‘ಈ ಹೂವ ಹೆಸರು ನಿಮ್ಮಿಚ್ಚೆಯಂತೆ’ ಕವಿತೆಗಳ ಸಂಕಲನವು ಕವಿ ಪರಿಮಳ ಅವರ ನೆನಪುಗಳು, ಭಾವನೆಗಳು, ಕನಸುಗಳ ಪ್ರತಿರೂಪ ಎನಿಸಬಹುದು.
ಇಲ್ಲಿಯ ಕವಿತೆಗಳಲ್ಲಿ ಹೂವನ್ನು ಹೆಣ್ಣಿಗೆ ಸಮೀಕರಿಸಿಕೊಂಡು ನೋಡುವ ದೃಷ್ಟಿಕೋನ ಭಿನ್ನವಾಗಿದೆ. ಏಕೆಂದರೆ, ನಾನೊಂದು ಹೂವು/ ಕುಂಡದಲಿ ಬಂದಿಯಾದ/ನಸುನಗುವ ಹೂವು (ಹೂ ಹೂವ ಹೆಸರು ನಿಮ್ಮಿಚ್ಚೆಯಂತೆ) ಎನ್ನುತ್ತಲೇ ಹೂವಿನ ಸಹಜ ಗುಣವನ್ನು ಮೀರುತ್ತಾ ’ಮುಟ್ಟಿದರೆ ಮುನಿಯದ/ ಹಿಸುಕಿದರೆ ನಾಶವಾಗದ/ ಜಗ್ಗಿದರೆ/ಪಕಳೆಯೂ ಕೀಳದ/ ಗಟ್ಟಿ ತೊಗಲಿನ/ಖುಷಿ ಕೊಡುವ ನಾನು- ಹೂವು’ ಎಂದು ಹೇಳುತ್ತಲೇ ತನ್ನೊಳಗಿನ ದೃಢತೆಯನ್ನು ದಾಖಲಿಸುತ್ತಾರೆ. ಇಂತಹ ಹಲವಾರು ಕವಿತೆಗಳು ಇಲ್ಲಿವೆ.
ಕವಯಿತ್ರಿ, ಕಥೆಗಾರ್ತಿ ಮತ್ತು ಅನುವಾದಕಿ ಪರಿಮಳ ಜಿ. ಕಮತರ್ ಅವರು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಆಂಗ್ಲ ಭಾಷಾ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ‘ ಈ ಹೂವ ಹೆಸರು ನಿಮ್ಮಿಚ್ಚೆಯಂತೆ’ ಇವರ ಕವಿತಾ ಸಂಕಲನದ ಹೆಸರು. ...
READ MORE