ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಬರೆದಿರುವ ಕವಿತೆಗಳ ಸಂಕಲನ- ಸುನೀತ. ಬೌದ್ಧಧರ್ಮದಲ್ಲಿ ಸುನೀತನಿಗೆ ಮಹತ್ವದ ಸ್ಥಾನವಿದೆ. ಆತ ಅಂತ್ಯಜನಾಗಿ ಹುಟ್ಟಿ ಎಲ್ಲರ ಮನ ಗೆದ್ದು ದೈವ ಸ್ಥಾನಕ್ಕೇರಿದ ಎಂಬುದು ಇತಿಹಾಸ ಹೇಳುತ್ತದೆ. ಕೃತಿಯಲ್ಲಿ ಎಡ-ಬಲ, ನರಿ-ಮಂಗ, ಹೂವುಗಳಪಾದ, ಗಂಟು ಜಗಳ, ವೀಣೆಯ ಕೊಟ್ಟಗೆ, ಹಲಸಂಗಿ ಜಕ್ಕವ್ವ, ಏನೇ ಬರಲಿ; ಎಂಏ ಇರಲಿ, ಜೀವಧಾತ ಸತ್ವವನ್ನು ಕುರಿತು ಇಂತಹ 30 ಸುನೀತಗಳನ್ನು ಸಂಕಲಿಸಲಾಗಿದೆ.
‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...
READ MORE