‘ಮಾಯಾ ದೀಪ’ ಲೇಖಕ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಕವಿತೆಗಳ ಸಂಕಲನ. ಈ ಕೃತಿಗೆ ಡಾ.ಸುರೇಶ ಪಾಟೀಲ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಸಮಕಾಲೀನ ಸಂವೇದನಾಶೀಲ ಲೇಖಕರಲ್ಲಿ ಒಬ್ಬರಾದ ಮಹಾಬಲಮೂರ್ತಿ ಕೊಡ್ಲೆಕೆರೆಯವರದು ಬಹುಮುಖಿ ಚಿಂತನೆ ಮತ್ತು ಸಾಹಿತ್ಯ. ಬರವಣಿಗೆಯ ವೈವಿಧ್ಯತೆಯೊಂದಿಗೆ ಆ ಮಟ್ಟದ ಚಿಂತನಶೀಲತೆಯನ್ನೂ ಬೆಳೆಸಿಕೊಂಡಿದ್ದಾರೆ. ಸಾಹಿತ್ಯವಲ್ಲದೇ ಯಕ್ಷಗಾನ ಹಾಗೂ ಭಾರತೀಯ ಜ್ಯೋತಿಷ್ಯದ ಬಗೆಗೆ ತಳೆದಿರುವ ಆಸಕ್ತಿ ಅವರ ಜೀವನ ಪ್ರೀತಿಯದ್ಯೋತಕ. ಈ ಜೀವನ ಪ್ರೀತಿಯು ಪ್ರಸ್ತುತ ಸಂಕಲನದ ಕವನ-ಕವನಗಳಲ್ಲೂ ಕಾಣಿಸಿಕೊಂಡಿದೆ. ಪುರಾಣ ಪ್ರತೀಕ ಮತ್ತು ಪ್ರಸ್ತುತ ಬದುಕಿನ ತುರ್ತುಗಳು ಈ ಅಭಿವ್ಯಕ್ತಿಯಲ್ಲಿ ಸ್ಪಷ್ಟವಾಗಿ ವ್ಯಕ್ತಗೊಂಡಿದ್ದು, ಇಲ್ಲಿರುವ ಒಟ್ಟೂ 39 ಕವನಗಳೂ ಒಂದೊಂದು ದೃಷ್ಟಿಯಿಂದ ವಿಶಿಷ್ಟ-ವಿಭಿನ್ನ. ಅಂಥ ಅನೇಕ ಕವಿತೆಗಳು ಮನಸ್ಸನ್ನು ಮುಟ್ಟುತ್ತವೆ, ಹೃದಯವನ್ನು ತಟ್ಟುತ್ತವೆ, ಚಿಂತನೆಗೂ ತೊಡಗಿಸುತ್ತವೆ. ಅವುಗಳನ್ನು ಮತ್ತೆ ಮತ್ತೆ ಓದಿಯೇ ಅನುಭವಿಸಬೇಕು. ಹೀಗೆ ಮತ್ತೆ ಮತ್ತೆ ಓದುವುದರ ಮೂಲಕವೇ ಬದುಕಿನ ಸಂಕೀರ್ಣತೆಗೆ ಅನುಗುಣವಾಗಿ ಕವನಗಳು ತೆರೆದುಕೊಳ್ಳುತ್ತಾ ಹೋಗುತ್ತವೆ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ 1958ರ ಏಪ್ರಿಲ್ 01 ರಂದು ಲೇಖಕ ಮಹಾಬಲಮೂರ್ತಿ ಕೊಡ್ಲೆಕೆರೆ ಜನಿಸಿದರು. ತಂದೆ ಗಜಾನನ ಅನಂತ ಭಟ್ಟ, ತಾಯಿ ಭೂದೇವಿ . ಗೋಕರ್ಣ, ಕುಮಟಾದ ಕಾಲೇಜಿನಿಂದ ಬಿ.ಎಸ್ಸಿ.ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವೀಧರರು. ಜ್ಯೋತಿಷ್ಯ ಶಾಸ್ತ್ರದಲ್ಲಿ ಪಡೆದ ಡಿಪ್ಲೊಮಾ ಪಡೆದರು. ಕರ್ನಾಟಕ ಬ್ಯಾಂಕ್ ನಲ್ಲಿ ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದಾರೆ. ಕೃತಿಗಳು: ಮತ್ತೇಳಲು ಪೂರ್ವದಿಂದ ಕವನ ಸಂಕಲನಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ ಬಂದಿದೆ. ಮಾತು ಮತ್ತು ಪರಸ್ಪರ, ಜೀವ (ಕವನ ಸಂಕಲನಗಳು), ಚಂದ್ರಾಸ್ತಮಾನ (ಕಾದಂಬರಿ), ಕಥಾಸಂಕನಗಳು – ‘ಮತ್ತೊಂದು ಮೌನ’, ‘ಯಕ್ಷಸೃಷ್ಟಿ’, ‘ಅವನ ಜಗತ್ತಿನ ಹಗಲು’, ‘ನೆರಳು’, ‘ಇತಿಹಾಸದ ನಂತರ, ನೆರಳು ಮತ್ತು ಇತರ ಆಯ್ದ ...
READ MORE