'ನದಿ ಧ್ಯಾನದಲ್ಲಿದೆ' ಕೆ.ಎನ್. ಲಾವಣ್ಯ ಪ್ರಭ ಅವರ ಕವನ ಸಂಕಲನ. ಈ ಕವನ ಸಂಕಲನದಲ್ಲಿ ಒಟ್ಟು 49 ಕವಿತೆಗಳಿವೆ. ಪ್ರಬುದ್ಧ ಚಿಂತನೆಯ ಗಾಢ ಅನುಭವದ ಪ್ರತಿಫಲನದಂತಿರುವ ಕವಿತೆಗಳು ಚೆನ್ನಾಗಿವೆ. ತನಗೆ ತಾನೇ ರೂಪುಗೊಳ್ಳುವ ಆತ್ಮಾನುಸಂಧಾನದ ಪರಿಯೇ ಕವಿತೆ ಎಂಬುದು ತಿಳಿಯುತ್ತದೆ. ವೈವಿಧ್ಯಮಯ ಲಯ, ಮುಖವಾಡರಹಿತ ಮನಸ್ಸಿನ ನೈಜ ಅಭಿವ್ಯಕ್ತಿ ಈ ಕವಿತೆಗಳ ವಿಶೇಷ.
ಕವಯತ್ರಿ ಕೆ.ಎನ್.ಲಾವಣ್ಯ ಪ್ರಭಾ ನವೆಂಬರ್ 2 ,1971 ರಂದು ಕನಕಪುರದಲ್ಲಿ ಜನನ.ಅಲ್ಲಿಯ ರೂರಲ್ ಕಾಲೇಜಿನಲ್ಲಿ ಬಿಎಸ್ಸಿ ವರೆಗೆ ವ್ಯಾಸಂಗ. ಇಂಗ್ಲಿಷ್ ಅಧ್ಯಾಪಕರಾಗಿದ್ದ ಹೆಸರಾಂತ ಕವಿ ವೇಣುಗೋಪಾಲ ಸೊರಬರು ,ಇತರ ಕನ್ನಡ ಅಧ್ಯಾಪಕರುಗಳು, ಎಲ್ಲೇಗೌಡ ಬೆಸಗರಹಳ್ಳಿ ಅವರ ಮತ್ತು ಕುಟುಂಬದ ಆತ್ಮೀಯ ಮಿತ್ರರಾಗಿದ್ದ ಪ್ರಸಿದ್ಧ ಕವಿ ಡಾ.ಹೆಚ್.ಎಸ್. ವೆಂಕಟೇಶಮೂರ್ತಿ ಅವರ ಪ್ರೋತ್ಸಾಹ ,ಮಾರ್ಗರ್ಶನದಿಂದ ಪಿಯುಸಿಯಿಂದಲೇ ಅಂದರೆ ಹದಿನೆಂಟನೇ ವಯಸ್ಸಿನಿಂದ ಕಾವ್ಯ ರಚನೆ ಆರಂಭವಾಗಿ ಅಂತರಕಾಲೇಜು ಕವಿಗೋಷ್ಟಿಗಳಲ್ಲಿ ನಿರಂತರ ಭಾಗವಹಿಸುವಿಕೆಯಿಂದಾಗಿ ಮುಂದೆ ಕ್ರೈಸ್ಟ್ ಕಾಲೇಜಿನ ಚಿ.ಶ್ರೀನಿವಾಸರಾಜು ಅವರಿಂದ ಗುರುತಿಸಲ್ಪಟ್ಟು ಬೆಳಕಿಗೆ ಬಂದ ಅನೇಕ ಪ್ರಮುಖ ಕವಿಗಳಲ್ಲಿ ಇವರೂ ಸಹಾ ಒಬ್ಬರು. ...
READ MORE