ಪ್ರಗತಿಪರ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಲೇಖಕ, ಎಲ್. ಎನ್. ಮುಕುಂದರಾಜ್ ಅವರ ‘ ದೇಶಕೋಶ ದಾಸವಾಳ ‘ಕೃತಿಯು ಕವಿತೆಗಳ ಸಂಗ್ರಹವಾಗಿದೆ.
ಹದ್ದು ಮತ್ತು ಜೀಮೂತ, ಲೋಕ ಮರೆತದ್ದು, ನೆಲಕಾಲ, ಹೆಣ ಹೂತ ನೆಲದಲ್ಲಿ, ಪ್ರಿಯದರ್ಶಿನಿಗೊಂದು ಚರಮಗೀತೆ, ಬೆಳ್ಳಗೆ ಹೂವೂ ಮೂಡೀತು, ಆಕಾಶಕ್ಕೆ ಹೋಗೊಣ, ಒಂದು ಸಹಜ ಪ್ರಶ್ನೆ, ಬೆಳಕ ಮಳೆ, ಸೂರ್ಯ ನೆತ್ತಿಯ ಸೀಳಿ, ಉಸಿರು ಸಿಕ್ಕಿದ ಕ್ಷಣಾರ್ಧ, ಹೇಳದಿರು ಗೆಳತಿ, ನಾಲ್ಕು ಹನಿ, ಸಾವು, ಚಿತ್ರಕ್ಕೆ ಗೆರೆಯಾಗುತ್ತೇನೆ, ಹಾ! ಯುಗಾದಿಯ ನೆನಪು , ಕನಸ ತೆನೆ ಹೊಸೆಯುತ್ತ, ನನ್ನದೆಂಬ ಧಾವಂತ ಇನ್ನೂ ಮುಂತಾದ ಕವಿತೆಗಳ ಗುಚ್ಛ ’ದೇಶಕೋಶ ದಾಸವಾಳ’ ಕೃತಿಯಲ್ಲಿದೆ.
ಎಲ್. ಎನ್. ಮುಕುಂದರಾಜ್ ಹೊಸ ತಲೆಮಾರಿನ ಹೆಸರಾಂತ ಲೇಖಕರು, ಕನ್ನಡ ಎಂ.ಎ. ಪಡೆದ ಇವರು ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. - ದೇಶ ಕೋಶ ದಾಸವಾಳ, ನಿರಂಕುಶ ಮುಂತಾದ ಕವನ ಸಂಕಲನಗಳು, ವೈಶಂಪಾಯನ ತೀರ, ಇಗೋ ಪಂಜರ ಅಗೋ ಮುಗಿಲು, ಸಂಗ್ರಾಮ ಭಾರತ ಮುಂತಾದ ನಾಟಕಗಳು, ಅನೇಕ ಜೀವನ ಚರಿತ್ರೆಗಳು ಹಾಗೂ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ನಟಿಸಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಲ್ಲದೆ, ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಸುವರ್ಣ ಸಂಭ್ರಮಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಶಿಕ್ಷಕ ...
READ MOREದೇಶ ಕೋಶ ದಾಸವಾಳ - ಎಲ್. ಮುಕುಂದರಾಜ್