ತಾವು ಕಂಡ ನಿತ್ಯದ ಅನುಭವಗಳ ಕಲೆಗೆ ಅಕ್ಷರ ರೂಪ ನೀಡಿ ಕವಿತೆಯಾಗಿಸಿದ್ದಾರೆ ಗಮಕಿ ಆರ್. ಶಂಕರನಾರಾಯಣ್ ಹಾಗೂ ದಿಬ್ಬೂರು ಶ್ರೀನಿವಾಸರಾಯರು. ‘ಹಂಬಲ, ಭಿನ್ನಹ, ಬಾಲರಭಿಲಾಷೆ,ತರುಣರ ಹಾರೈಕೆ, ವೀಣಾಪಾಣಿ, ಮದುಮಕ್ಕಳು, ಆದರ್ಶ ಶಿಲ್ಪಿ, ಬೇಲೂರಿನ ಶಿಲ್ಪಕಲೆ, ನೌಕಾ ಜೀವನ, ಉಗಿ ಬಂಡಿ, ಸುಗಂಧ ಪುಷ್ಟ, ವಿಜಯ ದುಂದುಭಿ’ ಮುಂತಾದ 47ಕವಿತೆಗಳು ಈ ಸಂಕಲನದಲ್ಲಿ ಅಡಕವಾಗಿವೆ.
ಆರ್. ಶಂಕರನಾರಾಯಣ್ ಅವರು ಹುಟ್ಟೂರು ಆನೇಕಲ್ ತಾಲೂಕು ರಾಚಮಾನಹಳ್ಳಿ. 1979ರಲ್ಲಿ ಕನ್ನಡ ಎಂ.ಎ. ಪದವಿ ಪೂರೈಕೆ. ದೂರವಾಣಿ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಣೆ. ಸಂಗೀತ ಕನ್ನಡ ಸಾಹಿತ್ಯ ಮತ್ತು ಗಮಕ ಕಲೆಗೆ ಅವಿರತವಾದ ಸೇವೆ ಸಲ್ಲಿಸುವುದು ಅವರ ಬದುಕಿನ ಗುರಿಯಾಗಿತ್ತು. ಸಂಗೀತ ಕನ್ನಡ ಸಾಹಿತ್ಯ ಮತ್ತು ಗಮಕ ಕಲೆಗೆ ಸಂಬಂಧಿಸಿದಂತೆ ‘ಆಧಿತ್ಯ ಹೃದಯಂ, ಶ್ರೀ ಶಂಕರ ಬೋಧಾಮೃತ, ಪರಿಣಯ ಪ್ರಬಂಧ, ಚಿತ್ರಪಲ್ಲವ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE