ಮಾನಸ ಕೀಳಂಬಿ ಅವರ 51 ಕವಿತೆಗಳ ಸಂಗ್ರಹ ‘ಸುಲಭವೇನೇ ?’. ನಮನ, ಕೃಷ್ಣಲೀಲೆ, ಕನಸು, ಸ್ಫೂರ್ತಿ, ಆಷಾಢ, ಬೆರಗು, ಯಶೋಧರಾ, ಹೆಮ್ಮೆ, ಪ್ರತಿಮೆ, ಮೌನಗೌರಿ, ಅಡುಗೆ ಎಂದರೆ, ಮಾಗಿ, ಕೊಳಲ ಮಾಡಿಕೊಳ್ಳೊ ನನ್ನ, ಕಾಲ ಬದಲಾಗಿದೆ-1, ಕಾಲ ಬದಲಾಗಿದೆ-2, ಪಯಣ, ಇಷ್ಟ-ಕಷ್ಟ, ಸುಲಭವೇನೇ?, ಚಿಟ್ಟಿಹೆಜ್ಜೆ, ಒಂದು ಮುಸ್ಸಂಜೆ, ದೇವರು, ಕಾರಣ, ಶಂಕೆ, ನಿರ್ಲಕ್ಷ್ಯ, ನೆಪ, ಸೂರ, ಹೇಗೆ, ಹೊಸವರ್ಷ, ಸವಿನೆನಪು, ಒಲವಿನೋಲೆ, ಅಡುಗೆಮನೆ ಕವಿತೆ, ಅಮ್ಮ, ಗೋಧೂಳಿ ಸಮಯ, ಯುಗಾದಿ, ಪ್ರೀತಿ, ಕೃಷ್ಣ ಜನ್ಮಾಷ್ಟಮಿ, ಸಂಸಾರ, ಹುಸಿಮುನಿಸು, ಹೆಣ್ಣು ನಾನು, ತಪ, ಎಚ್ಚರ, ಒಂದು ಹುಣ್ಣಿಮೆಯಿರುಳು, ಹೊಸಲೋಕ, ಸೋಲು-ಗೆಲುವು, ಅವಮಾನ, ಜಾಣ್ಮೆ, ಸೃಷ್ಟಿಯ ನಿಯಮ, ಅಳತೆಗೋಲು, ಉಪಮೆ, ಅದೇಕೆ ತಿಳಿಯದೋ, ಪುಣ್ಯ ಇವಿಷ್ಟೂ ಈ ಕೃತಿಯಲ್ಲಿರುವ ಶೀರ್ಷಿಕೆಗಳಾಗಿವೆ. ಗಂಡು ಹೆಣ್ಣಿನ ನಡುವಿನ ದಾಂಪತ್ಯ ಜೀವನವನ್ನು ಮರು ವ್ಯಾಖ್ಯಾನ ಯುಗಾದಿ, ನಗೊಳಿಸುತ್ತಾ ಹೊಸ ಸ್ಪರ್ಶದೊಂದಿಗೆ ಇಲ್ಲಿಯ ಕವನಗಳು ಓದುಗರನ್ನು ಎದುರಾಗುತ್ತದೆ. “ಮಾನಸ ಅವರದ್ದು ಹೆಣ್ಣಿನ ದೃಷ್ಟಿಕೋನದಿಂದ ದಾಂಪತ್ಯದ ವ್ಯಾಖ್ಯಾನ. ಈಚಿನ ಬರಹಗಾರರಲ್ಲಿ ಕಾಣದ ಅಪರೂಪದ ಲಯಗಾರಿಕೆ ಇಲ್ಲಿದೆ. ಭಾಷೆಗೆ ಸ್ವಲ್ಪ ಹಿಂಜೋಲಿಯಿದ್ದರೂ ತಾಯಿಯನ್ನು ಮಕ್ಕಳು ತಬ್ಬಿಕೊಳ್ಳುವಂತೆ ಇವತ್ತಿನ ಶಬ್ದಾವಲಿಯ ವಾತ್ಸಲ್ಯದ ಆಲಿಂಗನ ಅವರ ಕವಿತೆಗಳಿಗಿದೆ. ಕೆಎಸ್ ನರಸಿಂಹ ಸ್ವಾಮಿ ಅವರ ಮೈಸೂರು ಮಲ್ಲಿಗೆ, ನಾಯಕನ ದೃಷ್ಟಿಯಲ್ಲಿ ಪ್ರೀತಿ-ವಾತ್ಸಲ್ಯ, ಹೆಣ್ಣು-ಗಂಡಿನ ಸಂಬಂಧದ ವ್ಯಾಖ್ಯೆ ನಡೆಸಿದರೆ, ಮಾನಸ ಅವರಲ್ಲಿ ನಾಯಕಿಯ ದೃಷ್ಟಿಯಲ್ಲಿ ಅದೇ ಪ್ರೀತಿ-ವಾತ್ಸಲ್ಯ, ದಾಂಪತ್ಯದ ಮರುವ್ಯಾಖ್ಯಾನ” ಎಂದು ಮುನ್ನುಡಿಯಲ್ಲಿ ಕವಿ ಎಚ್. ಎಸ್. ವೆಂಕಟೇಶಮೂರ್ತಿ ನುಡಿದಿದ್ಧಾರೆ.
ಕವಯತ್ರಿ ಮಾನಸ ಕೀಳಂಬಿ ಅವರು ಶಿವಮೊಗ್ಗ ಜಿಲ್ಲೆಯ ಕೀಳಂಬಿಯವರು. ತಂದೆ ಕೆ. ವಿ. ವಿಜಯೇಂದ್ರ, ತಾಯಿ ಉಮಾ. ವಿದ್ಯಾರ್ಥಿ ಇದ್ದಾಗ ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿಧರರು. ಕನ್ನಡ ಕಾದಂಬರಿ ಆಧಾರಿತ ಚಲನಚಿತ್ರಗಳ ಅಧ್ಯಯನ (ಪ್ರಾತಿನಿಧಿಕ)” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರ ಸಂಶೋಧನಾ ಪ್ರಬಂಧ 'ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾಗಿದೆ. ಪದವಿ ತರಗತಿಗಳಿಗೆ ಕನ್ನಡ ಉಪನ್ಯಾಸಕರಾಗಿ, ತಮಿಳುನಾಡು ಸರ್ಕಾರದ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. "ಸಂವಿತ್ ಸಂಶೋಧನಾ ಸಂಸ್ಥೆ"ಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕಾಗಿ ಕಥೆಗಳನ್ನು ರಚಿಸುವ, ಚಟುವಟಿಕೆಗಳನ್ನು ಸಂಯೋಜಿಸುವ ಮತ್ತು ...
READ MORE