತ ಕಾಲಿಗೆ ಬಿದ್ದ, ಗಾಂಧಿ ಗಾಂಧಿ ಗಾಂಧಿ, ಇಂಡಿಯಾದೊಳಗೊಂದು ಧಾರವಾಡ, ಯುವನಾಯಕನಿಗೊಂದು ಪತ್ರ, ಒಬ್ಬ ಅಸಂಬದ್ಧ ಮುದುಕ, ಪಾರೋತಿ ಮಾಡಿದ ಮೂರುತಿ, ಚಂದ್ರಿ, ಸಂಭವಾಮಿ ಯುಗೇ ಯುಗೇ, ಇಂದಿರಾ- ಇಂಡಿಯಾ -ಇಂದಿರಾ, ವಿಚಾರಿಸಿಕೊಳ್ಳುತ್ತಾರೆ ಒಂದು ದಿನ
ಹಿರಿಯ ವಿಮರ್ಶಕ ಡಿ. ಆರ್. ನಾಗರಾಜ ಅವರು ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ-
ಚಂದ್ರಶೇಖರ ಪಾಟೀಲರು, 'ಊರೇ ಉರಿದು ಹೋಗುತ್ತಿರುವಾಗ ಗುಲಾಬಿಯ ಬಗ್ಗೆ ಚಿಂತೆ? ಮಾಡದೆ ಮನುಷ್ಯರ ಬಗ್ಗೆ, ಸಮಾಜದ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಾ ನಮ್ಮ ಈ ಹೊತ್ತಿನ ಪ್ರಮುಖ ಕವಿ ಆಗುತ್ತಾರೆ; ಸಮಾಜ ಬದಲಾವಣೆಯ ಬಗ್ಗೆ ವಂಖ್ಯ ಒತ್ತು ಹಾಕುತ್ತಾರೆ. ಈ ಅಂಶ ನಮ್ಮ ಕನ್ನಡ ಕಾವ್ಯದ ಮುಂದಿನ ಬೆಳವಣಿಗೆಯ ದೃಷ್ಟಿಯಿಂದ ಕೂಡಾ ಅತ್ಯಂತ ವಂಖ್ಯವಾದದ್ದು ; ಚರಿತ್ರೆಯ ದಿಕ್ಕು ತನ್ನೊಂದಿಗೆ ಸೃಷ್ಟಿಶೀಲತೆಯನ್ನು ಕರೆದೊಯ್ಯುತ್ತಿರುವುದನ್ನು ಹೇಳುವಂಥದು....’
ಚಂದ್ರಶೇಖರ ಪಾಟೀಲರು ಲೇಖಕರ ಮಾತಿಗನಲ್ಲಿ ಹೀಗೆ ಬರೆದಿದ್ದಾರೆ.
ಈ ಸಂಕಲನದ ಕೊನೆಯ ಕವನ ಗ್ವಾಟೆಮಾಲಾದ Otto Rene Castillo ಕವಿಯ ಕವನವೊಂದರ ಅನುವಾದ. ನಮ್ಮ ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಇಂಥ ದನಿಗೆ ಬಹಳ ಕಿಮ್ಮತ್ತಿದೆ. ಈ ಕವಿ ಒಬ್ಬ ವಕೀಲ, ಕ್ರಾಂತಿಕಾರಿ. ಮಾರ್ಚ 1967ರಲ್ಲಿ ಮಿಲಿಟರಿ ಸರ್ವಾಧಿಕಾರಿಗಳಿಂದ ಅವನ ಕೊಲೆಯಾಯಿತು. ಬದುಕಿನಲ್ಲಿ ಯಾವುದೇ ಮೂಲಭೂತ ಹೋರಾಟವಾಗಲಿ, ಏರಿಳಿತವಾಗಲಿ ಇಲ್ಲದ ಇಂಗ್ಲಿಷ್' ಅಥವಾ 'ಅಮೇರಿಕನ್' ಸೃಷ್ಟಿಶೀಲ ಸಾಹಿತ್ಯದ ಜಾಡ್ಯ ದಿಂದ ನಮ್ಮ ಸಾಹಿತ್ಯ ಮುಕ್ತವಾದಷ್ಟೂ ಒಳ್ಳೆಯದು. ಅಭಿವೃದ್ಧಿ ಶೀಲ, ಸಮಾಜ ವಾದಿ ರಾಷ್ಟ್ರಗಳ ಹೋರಾಟ-ಪ್ರತಿಭಟನೆಗಳ ಗಂಡು ಸಾಹಿತ್ಯ ನಮ್ಮಲ್ಲಿ ಪ್ರವೇಶ ಪಡೆಯಬೇಕು. ಅಂಥ ಸಮಯ ಈಗ ಬಂದಿದೆ.
'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...
READ MORE