‘ಕನ್ನಡ ದೇಶ ಭಕ್ತಿಗೀತೆಗಳು’ ಹಂಸಾ ಆರ್ ಅವರ ಕನ್ನಡ ದೇಶ ಭಕ್ತಿಗೀತೆಗಳ ಸಂಗ್ರಹವಾಗಿದೆ. ಸಮೂಹಗಾನಕ್ಕಂತೂ ಹೇಳಿ ಬರೆಸಿರುವಂತಿವೆ. ಸಾಹಿತ್ಯ ರಚನೆಯು ಸರಳ ಶಬ್ದಗಳಲ್ಲಿದ್ದೂ ಗಂಭೀರವಾದ ಕರ್ತವ್ಯವನ್ನು ನೆನಪಿಸಿ ಕೊಡುವಲ್ಲಿ ಮುಂದಾಗಿವೆ. ಸಮಗ್ಗ ಕರ್ನಾಟಕದಿಂದ - ಭವ್ಯಭಾರತದವರೆಗೆ ಪದ್ಯಗಳಿವೆ.
ಕವಯತ್ರಿ, ಕಥೆಗಾರ್ತಿ ಹಂಸಾ ಅವರು 1963 ಸೆಪ್ಟಂಬರ್ 01 ದೊಡ್ಡಬಳ್ಳಾಪುರದ ಗೌಡರ ಹಳ್ಳಿಯಲ್ಲಿ ಜನಿಸಿದರು. ತಂದೆ ಎಂ. ರಾಮಚಂದ್ರರಾವ್, ತಾಯಿ ಪುಷ್ಪಾವತಿ ಬಾಯಿ. ’ಶಿಶುಕವನ ಗುಚ್ಛ, ತಾರೆವನ’ ಅವರ ಪ್ರಮುಖ ಕಥಾ ಸಂಕಲನಗಳು. ’ಕನ್ನಡ ದೇಶಭಕ್ತಿ ಗೀತೆಗಳು, ಕನ್ನಡ ಗೀತೆಗಳು, ಚಿಣ್ಣರ ಚಿಲಿಪಿಲಿ, ಮಮತೆಯಂಗಳದಲ್ಲಿ’ ಮಕ್ಕಳ ಕಥಾ ಸಂಕಲನ ರಚಿಸಿದ್ದಾರೆ. ’ಗೊರೂರು ಪ್ರತಿಷ್ಠಾನದ ಗೊರೂರು ಸಾಹಿತ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಪ್ರಶಸ್ತಿ, ಕನ್ನಡ ಅಭಿವೃದ್ದಿ ಬಳಗದ 'ಕುವೆಂಪು ಶ್ರೀ' ಪ್ರಶಸ್ತಿ’ ದೊರೆತಿದೆ. ...
READ MOREಹೊಸತು- 2003- ಫೆಬ್ರವರಿ
ನಾಡು-ನುಡಿ-ದೇಶಕ್ಕೆ ಸಂಬಂಧಿಸಿದಂತೆ ಗೌರವಭಾವನೆಯನ್ನು ಮೂಡಿಸುವಲ್ಲಿ ಯಶಸ್ವಿಯಾದ ಈ ಗೀತೆಗಳು ಎಳೆಯರಿಗೆ ದೇಶ ಪ್ರೇಮದ ಪಾಠ ಕಲಿಸಬಲ್ಲವು. ಸಂಗೀತ ಸಂಯೋಜಿಸಿ ಹಾಡಿದಾಗ ಉಲ್ಲಾಸ-ಉತ್ಸಾಹದ ಜೊತೆಗೆ ಮನಸ್ಸಿಗೆ ಆನಂದವನ್ನೂ ನೀಡಬಲ್ಲವು. ಸಮೂಹಗಾನಕ್ಕಂತೂ ಹೇಳಿ ಬರೆಸಿರು ವಂತಿವೆ. ಸಾಹಿತ್ಯ ರಚನೆಯು ಸರಳ ಶಬ್ದಗಳಲ್ಲಿದ್ದೂ ಗಂಭೀರವಾದ ಕರ್ತವ್ಯವನ್ನು ನೆನಪಿಸಿ ಕೊಡುವಲ್ಲಿ ಮುಂದಾಗಿವೆ. ಸಮಗ್ರ ಕರ್ನಾಟಕದಿಂದ - ಭವ್ಯಭಾರತದವರೆಗೆ ಪದ್ಯಗಳಿವೆ.