ಗೀತಾಂಜಲಿ

Author : ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)

Pages 144

₹ 50.00




Year of Publication: 2004
Published by: ತನು ಮನು ಪ್ರಕಾಶನ
Address: ನಂ.1267, 1 ನೇ ಕ್ರಾಸ್, 2 ನೇ ಹಂತ, ಶ್ರೀರಾಮಪುರ 2 ನೇ ಹಂತ, ವಿವೇಕಾನಂದ ವೃತ್ತದ ಹತ್ತಿರ, ಮೈಸೂರು - 570023
Phone: 9448056562

Synopsys

'ಗೀತಾಂಜಲಿ’ ಸಿ.ಪಿ .ಕೆ ಅವರ ಕವನಸಂಕಲನವಾಗಿದೆ. `ರವೀಂದ್ರನಾಥ ಠಾಕೂರ್ ಅವರ ಗೀತಾಂಜಲಿ ಜಗತ್ತೇ ಮೆಚ್ಚಿರುವ ಕವನ ಸಂಕಲನ, ದೇಶವಿದೇಶಗಳ ಬಹುಭಾಷೆ ಗಳಿಗೆ ಅನುವಾದಗೊಂಡಂತೆ ಕನ್ನಡದಲ್ಲೂ ಹಲವಾರು ಭಾಷಾಂತರಗಳು ಬಂದಿವೆ. ಸ್ವಚ್ಛ ಬದುಕಿನ ಕಡೆಗೆ ಸದ್ಭಾವನೆಯಿಂದ ಮುನ್ನಡೆಯುತ್ತ ಎತ್ತರದ ಸ್ಥಾನ ಗಳಿಸಬೇಕೆಂಬ ಹಂಬಲ, ತುಡಿತಗಳನ್ನು ಅವರ ಕವನಗಳಲ್ಲಿ ಕಾಣಬಹುದು.

About the Author

ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)
(08 April 1939)

ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು.  ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು.  1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ...

READ MORE

Reviews

ಹೊಸತು - ಮೇ -2005

`ರವೀಂದ್ರನಾಥ ಠಾಕೂರ್ ಅವರ ಗೀತಾಂಜಲಿ ಜಗತ್ತೇ ಮೆಚ್ಚಿರುವ ಕವನ ಸಂಕಲನ, ದೇಶವಿದೇಶಗಳ ಬಹುಭಾಷೆ ಗಳಿಗೆ ಅನುವಾದಗೊಂಡಂತೆ ಕನ್ನಡದಲ್ಲೂ ಹಲವಾರು ಭಾಷಾಂತರಗಳು ಬಂದಿವೆ. ಸ್ವಚ್ಛ ಬದುಕಿನ ಕಡೆಗೆ ಸದ್ಭಾವನೆಯಿಂದ ಮುನ್ನಡೆಯುತ್ತ ಎತ್ತರದ ಸ್ಥಾನ ಗಳಿಸಬೇಕೆಂಬ ಹಂಬಲ, ತುಡಿತಗಳನ್ನು ಅವರ ಕವನಗಳಲ್ಲಿ ಕಾಣಬಹುದು. “ಎಲ್ಲಿ ಸುವಿಚಾರ ನಿರ್ಮಲ ಜಲದೊಸರು ಹರಿದು ಕಾಳು ರೂಢಿಯ ಮರಳೊಳಿಂಗಿ ಕೆಡದಲ್ಲಿ'' ಅಂಥ ರಾಜ್ಯದಲ್ಲಿ ತಾನು ನೆಲೆಸುವ ಬಯಕೆ ಮತ್ತು ತಲೆಯೆತ್ತಿ ನಿಲ್ಲಬೇಕೆಂಬ ಪಾಠವನ್ನು ಕಲಿಸಿದ ಠಾಕೂರ್ ನಿಸ್ಸಂಶಯವಾಗಿ ಅಗ್ರಮಾನ್ಯ ಕವಿ. ಅವರ ಪದ್ಯಗಳು ಹಾಡಲಷ್ಟೇ ಅಲ್ಲ; ಅಧ್ಯಯನ ಚಿಂತನಗಳಿಗೂ ಯೋಗ್ಯ. ಪದಗಳ ನಡುವೆ ಎಲೆಮರೆಯಂತಿರುವ ಕರೆ-ಹಾರೈಕೆ - ಆಶಯಗಳನ್ನು ತಿಳಿಯಲು ನಮ್ಮ ಒಳಗಣ್ಣು ತೆರೆದು ಅವುಗಳನ್ನೋದಬೇಕು. ನೂರ ಮೂರು ಕವನಗಳ ಭಾವಾನುವಾದ.

Related Books