ಅವ್ವ ಮತ್ತು ಆಲದಮರ

Author : ಶಿವಾನಂದ ಉಳ್ಳಿಗೇರಿ

Pages 78

₹ 100.00




Year of Publication: 2021
Published by: ತೇಜಸ್ವಿ ಪ್ರಕಾಶನ
Address: 'ಅವ್ವ' ಶಿವಬಸವ ನಗರ, ರಾಮಾಪೂರ ಸೈಟ್, ಸವದತ್ತಿ-591126, ಜಿ:ಬೆಳಗಾವಿ
Phone: 9900817716

Synopsys

ಕವಿ ಶಿವಾನಂದ ಉಳ್ಳಿಗೇರಿ ಅವರ ಮೊದಲ ಕವನ ಸಂಕಲನ -ಅವ್ವ ಮತ್ತು ಆಲದಮರ. ಒಟ್ಟು 54 ಕವಿತೆಗಳಿವೆ. ತಾಯಿಯ ಪ್ರೀತಿ, ಬದುಕು, ಹೋರಾಟ , ಬಾಲ್ಯ ,ಪ್ರೀತಿ, ಸ್ನೇಹ, ಸಂಬಂಧ, ಅಕ್ಕ , ಮೌಲ್ಯಗಳು, ವರ್ತಮಾನದ ಸಮಸ್ಯೆಗಳು, ನಾಡು ನುಡಿ ಪ್ರೇಮ ಹೀಗೇ ವಿಭಿನ್ನ ವಿಷಯಗಳು ಕವಿತೆಯ ವಸ್ತುಗಳಾಗಿವೆ. 

ಕವಿ, ವಿಮರ್ಶಕ ನಾಗೇಶ್ ಜೆ ನಾಯಕ್  ಕೃತಿಗೆ ಮುನ್ನುಡಿ ಬರೆದು ‘ಅವ್ವನ ಕುರಿತು ಬರೆಯುತ್ತಲೇ ಆಕೆಯ ತೀರದ ಪ್ರೀತಿ, ಮುಗಿಯದ ಒಲವನ್ನು ವಿಶಾಲ ಆಗಸದ ವಿಸ್ತಾರಕ್ಕೆ ಹೋಲಿಸುತ್ತ ,ಜೀವದಲ್ಲಿ ಕೊನೆಯ ಉಸಿರಿರುವರೆಗೂ ಆಕೆಗೆ ಚಿರಋಣಿಯಾಗಿರುವೆ ಎಂಬ ಧನ್ಯತಾಭಾವ ವ್ಯಕ್ತಪಡಿಸುವ ಕವಿತೆಯ ಸಾಲುಗಳು, ಮಾತೃಪ್ರೇಮದಲ್ಲಿ ಮಿಂದೇಳಿಸುವಂತೆ ಮಾಡುತ್ತವೆ. ತುಂಬ ಸರಳವಾಗಿ ಬರೆಯುವ ಶಿವಾನಂದರು ಬಲುಬೇಗನೇ ಓದುಗರಿಗೆ ಇಷ್ಟವಾಗುತ್ತಾರೆ. ಅವರ ಭಾವ ಪ್ರಪಂಚ ಕರುಳಿಗೆ ತಾಗುವಂಥದ್ದು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಗಜಲ್ ಕವಿ ಅಲ್ಲಾಗಿರಿರಾಜ ಕನಕಗಿರಿ ಅವರು ಬೆನ್ನುಡಿ ಬರೆದು ‘ ಜಗದಲಿ ಯಾರಿಲ್ಲ ಅವ್ವನಿಗೆ ಸಮಾನ ಎಂದು ಹೇಳುತ್ತಲೆ ಕವಿತೆ ಆರಂಭಿಸುವ ಕವಿ ,ಶಿಕ್ಷಕ ಶಿವಾನಂದ ಉಳ್ಳಿಗೇರಿ ಅವರ ತಾಯಿ ಮೇಲಿನ ಶ್ರದ್ಧೆಗೆ ಒಂದು ಸಲಾಂ ಹೇಳಲೇಬೇಕು. ಎಷ್ಟೇ ಪದವಿ, ಅಧಿಕಾರ,ಉನ್ನತಮಟ್ಟದಲ್ಲಿ ಇದ್ದರೂ ಹಡೆದವರ ಮೇಲೆ ಮಮತೆ ,ಕಾಳಜಿ ಹೊಂದಿರುವ ಕೆಲವು ಮಕ್ಕಳ ನಡುವೆ ಈ ಕವಿಯ ಹೃದಯವು ಒಂದಾಗಿದ್ದು ನಿಜಕ್ಕೂ ಶ್ಲಾಘನೀಯ’  ಎಂದು ಪ್ರಶಂಸಿಸಿದ್ದಾರೆ. 

ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರು ‘ನಿಮ್ಮ ಕವಿತ್ವದ ಕರ್ತೃತ್ವಶಕ್ತಿ , ಬರೆವಣಿಗೆ ಶೈಲಿ, ಭಾವನೆಗಳನ್ನು ಅಕ್ಷರರೂಪಕ್ಕೆ ಇಳಿಸಿ ಹೃದಯ ಸಿರಿವಂತಿಕೆ ಮೆರೆದಿದ್ದೀರಿ ’ ಎಂದು ಮೆಚ್ಚುಗೆ ಸೂಚಿಸಿದ್ದರೆ, ಹೊನ್ನಾವರದ ಸಾಹಿತಿ ಸಂದೀಪ ಭಟ್ "ಅವ್ವ ಮತ್ತು ಆಲದಮರ ಎಂಬ ಹೆಸರೇ ರೋಮಾಂಚನ ಹುಟ್ಟಿಸುವಂತಿದೆ. ಈ ಭೂಮಿಯನ್ನು ಪರಿಚಯಿಸಿದ ಅವ್ವನಿಗೆ ಮಗನಾಗಿ ನೀಡಿದ ಕೊಡುಗೆ ಇದು ಎಂದೇ ನಾನು ಭಾವಿಸುತ್ತೇನೆ. ಆಲದಮರವೊಂದು ಹೇಗೆ ವಿಶಾಲವಾಗಿ ಹಬ್ಬಿ ತನ್ನಲ್ಲಿ ಅನೇಕ ಪಕ್ಷಿಗಳಿಗೆ ಆಶ್ರಯ ನೀಡುವುದೋ ಹಾಗೆಯೇ ಈ ಕವನ ಸಂಕಲನ ಅನೇಕ ಓದುಗರ ಬಳಗಕ್ಕೆ ಆಶಾವಾದವಾಗುವುದರಲ್ಲಿ ಸಂಶಯವಿಲ್ಲ. ವಿಭಿನ್ನ ವಿಷಯಗಳ ಹೂರಣದಿಂದ ತಯಾರಾದ ಈ ಕವಿತೆಗಳ ಹೋಳಿಗೆಯನ್ನು ನಮ್ಮ ಜ್ಞಾನದ ಹಾಲಿನೊಂದಿಗೆ ಸವಿಯಬೇಕು. ವೈಚಾರಿಕತೆಯ ತುಪ್ಪದೊಂದಿಗೆ ಆಸ್ವಾದಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಶಿವಾನಂದ ಉಳ್ಳಿಗೇರಿ
(01 November 1991)

ಕವಿ ಶಿವಾನಂದ ಉಳ್ಳಿಗೇರಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದವರು. ಎಂ.ಎ. ಬಿ.ಇಡಿ. ಪದವೀಧರರು. ಪ್ರಸ್ತುತ, ಗೋಕಾಕ ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ.  ಕೃತಿಗಳು: ಅವ್ವ ಮತ್ತು ಆಲದಮರ (ಕವನ ಸಂಕಲನ-2021) . ...

READ MORE

Related Books