ಕವಿ ಮನೋಹರ ಜನ್ಮನು ಅವರು ಕ್ಕಳಿಗಾಗಿಯೇ ರಚಿಸಿದ ಕವನ ಸಂಕಲನ- ಚುಕ್ಕಿಯ ಚಿತ್ತಾರ. ಒಟ್ಟು 40 ಕವನಗಳಿವೆ. ವೈಜ್ಞಾನಿಕ ಮನೋಭಾವ ಬೆಳೆಯುವುದು ಬೌದ್ಧಿಕ ವಿಕಾಸದ ಸಂಕೇತ. ಹಾಗೂ ಸಾಹಿತ್ಯವು ಮನೋವೈಶಾಲ್ಯತೆಯನ್ನು ಪರಿಸರ ಪ್ರೇಮ ಬೆಳೆಸುತ್ತದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾ ಹಾಗೂ ಸಾಹಿತ್ಯ ಪ್ರೇಮ ಬೆಳೆಸುವ ಅಗತ್ಯ ಹಾಗೂ ಅನಿವಾರ್ಯತೆ ಇದೆ. ಅವರ ಸರಳ ಮತ್ತು ಮುಗ್ಧ ಪ್ರಶ್ನೆಗಳಿಗೆ ವೈಜ್ಣಾನಿಕವಾಗಿ ಉತ್ತರಿಸುವ ಹೊಣೆಗಾರಿಕೆಯೂ ಪಾಲಕರ ಮೇಲಿದೆ. ಉಡಾಫೆ ಉತ್ತರಗಳನ್ನು ನೀಡಿ ಮಕ್ಕಳನ್ನು ವಂಚಿಸುವಂತಿಲ್ಲ. ಅಪ್ಪಾ ಸೂರ್ಯ ಹೇಗಿದ್ದಾನೆ? ಹೊಟ್ಟೆ ಏತಕ್ಕಿದೆ? ಅಕಾಶದಲ್ಲಿ ಚುಕ್ಕಿಗಳು ಎಲ್ಲಿಂದ ಬಂದವು? ಮಕ್ಹೀಕಳ ಇಂತಹ ಪ್ರಶ್ನೆಗಳಿಗೆ ಕವಿಯು ಮಕ್ಕಳಿಗೆ ಸಮಾಧಾನಕರ ಉತ್ತರ ನೀಡಿದ್ದು ಕವಿತೆಯ ಸಾರ್ಥಕತೆಯಾಗಿದೆ. ನೀತಿ, ತಿಳಿವಳಿಕೆ ಮತ್ತು ಪೃಕೃತಿಯ ಘಟನೆಗಳುವ,ಪ್ರೇಮ ಕೋಪ ಇತ್ಯಾದಿ ಕುರಿತೂ ಕವನಗಳು ತಿಳಿವಳಿಕೆ ನೀಡುತ್ತವೆ. ವಸ್ತು ವೈವಿಧ್ಯತೆ, ನಿರೂಪಣಾ ಶೈಲಿಯಿಂದ ಇಲ್ಲಿಯ ಕವಿತೆಗಳು ಗಮನ ಎಳೆಯುತ್ತವೆ. ಈ ಕವನ ಸಂಕಲನವು ಕರ್ನಾಟಕ ಬರಹಗಾರ ಮತ್ತು ಪ್ರ ಕಾಶಕರ ಸಂಘ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದೆ.
ಲೇಖಕ ಮನೋಹರ ಜನ್ನು ಅವರು ಮೂಲತಃ ಗೋಕರ್ಣ ಬಳಿಯ ಬಂಕಿಕೊಡ್ಲ ಗ್ರಾಮದವರು. ತಂದೆ ಜನಾರ್ದನ ಜನ್ನು ಹಾಗೂ ತಾಯಿ ವತ್ಸಲಾ ಜನ್ನು. 25-12-1953 ರಂದು ಜನನ. ಸ್ನಾತಕೋತ್ತರ ಪದವೀಧರರು. ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಕಾರ್ಖಾನೆಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಗಣಕಯಂತ್ರ ಬರಹಗಾರರಾಗಿ ಸೇವೆ ಸಲ್ಲಿಸಿ ಸದ್ಯ ನಿವೃತ್ತರು. ಪರಿಸರ ಹೋರಾಟಗಾರರು. ಕೃತಿಗಳು: ಇವರ ಮಕ್ಕಳ ಕವನ ಸಂಕಲನ- ‘ಚುಕ್ಕಿ ಚಿತ್ತಾರ’. ರಾಜ್ಯ ಪ್ರಕಾಶಕ ಬರಹಗಾರ ಸಂಘದಿಂದ (2094) ಮೊದಲ ಬಹುಮಾನ ಪುರಸ್ಕಾರ ಲಭಿಸಿದೆ. ಕಾಲನ ತಂಬೂರಿ (ಕವನ ಸಂಕಲನ), ಚೈತ್ರಯಾತ್ರೆ,ಚುಟುಕುಮಾಲೆ-೧ (ಕಥಾ ಸಂಕಲನ), ಪರಿಷತ್ತಿಗೆ ಶಾಪವಾಗದಿರಿ (ವೈಚಾರಿಕ), ನಾಡಿನ ವಿವಿಧ ಪತ್ರಿಕೆಗಳಲ್ಲಿ ಲೇಖನ, ಕತೆ,ಕವನಗಳು ಪ್ರಕಟವಾಗಿವೆ. ...
READ MORE