ಸೂರು ಗುಡ್ಡ

Author : ಜೀವರಾಜ ಹ ಛತ್ರದ

Pages 120

₹ 125.00




Year of Publication: 2021
Published by: ಶ್ರೀ ಗುರು ಕರಿಬಸವೇಶ್ವರ ಪ್ರಕಾಶನ,
Address: ಹಿರೇಬೂದಿಹಾಳ, ತಾ. ಹಿರೇಕೆರೂರು-581109, ಜಿ. ಹಾವೇರಿ

Synopsys

ಕವಿ ಜೀವರಾಜ ಹ ಛತ್ರದ ಅವರ ಕವನ ಸಂಕಲನ- ’ಸೂರು ಗುಡ್ಡ’ . ವಿವಿಧ ವಸ್ತು ವಿನ್ಯಾಸಗಳುಳ್ಳ 77 ಕವನಗಳನ್ನೊಳಗೊಂಡು ಮೂಡಿ ಬಂದಿವೆ. ಪ್ರತಿ ಕವನವು ಕೂw ಹಾಡುಗಬ್ಬವಾಗಿದ್ದು, ಯಾರು ಬೇಕಾದrU ಸುಲಭವಾಗಿ ರಾಗ ಸಂಯೋಜನೆ ಮಾಡಿ  ಹಾಡಬಹುದು. ಸೂರು ಗುಡ್ಡ ಎಂಬ ಹೆಸರು ವಿಚಿತ್ರವಾಗಿ ಕಂಡು ಬಂದರೂ ಕೂಡ ಹಳ್ಳಿ ಜನರ ಬಾಯಲ್ಲಿ ಇದು ಜನಜನಿತ ಪದವಾಗಿದೆ. ಪ್ರತಿ ಹಳ್ಳಿಯಲ್ಲಿರುವ ಎತ್ತರದ ಒಂದು ಗುಡ್ಡಕ್ಕೆ ಸೂರು ಗುಡ್ಢ ಎಂದು ಕರೆಯುವುದು ವಾಡಿಕೆ. ಮಳೆಗಾಲದಲ್ಲಿ ಮಳೆ ಬಾರದ ಸಂದರ್ಭದಲ್ಲಿ ರೊಟ್ಟಿ ಬುತ್ತಿಗಳನ್ನು ಕಟ್ಟಿಕೊಂಡು ಭಜನೆ ಪ್ರಾರ್ಥನೆಗಳೊಂದಿಗೆ ಅರ್ಚನೆ ಮಾಡುವ ಪದ್ಧತಿ ಈಗಲೂ ಪ್ರಚಲಿತವಾಗಿದೆ. ಪಾರಂಪರಿಕವಾಗಿ ನಡೆದುಬಂದ ಸಂಪ್ರದಾಯದ ನೆನಪಿಗಾಗಿಯೇ ಲೇಖಕರು ತಮ್ಮ  ಕವನ ಸಂಕಲನಕ್ಕೆ ‘ಸೂರುಗುಡ್ಡ’ ಎಂಬ ಶೀರ್ಷಿಕೆ ನೀಡಿದ್ದಾರೆ.

 

About the Author

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು) ...

READ MORE

Related Books