ಲೇಖಕ ಸಿಡ್ನಿ ಶ್ರೀನಿವಾಸ್ ಅವರು ಬರೆದ ಕಥೆಗಳ ಸಂಕಲನ-ಅಳಿಯಲಾರದ ನೆನಹು. ಸಿಡ್ನಿ ಹೇಳಿದ ಕಥೆಗಳು ಎಂಬುದು ಈ ಕೃತಿಗೆ ಬರೆದ ಉಪಶೀರ್ಷಿಕೆ. ಆಸ್ಟ್ರೇಲಿಯಾದ ಜಾನಪದ ಕಥೆಗಳಣ್ನು ಸಂಪಾದಿಸಿ, ಅನುವಾದಿಸಿದ ಖ್ಯಾತಿಯ ಲೇಖಕರು, ಆಸ್ಟ್ರೇಲಿಯಾ ವಾಸ ಅನುಭವದ ಹಿನ್ನೆಲೆಯಲ್ಲಿ ವಿಶಿಷ್ಟ ದೃಷ್ಟಿಕೋನದೊಂದಿಗೆ ಕಥೆಗಳನ್ನು ರಚಿಸಿದ್ದು, ಸಂವೇದನಾಶೀಲ ಗುಣದಿಂದಾಗಿ ಓದುಗರ ಗಮನ ಸೆಳೆಯುತ್ತವೆ. . ಆಸ್ಟ್ರೇಲಿಯಾ ದೇಶದ ಸಂಸ್ಕೃತಿ-ಸಾಮಾಜಿಕತೆಯನ್ನು ತಿಳಿಯಲು ಸಹ ಇಲ್ಲಿಯ ಕಥೆಗಳು ಹತ್ತು ಹಲವು ಸುಳಿಹುಗಳನ್ನು ನೀಡುತ್ತವೆ.
ಸಿಡ್ಡಿ ಶ್ರೀನಿವಾಸ ಅವರು ಬೆಂಗಳೂರಿನವರು. ಇವರ ಮೂಲ ಹೆಸರು- ಕರ್ಕೆನಹಳ್ಳಿ ಶ್ರೀನಿವಾಸ. ಸದ್ಯ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿದ್ದಾರೆ. ಅಲನ್ ಟೂರಿಂಗ್ ಫೋರ್ಡ್, ಅಲ್ಬರ್ಟ್ ಐನ್ ಸ್ಟಿನ್, ಐಸಾಕ್ ನ್ಯೂಟನ್, ಗೆಲಿಲಿಯೊ, ಮೇರಿ ಕ್ಯೂರಿ, ಶ್ರೀನಿವಾಸ ರಾಮಾನುಜನ್ ಇವರ ಕುರಿತು ಜೀವನ ಚಿತ್ರಗಳನ್ನು ಚಿತ್ರಿಸಿರುವ ಕೃತಿಗಳನ್ನು ರಚಿಸಿದ್ದಾರೆ. ಲ್ಯಾಂಗ್ಲೊ ಪಾರ್ಕರ್ ಎ.ಕೆ. ಅವರ ಕೃತಿಯನ್ನು ‘ಆಸ್ಟ್ರೇಲಿಯಾದ ಜಾನಪದ ಕತೆಗಳು’ ಶೀರ್ಷಿಕೆಯಡಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ...
READ MOREhttps://www.prajavani.net/artculture/book-review/aliyalarada-nenahu-book-review-1022695.html