ಕವಿ ಶಿವಾನಂದ ಕಲಬುರಗಿ ಅವರ ಕವನಗಳ ಸಂಕಲನ-ಅಂತರಂಗ. ವಿಶ್ರಾಂತ ಕುಲಪತಿ ಹಾಗೂ ಲೇಖಕಿ ಡಾ. ಮಲ್ಲಿಕಾ ಘಂಟಿ ಅವರು ಕೃತಿಗೆ ಬೆನ್ನುಡಿ ಬರೆದು ‘ದಿನನಿತ್ಯ ನಡೆಯುವ ಹೆಣ್ಣಿನ ಮೇಲಿನ ಅತ್ಯಾಚಾರಗಳಿಗೆ ಕೊನೆ ಎಂಬುದಿಲ್ಲವೆ ಎಂಬುದು ಕವಿಯ ಪ್ರಶ್ನೆ. ಪರಂಪರೆಯನ್ನು ಅರ್ಥ ಮಾಡಿಕೊಂಡಿರುವ ಕವಿಯ ಹೃದಯ ಕಠೋರತೆಯ ಹಿಂದೆ ಬದುಕಿನ ಪಡಿಪಾಟಲು ಇದೆ. ವಯೋಮಾನ ಮೀರಿದ ಅನುಭವಗಳು ಕನಸುಗಳನ್ನು ಹೊಸಕಿ ಹಾಕಿವೆ. ಸಾಹಿತ್ಯದ ಮೂಲಕ ನಾಗರಿಕ ಸಮಾಜ, ಘನತೆಯ ಬದುಕಿಗಾಗಿ ಹಂಬಲಿಸುವ ಶಿವಾನಂದರಿಗೆ ಬರೆಯುವ ವಸ್ತು ವಿಷಯಗಳ ಬಗ್ಗೆ ಸ್ಪಷ್ಟತೆ ಇದೆ. ಈ ಕಾರಣಕ್ಕಾಗಿಯೇ, ಇಲ್ಲಿಯ ಕವಿತೆಗಳು ಓದಿಸಿಕೊಂಡು ಹೋಗುತ್ತವೆ. ಚಿಂತನೆಗೆ ತೊಡಗಿಸುತ್ತವೆ. ಕವಿಗೆ ಸಾಮಾಜಿಕ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇರುವುದರಿಂದಲೇ ತಮ್ಮ ಸಮಕಾಲೀನ ಬರಹಗಾರರಿಗಿಂತಲೂ ಭಿನ್ನವಾಗಿ ಆಲೋಚಿಸಲು ಸಾಧ್ಯವಾಗಿದೆ’ ಎಂದು ಇಲ್ಲಿಯ ಕವಿತೆಗಳ ರಚನೆಯನ್ನು ಪ್ರಶಂಸಿಸಿದ್ದಾರೆ.
ಶಿವಾನಂದ ಕಲಬುರಗಿ ಕನ್ನಡ ಉಪನ್ಯಾಸಕರು. ಯಾದಗಿರಿ ಜಿಲ್ಲೆಯ ಯಾದಗಿರಿಯಲ್ಲಿ ಪದವಿಯವರೆಗೂ ಶಿಕ್ಷಣ ಪೂರೈಸಿದ್ದಾರೆ. ಬೆಂಗಳೂರಿನಲ್ಲಿ ಬಿ.ಇಡಿ ಪೂರ್ಣಗೊಳಿಸಿದ್ದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪಡೆದಿದ್ದು, ಸದ್ಯ, ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. `ಕಾವ್ಯಪ್ರಿಯ ಶಿವು' ಎಂಬುದು ಇವರ ಕಾವ್ಯನಾಮ. ಕೃತಿಗಳು: ಹಲವು ನುಡಿಗಳ ನಡಿಗೆ (ವಿಮರ್ಶೆ ಕೃತಿ), ಅಂತರಂಗ (ಕವನ ಸಂಕಲನ), ನೆತ್ತರಾಸಿದ ನೆಲ (ಕವನ ಸಂಕಲನ), ಬೆಂದ ಬೇರು ನೊಂದ ಚಿಗುರು( ಕವನ ಸಂಕಲನ), ಹಸಿವು ತಣಿಸಿದವಳು( ಕಥಾ ಸಂಕಲನ), ಸಾಹಿತ್ಯ ಚೇತನ (ವಿಮರ್ಶೆ ಕೃತಿ), ಯುಜಿಸಿ ನಡೆಸುವ ಎನ್ ಇ.ಟಿ. ಪರೀಕ್ಷೆಗಳ ಪ್ರಶ್ನೋತ್ತರ ಕೋಶ-2021, ಕನ್ನಡ ಸಾಹಿತ್ಯ ಪ್ರಶ್ನೋತ್ತರ ಕೋಶ-2021, ...
READ MORE