ಒಡಲೊಳಗಿನ ಕಡಲು

Author : ನಾಗೊಂಡಹಳ್ಳಿ ಸುನಿಲ್

Pages 75

₹ 110.00




Year of Publication: 2021
Published by: ಭುವನಾಕ್ಷರ ಪ್ರಕಾಶನ
Address: ಮಾಲೂರು

Synopsys

ಕವಿ ನಾಗೊಂಡಹಳ್ಳಿ ಸುನಿಲ್ ಅವರ ಕವನ ಸಂಕಲನ ಒಡಲೊಳಗಿನ ಕಡಲು. ಲೇಖಕ ಎಚ್ ಎಸ್ ಸತ್ಯನಾರಾಯಣ ಅವರು ಕೃತಿಯ ಮುನ್ನುಡಿಯಲ್ಲಿ ಹೇಳಿರುವಂತೆ, ನನ್ನಮ್ಮ, ನನ್ನಪ್ಪ, ಅಣ್ಣನಿಗೊಂದು ಪದ್ಯ, ಸದ್ಗುರು ಮುಂತಾದ ಕವಿತೆಗಳು ಬದುಕನ್ನು ರೂಪಿಸಲು ಶ್ರಮಿಸಿದ ಜೀವಗಳಿಗೆ ಸಲ್ಲಿಸಿದ ಕೃತಜ್ಞತೆಯಂತಿವೆ. ಲೋಕದ ಅಪಮಾನ, ಆವರಿಸಿಕೊಂಡ ಬಡತನ, ಗಂಡನ ಸಿಟ್ಟು, ಮುಂತಾದವನ್ನೆಲ್ಲ ತಾಳಿಕೊಂಡು, ಕೂಲಿ-ನಾಲಿ ಮಾಡುತ್ತಾ ಸಂಪಾದಿಸಿದ್ದು ಅಪವ್ಯಯವಾಗದಂತೆ ಬಿಂದು ಬಿಂದುವನ್ನೂ ಕೂಡಿಡುವ ಇರುವೆಯಂತ ತಾಯಿ ಈ ಕವಿಯ ಕಣ್ಣಿಗೆ ಚಳಿ, ಮಳೆ, ಗಾಳಿ, ಬಿಸಿಲನ್ನು ಎದುರಿಸಿ ಸಿಹಿ ಫಲವನ್ನು ನೀಡುವ ಮಾವಿನ ಮರದಂತೆ ಗೋಚರವಾದರೆ, ನಗುವವರ ಮುಂದೆ ಎಡವಿ ಬೀಳಬಾರದೆಂಬ ಸ್ವಾಭಿಮಾನದ ಅಪ್ಪ ಜೀವ ಕಾರುಣ್ಯದ ಕಡಲಾಗಿ ಕಾಣುತ್ತಾನೆ. ಇಂಥ ಆತ್ಮಾಭಿಮಾನದ ಜೀವಗಳಾದ ಅಪ್ಪ-ಅಮ್ಮನ ಜೊತೆಗೆ ಅಣ್ಣನ ಕಾಳಜಿಯೂ ಸೇರಿದೆ. ಸದಾ ಹಿತವನ್ನೇ ಬಯಸಿ, ಪ್ರೋತ್ಸಾಹಿಸಿ ಅಣ್ಣನ ಬೆವರಿನ ಶ್ರಮಕ್ಕೆ ಕವಿ ಕೃತಜ್ಞತೆಯಿಂದ ನಮಿಸಿ, ಮುಂದೆ ಆ ಬಗೆಯ ಎಲ್ಲಾ ಜವಾಬ್ದಾರಿಗಳ ನಿರ್ವಹಣೆಯಲ್ಲಿ ತಮ್ಮ ಹೆಗಲನ್ನೂ ಕೊಡುವ ಭರವಸೆ ನೀಡಿರುವುದು ಮುಖ್ಯ. ಬದುಕಿನುದ್ದಕ್ಕೂ ಆವರಿಸಿಕೊಂಡ ನಾನಾ ಬಗೆಯ ಕಾರ್ಪಣ್ಯಗಳ ನಡುವೆಯೂ ತಮ್ಮ ವ್ಯಕ್ತಿತ್ವವನ್ನು ರೂಪಿಸಿದ ತಂದೆ-ತಾಯಿ, ಅಣ್ಣನ ಬಗ್ಗೆ ತೋರಿರುವ ಈ ಬಗೆಯ ಸೌಜನ್ಯ, ವಿನಯ ಮತ್ತು ಕೃತಜ್ಞತೆಗಳೆಲ್ಲವೂ ನಮ್ಮ ಯುವ ತಲೆಮಾರಿಗೆ ಮಾದರಿಯಾಗಬೇಕು. ಪಾಠ ಹೇಳಿದ ಗುರುಗಳ ಕುರಿತಾಗಿಯೂ ಇಂಥದ್ದೇ ಗೌರವಾದರಗಳು ವಿವರವಾಗಿ ಅನಾವರಣಗೊಂಡಿದೆ. ಈಗ ತಾವೂ ಒಬ್ಬ ಅಧ್ಯಾಪಕರಾಗಿರುವುದರಿಂದ ಈ ಕವಿ ವಿದ್ಯಾರ್ಥಿಗಳಿಗೆ 'ಅಂಕಗಳೇ ಭವಿಷ್ಯವಲ್ಲ' ಎಂಬ ತಿಳುವಳಿಕೆ ನೀಡಲು ಮುಂದಾಗಿದ್ದಾರೆ. ಸಂಕಷ್ಟಗಳ ನಡುವೆಯೂ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಕನಸು ಕಾಣುವುದು, ಆ ಕನಸ್ಸನ್ನು ಸಾಕಾರಗೊಳಿಸಲು ಶ್ರಮಿಸುವುದು ಎಷ್ಟು ಮುಖ್ಯ ಎಂಬುದನ್ನು ಸ್ವಾನುಭಾವದಿಂದ ಬಲ್ಲವರಾದ್ದರಿಂದ ಇಂತಹ ತಿಳುವಳಿಕೆಯ ಮಾತುಗಳಿಗೆ ಅರ್ಥ ಮತ್ತು ಸತ್ವ ಎರಡೂ ಮೇಳೈಸಿರುವುದನ್ನು ಮೆಚ್ಚಲೇಬೇಕು.

About the Author

ನಾಗೊಂಡಹಳ್ಳಿ ಸುನಿಲ್
(30 July 1992)

ನಾಗೊಂಡಹಳ್ಳಿ ಸುನಿಲ್ ಅವರು ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆಯ ನಾಗೊಂಡಹಳ್ಳಿ ಗ್ರಾಮದಲ್ಲಿ ಚನ್ನಪ್ಪ ಮತ್ತು ಶಾಂತಮ್ಮ ಅವರ ದಂಪತಿಗಳ ಮಗನಾಗಿ ಕೃಷಿಕ ಕುಟುಂಬದಲ್ಲಿ 30/07/1992 ರಂದು ಜನಿಸಿದರು. ಎಂ.ಎ, ಡಿ.ಪಿಜಿ ಬಿ.ಇಡಿ, ಪದವೀಧರರಾದ ಇವರು ಪ್ರಸ್ತುತ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಡಲೊಳಗಿನ ಕಡಲು, ಕ್ರಷ್ ಕವಿತೆಗಳು ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಮಾಲೂರು, ಕೋಲಾರ, ಬಂಗಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳು ಮತ್ತು ರಾಜ್ಯಾದ್ಯಂತ ಅನೇಕ ಕವಿಗೋಷ್ಠಿಗಳು ಹಾಗೂ ಹಲವಾರು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುತ್ತಾರೆ. ಕರ್ನಾಟಕ ಸಾಹಿತ್ಯ ...

READ MORE

Related Books