ಒಂದು ಮುತ್ತಿನಿಂದ ಕೊಲ್ಲಬಹುದು

Author : ಪ್ರವರ ಕೊಟ್ಟೂರು

Pages 120

₹ 150.00




Year of Publication: 2019
Published by: ಸಂಕಥನ
Address: 72, 6ನೇ ಅಡ್ಡರಸ್ತೆ, ಉದಯಗಿರಿ, ಮಂಡ್ಯ-571401
Phone: 9886133949

Synopsys

ಪ್ರವರ ಕೊಟ್ಟೂರು ಅವರ ಎರಡನೇ ಕವನ ಸಂಕಲನ ಇದಾಗಿದ್ದು ‘ಸೌಂದರ್ಯ ಮತ್ತು ಮನುಷ್ಯರ’ ನಡುವಿನ ಅನುಸಂಧಾನವಾಗುವ ಕವಿತೆಗಳು ನಾಜೂಕಿನ ಗೋಡೆಯಿಲ್ಲದೆ ಸಹಜವಾಗಿ ಮೂಡಿ ಬಂದಿವೆ. ತಮ್ಮ ಕವಿತೆಗಳಿಗೆ ತಂತ್ರಗಳ ಹಂಗಿಲ್ಲದೆ ಏಕಾಂತದಲ್ಲುಂಟಾಗುವ ಒಂಟಿತನದಲ್ಲಿ ಈ ಕವಿತೆಗಳು ಸ್ನೇಹಿತನಷ್ಟೇ ಆಪ್ತವಾಗಬಲ್ಲುದು. ಮನಸ್ಸಿನ ಹಗುರತೆಗೆ ಮಧುರತೆ ಸಾಂಗತ್ಯ ನೀಡುವ ಕವಿತೆಗಳ ಸಾಲು ಇಲ್ಲಿವೆ.

ಒಂದು ಮುತ್ತಿನಿಂದ ಕೊಲ್ಲಬಹುದು

ಮೌನವನು ಎದುರು ನೋಡುತ್ತಿದ್ದೆ

ತಂಗಾಳಿಯ ನೂಕಿಕೊಂಡು ಬಂದ

ನಿನ್ನ ಗಮನಿಸಲಿಲ್ಲ

 

ಕಾಮನಬಿಲ್ಲನು ಹೊತ್ತಿಕೊಂಡ ನವಿಲುಗಳೊ

ಚಂದ್ರನ ಹೊತ್ತುಕೊಂಡ ಮೋಡಗಳೊ

ಚಳಿಗಾಲದ ಬೊಟ್ಟುಗಳು ಕರಗಿ

ಅಂಗೈ ತುಂಬಾ ನದಿ

 

ಈ ಹಾಳು ಕವಿಗಳು, ವೈರಾಗಿಗಳು

ಪಾಪಿಗಳು, ದ್ರೋಹಿಗಳು ಅಂತೆಲ್ಲ ಪುಕಾರು

ಪ್ರೀತಿಸಲಿಕ್ಕೆ ಲಾಯಕ್ಕಿಲ್ಲದವರು

ಹರೆಯದ ಹುಡುಗಿಯರ ಎಡಗಾಲ

ಪ್ರೀತಿಯ ಒದೆ ತಿಂದ ಅನುಭವವಿದೆ

 

ಪುಕಾರು ತೆಗೆಯುವವ ಬಗ್ಗೆ ತಕರಾರಿರುವ ಕವಿಗಳ ಅಂತರಂಗದ ಸಾಲುಗಳು ಹೀಗೆ ಮುಂದುವರೆಯುತ್ತವೆ.

About the Author

ಪ್ರವರ ಕೊಟ್ಟೂರು

ಪ್ರವರ ಕೊಟ್ಟೂರು ಹುಟ್ಟಿದ್ದು 1990 ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ. ಅಲ್ಲಿಯೇ ಬಿ.ಎಸ್ಸಿ. ನಂತರ ಬೆಂಗಳೂರಿನ SMRIT ಕಾಲೇಜಿನಲ್ಲಿ ಎಂ.ಸಿ.ಎ. ವ್ಯಾಸಂಗ ಮುಗಿಸಿ, ಸಧ್ಯಕ್ಕೆ ಹೊಸದುರ್ಗ ಪದವಿ ಕಾಲೇಜೊಂದರಲ್ಲಿ ಗಣಕಯಂತ್ರ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಓದು-ಬರವಣಿಗೆ, ಪೋಟೋಗ್ರಾಫಿ, ಚಾರಣ -ಸುತ್ತಾಟದೊಂದಿಗೆ ನಿಕಟ ಸಂಪರ್ಕ ಬೆಸೆದುಕೊಂಡಿರುವ ಅವರು ಚೆಂದನೆಯ ಕವಿತೆಗಳನ್ನು ಬರೆಯುತ್ತಾರೆ. ‘ಅಜೀಬು ದುನಿಯಾ' ಅವರ ಮೊದಲ ಕವನ ಸಂಕಲನ 2013 ಪ್ರಕಟವಾಯಿತು. ಈ ಕವನ ಸಂಕಲನಕ್ಕೆ ಸೇಡಂ ನ ‘ಅಮ್ಮ ಪ್ರಶಸ್ತಿ’ ಮತ್ತು ‘ಕ.ಸಾ.ಪ ದ ಅರಳು ಸಾಹಿತ್ಯ ಪ್ರಶಸ್ತಿ’ ದೊರತಿದೆ. ‘ಒಂದು ಮತ್ತಿನಿಂದ ಕೊಲ್ಲಬಹುದು’ ಅವರ ...

READ MORE

Related Books