ಪ್ರಭಾಕರ ಬಿಳ್ಳೂರು ಅವರು ಸಂಪಾದಿಸಿದ ಕವನ ಸಂಕಲನಗಳ ಕೃತಿ-ಸಿಂಪೆಯೊಡೆದ ಮುತ್ತುಗಳು. ಉದಯೋನ್ಮುಖ ಲೇಖಕ-ಕವಿಗಳ ಭಾವಾಭಿವ್ಯಕ್ತಿಗೆ ಉತ್ತಮ ವೇದಿಕೆ ಕಲ್ಪಿಸುವ ಸದುದ್ದೇಶದೊಂದಿಗೆ ಪ್ರಭಾಕರ ಬಿಳ್ಳೂರು ಅವರು ವಿವಿಧೆಡೆಯಿಂದ ಕವನಗಳನ್ನು ಆಹ್ವಾನಿಸಿ, ಸಂಗ್ರಹಿಸಿ ಹಾಗೂ ಸಂಪಾದಿಸಿದ್ದಾರೆ. ಇಲ್ಲಿಯ ಕವನಗಳಿಗೆ ಸ್ಪಂದಿಸಿದ ಹಿರಿಯ ಸಾಹಿತಿ ಡಾ. ಜಯದೇವಿ ತಾಯಿ ಲಿಗಾಡೆ ‘ನವೋದಿತ ಕವಿತೆಗಳ ಓದು ಇನ್ನೂ ಬಲಿತು ಅನುಭವವು ವ್ಯಾಪ್ತಿಗೊಂಡು, ಹೊಸ ಪ್ರಜ್ಞೆಯೊಂದಿಗೆ ಕಾವ್ಯ ಪ್ರಪಂಚದಲ್ಲಿ ಹೊಸ ಆಯಾಮ ಕಂಡುಕೊಳ್ಳಲಿ’ ಎಂದು ಹಾರೈಸಿದ್ದಾರೆ. ಸಂಕಲನದಲ್ಲಿ 49 ಕವಿಗಳ 49 ಕವಿತೆಗಳಿವೆ.
ಪ್ರಭಾಕರ ಬಿಳ್ಳೂರು ಅವರು ಬೆಳಗಾವಿ ಜಿಲ್ಲೆಯ ಅಥಣಿಯವರು (ಜನನ: 01-12-1938) ಅಥಣಿಯಲ್ಲೇ ಪಿಯುಸಿ ನಂತರ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಎಂಎ. ತದನಂತರ ಬಿ.ಇಡಿ ಪದವಿ ಪಡೆದರು. ಶಿರುಗುಪ್ಪಿಯ ಶ್ರೀ ಸಿದ್ದೇಶ್ವರ ವಿದ್ಯಾಲಯದ ಮುಖ್ಯೋಪಾಧ್ಯಯರಾಗಿ ನಿವೃತ್ತರಾದರು. ಇವರ ಮೊದಲ ನಾಟಕ-ಶ್ರೀ ಧರ್ಮ ರಕ್ಷಕ ಮಹಾವೀರ’. ಮೊದಲ ಕವನ ಸಂಕಲನ-ತಿಳಿನೀರು. ಪೂಜ್ಯ ಮಾತಾಜಿ ಪ್ರಕಾಶನ ಸಂಸ್ಥೆಯೊಂದನ್ನುಸ್ಥಾಪಿಸಿದ್ದರು. ಮಿರ್ಜಿ ಅಣ್ಣಾರಾಯರ ಚಂದ್ರಗಂಗಾ ಜ್ಞಾನಪೀಠ ಪ್ರಕಾಶನವು ಇವರ ‘ತಿಳಿನೀರು’ ಕವನ ಸಂಕಲನವನ್ನು ಪ್ರಕಟಿಸಿತ್ತು. ಸಿಂಪಿಯೊಡೆದ ಮುತ್ತುಗಳು-ಎಂಬುದು ಇವರ ಮತ್ತೊಂದು ಕವನ ಸಂಕಲನ. 2019ರ ಫೆಬ್ರವರಿ 13 ರಂದು ನಿಧನರಾದರು. ...
READ MORE