ರಚ್ಚೆ ಹಿಡಿದ ಭಾವಗಳು ಮಾತಿಗಿಳಿದಾಗ

Author : ವೆಂಕಟೇಶ್, ಎಸ್. ಆರ್

Pages 80

₹ 80.00




Year of Publication: 2021
Published by: ಹೆಗ್ಗದ್ದೆ ಪ್ರಕಾಶನ
Address: ಬೆಂಗಳೂರು-560084

Synopsys

ವೆಂಕಟೇಶ್ ಎಸ್. ಆರ್ ಅವರ ‘ ರಚ್ಚೆ ಹಿಡಿದ ಭಾವಗಳು ಮಾತಿಗಿಳಿದಾಗ’ ಕೃತಿಯು ಕವನ ಸಂಕಲನವಾಗಿದ್ದು, ನಿರ್ದಿಷ್ಟ ಕೇಂದ್ರಗಳನ್ನು ಹೊಂದಿದೆ. ಹೆಣ್ಣು ಮತ್ತು ಪ್ರಕೃತಿಯು ಕವನ ಸಂಕಲನದ ಎರಡು ಮುಖ್ಯ ಕಾಳಜಿಗಳು. ವ್ಯವಸ್ಥೆ ಮತ್ತು ಶೋಷಣೆ ಕೂಡ ಇವರ ಇನ್ನೊಂದು ಕಾಳಜಿಯಾಗಿದೆ. ಬಹುಪಾಲು ಕವಿತೆಗಳು ಮೊದಲೆರಡು ವಸ್ತುಗಳ ಸುತ್ತಲೇ ಇವೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಬೇಲೂರು ರಘುನಂದನ್, 'ರಚ್ಚೆ ಹಿಡಿದ ಭಾವಗಳು ಮಾತಿಗಿಳಿದಾಗ' ಎಂಬ ಕವಿತಾಸಂಕಲನ ಹೊಸತಲೆಮಾರಿನ ಕನ್ನಡ ಕಾವ್ಯದ ದಾರಿಗಳಲ್ಲಿ ಒಂದು ಭಿನ್ನ ದಾರಿ. ವೆಂಕಟೇಶ್ 'ಕಾವ್ಯದ ಹುಳು' ಎಂಬ ಸಾಂಸ್ಕೃತಿಕ ಸಾಂಗತ್ಯದ ಜೊತೆಗೆ ಕಾವ್ಯವನ್ನು ಪ್ರೀತಿಸುವ, ಮೋಹಿಸುವ ಮತ್ತು ಜೀವಿಸುವ ಭರವಸೆಯ ಕವಿ. ಬಾಲ್ಯ, ತಾರುಣ್ಯ, ಕುಟುಂಬ, ಸಮಾಜ ಮತ್ತು ಮನಸ್ಸು ಜೊತೆಗೆ ನವಿರಾದ ಪ್ರೇಮವನ್ನು ಹದವಾಗಿ ಕಾವ್ಯ ಸ್ಪರ್ಶಕ್ಕೆ ಹೊಂದಿಸುವ ಕಸುಬುಗಾರಿಕೆಯ ಹೊಸತರಲ್ಲಿ ಕವಿ ವೆಂಕಟೇಶ್ ಪ್ರಾಮಾಣಿಕರಾಗಿದ್ದರೆ, "ಬಹುಶಃ ಅಪ್ಪಳಿಸಿದ ಅಲೆಗಳಿಗಷ್ಟೇ ಗೊತ್ತು ಇಬ್ಬರ ಬೆರಳು ಮಿಂದು ಒಂದಾಗಿದ್ದು" ಎಂಬ ಸಾಲುಗಳಲ್ಲಿ ಕಾವ್ಯಸತ್ವವನ್ನು ಹಿಡಿಯಬಲ್ಲ ಕವಿ ತನ್ನ ಹುಡುಕಾಟಗಳಿಗೆ, ಅಭದ್ರತೆಗಳಿಗೆ ಮತ್ತು ಅಭಿವ್ಯಕ್ತಿಸಲೇ ಬೇಕಾದ ಭಾವಭಿತ್ತಿಗಳಿಗೆ ಕಾವ್ಯಮಾರ್ಗವನ್ನೇ ಆಲಿಸಿಕೊಂಡಿದ್ದಾರೆ ಎಂಬುದು ಅವರ ಕವಿತೆಗಳೇ ಸಾಬೀತುಪಡಿಸುತ್ತವೆ. ಸಾಮಾಜಿಕ ಸಂಕಟ ಮತ್ತು ಜಾಗತಿಕ ವಾಸ್ತವಗಳನ್ನು ಸಲೀಸಾಗಿ ತಮ್ಮ ಕವಿತೆಗಳ ಮೂಲಕ ವೆಂಕಟೇಶ್ ತಲುಪಿಸುತ್ತಾರೆ. ಸಂಗಾತ, ಪ್ರೇಮ-ಕಾಮ ನಿವೇದನೆಗಳಿಗೂ ಮಾತು ಕೊಡುವ ಈ ಕವಿಯ ಚೊಚ್ಚಲ ಕವನ ಸಂಕಲನ ಭರವಸೆಯನ್ನು ಹುಟ್ಟಿಸುತ್ತದೆ. ರಜ್ಞೆ ಹಿಡಿದ ಭಾವಗಳು ಕಾವ್ಯಾಭಿವ್ಯಕ್ತಿಯ ಅಂತರಂಗದ ಮಾತುಗಳಾಗುತ್ತಲೇ ಬಹಿರಂಗದಲ್ಲಿ ಕಲಾಕೃತಿಯಾಗಲು ಹವಣಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ. 

About the Author

ವೆಂಕಟೇಶ್, ಎಸ್. ಆರ್

ಲೇಖಕ ವೆಂಕಟೇಶ್, ಎಸ್. ಆರ್ ಅವರು ತುಮಕೂರು ವಿಶ್ವ ವಿದ್ಯಾಲಯದಿಂದ (ಕನ್ನಡ) ಎಂ.ಎ. ಪದವೀಧರರು. ಓದು - ಬರಹ,ಕಾವ್ಯ,ಫೋಟೋಗ್ರಫಿ, ಕ್ರೀಡೆ, ಸಾಹಿತ್ಯದ ಬಳಗ ಕಟ್ಟುವುದು ಇವರ ಅಭಿರುಚಿ. 2014 ನೇ ಸಾಲಿನ ದ.ರಾ.ಬೇಂದ್ರೆ ಕಾವ್ಯ ಕೂಟ, ಬೇಂದ್ರೆ ಸ್ಮತಿ ಲೇಖನ ಸ್ಪರ್ಧೆ-7 ರಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾರೆ. ‘ಕಾವ್ಯದಹುಳು -ಕಾವ್ಯ ಕಟ್ಟೋಣ ಬನ್ನಿ’ ಸಾಹಿತ್ಯದ ಬಳಗವನ್ನು ಕಟ್ಟಿ ಸಾಹಿತ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ತುಮಕೂರಿನಲ್ಲಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ರಚ್ಚೆ ಹಿಡಿದ ಭಾವಗಳು ಮಾತಿಗಿಳಿದಾಗ. ...

READ MORE

Related Books