ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಕವನ ಸಂಕಲನವಾದ ”ಬಕುಲದ ಹೂಗಳು’ ಎಂಬ ಕೃತಿಗೆ 1992 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಜನರ ನೋವು ನಲಿವುಗಳನ್ನೇ ಕಾವ್ಯವಾಗಿಸಿಕೊಂಡ ಸರಳ ಕವಿ ಸು. ರಂ ಎಕ್ಕುಂಡಿಯವರು. ಇವರ ಕವಿತೆಗಳ ಮೂಲ ಜನಸಾಮಾನ್ಯರೇ ಆದ್ದರಿಂದ ಬಡವರ, ದುಡಿವವರ ಪರ ಬರೆದ ಕವಿ ಎಕ್ಕುಂಡಿಯವರು.
ಪ್ರಸ್ತುತ ಬಕುಲದ ಹೂಗಳು ಕವನ ಸಂಕಲದಲ್ಲಿ 35 ಕವಿತೆಗಳಿವೆ. ನಿರ್ದಿಷ್ಟ ನಾಮರೂಪಧಾರಿಯಾದ ವ್ಯಕ್ತಿಗಳು ಒಂದು ನಿಶ್ಚಿತ ಜೀವನ ಸಂದರ್ಭಕ್ಕೆ ಸ್ಪಂದಿಸುವ ವರ್ಣನಾತ್ಮಕ ಕಥನ ಈ ಸಂಗ್ರಹದುದ್ದಕ್ಕೂ ಕಂಡು ಬರುತ್ತದೆ.
ಪುರಾಣೀಕರಣವು ಎಕ್ಕುಂಡಿಯವರ ಕಾವ್ಯದ ಮುಖ್ಯ ಲಕ್ಷಣವಾಗಿದೆ. ಕೊಳದ ಗೌರಿ, ಇಬ್ಬರು ರೈತರು, ಬಕುಲದ ಹೂಗಳು, ಈ ಸಂಗ್ರಹದ ಮುಖ್ಯ ಕವಿತೆಗಳಾಗಿವೆ.
ಸು.ರಂ. ಎಕ್ಕುಂಡಿಯವರು ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು 20-01-1923ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ . 1944 ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. 35 ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಅವರ ಕೃತಿಗಳು ಕಾವ್ಯ- ಶ್ರೀ ಆನಂದತೀರ್ಥರು, ಸಂತಾನ, ಹಾವಾಡಿಗರ ಹುಡುಗ, ಮತ್ಸ್ಯಗಂಧಿ, ಬೆಳ್ಳಕ್ಕಿಗಳು. ಕಥಾಸಂಕಲನ- ನೆರಳು. ಕಾದಂಬರಿ-ಪ್ರತಿಬಿಂಬಗಳು. ಪರಿಚಯ- ಶ್ರೀ ಪು.ತಿ.ನರಸಿಂಹಾಚಾರ್ಯರು. ಅನುವಾದ- ಎರಡು ...
READ MORE