ಮೀನುಗಾರನ ಮೈನಕ್ಕಿ

Author : ಪ್ರಹ್ಲಾದ ಡಿ.ಎಂ.

Pages 86

₹ 70.00




Year of Publication: 2019
Published by: ತೇಜು ಪ್ರಕಾಶನ
Address: ಸುಟ್ಟ ಕರ್ನಾರಹಟ್ಟಿ, ಹೂಡೇಂ ಪೋಸ್ಟ್, ಕೂಡ್ಲಿಗಿ ತಾಲ್ಲೂಕು, ಬಳ್ಳಾರಿ ಜಿಲ್ಲೆ-583218
Phone: 9019710340

Synopsys

ಯುವ ತಲೆಮಾರಿನ ಯುವ ಕವಿ ಪ್ರಹ್ಲಾದರ ’ಮೀನುಗಾರನ ಮೈನಕ್ಕಿ’ ಕವನ ಸಂಕಲನ ಭಿನ್ನ ಪರಿಸರಗಳ ಮಧ್ಯೆ ಹುಟ್ಟಿಕೊಳ್ಳುತ್ತಿರುವ ಇಂದಿನ ಕಾವ್ಯ ಸಂವೇದನೆಯ ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತಿರುವುದರ ಪ್ರಯತ್ನವಾಗಿದೆ. ಈ ಕವನ ಸಂಕಲನದ ಕೆಲವು ಪದ್ಯಗಳು ಪ್ರಾಸ, ಏಕತಾನತೆಯ ಕಡೆ ವಾಲಿದ್ದರೂ ಅದರಿಂದ ಬಿಡಿಸಿಕೊಳ್ಳುವ ಸಾಧ್ಯತೆಗಳನ್ನು ಪ್ರಹ್ಲಾದ ಅವರು ಕವನಗಳಲ್ಲಿಯೇ ತೋರಿಸಿದ್ದಾರೆ. ಈ ಕವನ ಸಂಕಲನದ ಒಂದು ಕವಿತೆ:

ನನ್ನ ಹಡೆದವ್ವ ಕಾದಿಹಳು ಬಾಗಿಲಲ್ಲಿ

ಮೊರದಲ್ಲಿ ತುಂಬಿಹಳು ಕಾಳುಕಡಿಯ

ಕೈಯಲ್ಲಿ ಹಿಡಿದಿಹಳು ಕಾಲಿಗೆ

ಎರೆಯಲು ನೀರು

ಸಿರಿಗಂಧದ ಕಡ್ಡಿ ಹಿಡಿದು 

About the Author

ಪ್ರಹ್ಲಾದ ಡಿ.ಎಂ.
(14 March 1993)

ಲೇಖಕ ಪ್ರಹ್ಲಾದ ಡಿ.ಎಂ. ಅವರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ (ಜನನ: 1993ರ ಮಾ.14 ) ಸುಟ್ಟ ಕರ್ನಾರಹಟ್ಟಿಯವರು. ಗ್ರಾಮದಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ, ನಂತರ ಮೊಳಕಾಲ್ಮೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ.ಪದವೀಧರರು. ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ ವಿಶ್ವವಿದ್ಯಾಲಯ ಹಂಪಿ ಜಾನಪದ ಅಧ್ಯಯನ ವಿಭಾಗದಲ್ಲಿ "ಬುಡಕಟ್ಟು ಸಮುದಾಯದ ಕಂಪಳದೇವರು: ಸಾಂಸ್ಕೃತಿಕ ಸಂಕಥನ" ವಿಷಯದ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ’ಮೀನುಗಾರನ ಮೈನಕ್ಕಿ’ ಇವರ ಪ್ರಥಮ ಕವನ ಸಂಕಲನ.  ಅನುಸೃಷ್ಟಿ (ಲೇಖನಗಳ  ಸಂಪಾದಿತ ಕೃತಿ) ...

READ MORE

Related Books