ಒಂದು ಮೌನದ ಬೀಜ

Author : ಎ.ಎಸ್. ಮಕಾನದಾರ

Pages 96

₹ 100.00




Year of Publication: 2015
Published by: ನಿರಂತರ ಪ್ರಕಾಶನ
Address: ಗಾಂಧಿ ನಗರ 5ನೆ ಅಡ್ಡ ರಸ್ತೆ ಬೆಟಗೇರಿ ಗದಗ -582103
Phone: 9916480291

Synopsys

ಲೇಖಕ ಎ.ಎಸ್. ಮಕಾನದಾರ ಅವರ ಕವನ ಸಂಕಲನ-ಒಂದು ಮೌನದ ಬೀಜ. ಕವಿಯೇ ಹೇಳಿಕೊಂಡಂತೆ, ಕವಿತೆ ಅಂದ್ರೆ ಮತ್ತೇನೂ ಅಲ್ಲ 'ಮೌನದ ಮೊಟ್ಟೆಯೊಡೆದು ಹುಟ್ಟಿದ ಕೋಟಿ ಕೋಟಿ ನೋವಿನ ಧ್ವನಿ ' . ಅಪ್ಪನ ತಲೆಯ ಮೇಲಿನ ಹಿಲಾಲ್, ಬರೆದ ಕವಿತೆಗೆ ಭಾರವಾದ ಅವಳು, ಬೋಧಿ -ಕದಳಿಗಳನ್ನು ದಾಟಿ ಕಾಣೆಯಾದ ಇನಿಯ, ನಮ್ಮ ಕಾವ್ಯದ ನಿರಂತರ ಶೋಧ ವಾಗಿದ್ದಾರೆ. ಕಾವ್ಯದ ಜೀವ ದ್ರವ್ಯವೇ ಶೋಧ. ಅದು ನಿಂತ ಮರುಕ್ಷಣವೇ ಕಾವ್ಯ ಬತ್ತಿ ಹೋಗುತ್ತದೆ. ನೆತ್ತಿಯ ಪಾರಮ್ಯ ಪ್ರಾರಂಭವಾಗುತ್ತದೆ. 'ಈ ಬದುಕೆಂಬ ಹೆಗಲು ಕೊಡದ ಭುಜದಲಿ ಹುಟ್ಟಿದ ದಿಗಿಲು ' ಕುರಿತು ಕವಿ ಮಕಾನದಾರ ಧ್ಯಾನಿಸಿದ ಪರಿಯ ಪರಿಣಾಮವಾಗಿ ಒಂದು ಮೌನದ ಬೀಜ ಮೈದಾಳಿದೆ. ಮಕಾನದಾರ ತಮ್ಮ ಕವಿತೆ ಗಳ ಮೂಲಕ ಹೇಳದಿರುವ ಅಂಶಗಳೆ ಇಲ್ಲ ಎನ್ನುವಷ್ಟು ಸಮಾಜ, ಜೀವಪರ ಮತ್ತು ಬದುಕಿನ ಲಯ ತಾಳಗಳ, ಒಳ ಪ್ರಾಸಗಳು ವಿರುದ್ಧ ಮುಖಿ ಯಾಗಿ ಹುಟ್ಟಿ ಸಮರಸ ದ ಸಂಕೇತ ಗಳಾಗಿ ನಿಲ್ಲುತ್ತವೆ. ಹಿರಿಯ ಸಾಹಿತಿ ಡಾ. ರಾಜಶೇಖರ್ ಮಠಪತಿ ಅವರು ಪ್ರತಿ ಕವಿತೆಯೂ ಒಂದು ಉಲ್ಲಂಘನೆ ಮತ್ತು ನವ ನಿರ್ಮಾಣದ ಹಂಬಲ. ಕವಿತೆ ಯನ್ನು ಪವಿತ್ರವಾಗಿಸಿದ್ದು ಈ ಹಂಬಲ. ಕಟ್ಟಿ ಕೊಳ್ಳುವ ಹಂಬಲ. ಪ್ರಪಂಚದ ಎಲ್ಲ ವಿಷಾದ ಕವಿತೆಗಳೂ ಈ ಹಂಬಲದ ಸಂಕೇತ ಗಳೇ. ಈ ಸಂಕಲನದಲ್ಲಿ ಇಂಥ ಅನೇಕ ಕವಿತೆ ಗಳನ್ನು ಗಮನಿಸಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ.

ಯುವ ಗಜಲ್ ಕವಿ ಮಹಾರಾಷ್ಟ್ರದ ಗಿರೀಶ್ ಜಕಾಪುರೆ ಅವರು ‘ಕವಿ, ಮಕಾನದಾರ ಅವರು ತಮ್ಮ ಕವಿತೆಗಳ ಮೂಲಕ ಹೇಳದಿರುವ ಅಂಶಗಳೆ ಇಲ್ಲಎನ್ನುವಷ್ಟು ಸಮಾಜ, ಜೀವನ ವನ್ನು ಸ್ಪರ್ಶಿ ಸಿ ಬರುತ್ತಾರೆ. ಎಲ್ಲ ನೋವುಗಳಿಗೂ ಎಲ್ಲರ ನೋವು ಗಳಿಗೂ ಧ್ವನಿ ಯಾಗುತ್ತಾರೆ. ಅವರು ಮಂದಿರ, ಮಸೀದಿ, ಚರ್ಚ್ ಗಳಿಂದ ಹಾದು ಸಮಾನತೆಯ ಗಂಧ ಹರಡುವ, ಶಾಂತಿ ಸಾರುವ ನವಿಲು ಗರಿಯ ಹಿಡಿದು ಹಂಚಿತಿನ್ನುವ ಚಾಮಲಾ ವನ್ನು ಮುಂದೆ ಚಾಚುತ್ತ ಬರುವ ಸೂಫಿ ಸಂತನಂತೆ ಕಾಣುತ್ತಾರೆ. ಕಾವ್ಯದ ಮೇಲೆ ಹದವಾದ ಹಿಡಿತವಿದೆ ಎಂಬುದು ಬೆಳ್ಳಿ ಬೆಳಕಿನ ಬೀಜವಾದ ಒಂದು ಮೌನದ ಬೀಜ ಸಂಕಲನ ದಲ್ಲಿ ಕಾಣಲು ಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕವನ ಸಂಕಲನ "ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ ? " ಕವಿತೆ ಕುವೆಂಪು ವಿಶ್ವ ವಿದ್ಯಾಲಯವು ಬಿ ಎ. ಬಿಕಾಂ. ಬಿಎಸ್ ಸಿ ಮತ್ತು ಬಿ ಎಸ್ ಡಬ್ಲ್ಯೂ ಮೊದಲ ಸೆಮಿಸ್ಟರ ಕನ್ನ್ನಡ ನುಡಿ ಪಠ್ಯದಲ್ಲಿ ಸೇರ್ಪಡೆ ಯಾಗಿದೆ. ನಾಮದೇವ್ ಕಾಗದಗಾರರ ಮುಖಪುಟವಿನ್ಯಾಸ, ಕೆ. ಬಿ. ವೀರಲಿಂಗನಗೌಡರ ಹಾಗೂ ವಿಜಯ್ ಕಿರೇಸೂರ್ ಅವರ ರೇಖಾಚಿತ್ರಗಳು ಗಮನ ಸೆಳೆಯುತ್ತವೆ.

About the Author

ಎ.ಎಸ್. ಮಕಾನದಾರ

ಲೇಖಕ ಎ. ಎಸ್. ಮಕಾನದಾರ ಅವರ ಹುಟ್ಟೂರು ಗಜೇಂದ್ರಗಡ. ಪ್ರಸ್ತುತ ಗದುಗಿನ ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 10 ಸ್ವತಂತ್ರ ಕೃತಿಗಳನ್ನು, 16 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಎಸ್.ಡಬ್ಲೂ ಮೊದಲ ಸೆಮಿಸ್ಟರ್ ಗೆ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ’ ಎಂಬ ಇವರ ಕವಿತೆ ಪಠ್ಯ ವಾಗಿ ಸೇರ್ಪಡೆ ಯಾಗಿದೆ.  ಪ್ರಶಸ್ತಿ-ಗೌರವಗಳು:  ಸರಕಾರದಿಂದ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಸಂತ ಶಿಶುನಾಳ ಶರೀಫ ಪುರಸ್ಕಾರ, ಭಾವೈಕ್ಯ ಪುರಸ್ಕಾರ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ, ಕೊಪಳ ...

READ MORE

Related Books