ಇಡೀ ಕವನ ಸಂಕಲನದಲ್ಲಿ ಹಲವು ಕ್ರಾಂತಿ ಗೀತೆಗಳು ಮತ್ತೆ ಕೆಲವು ಪ್ರೇಮ,ಪ್ರಕೃತಿ, ಸಾಮಾಜಿಕ ಸಂವೇದನೆಗಳನ್ನು ಮತ್ತು ಅನೇಕ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಮೂಲಕ ಸಾಹಿತ್ಯವನ್ನು ಸಂಗಾತಿಯನ್ನಾಗಿಸಿಕೊಂಡಿದ್ದಾರೆ. ಇಲ್ಲಿನ ಕವಿತೆಗಳು ಸರಳ ಮತ್ತು ಸುಂದರ ಎನ್ನಿಸಿದರೂ ಸಹೃದಯರನ್ನು ಸೆಳೆಯುತ್ತವೆ. 'ಸ್ವಪ್ನ ಸುಂದರಿ'ಯ ನೆನೆದು ಮಲ್ಲಿಗೆಯ ಮನದಲ್ಲಿ 'ಭುವನ ಮಂದಿರ'ವ ಕಟ್ಟಿ 'ಪ್ರೀತಿ ಜೋಳಿಗೆಯ ಫಕೀರ'ನಂತೆ ತನ್ನೊಲವಿನ ಮಡದಿಗೆ ತನ್ನನ್ನೇ ನೀಡುವ 'ಹೃದಯ ಚೋರ' ಈ ಕವಿ. ನಿಜಕ್ಕೂ ಈ ಪುಸ್ತಕ ಕೇವಲ ಮಸ್ತಕದ ವಸ್ತುವಲ್ಲ ಬದಲಾಗಿ ಮನದಾಳದ ಮತನ ಕಾವ್ಯ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಬೈರಗಾಮದಿನ್ನೆ ಎಂಬ ಆಂಧ್ರ ಗಡಿಭಾಗದವರು ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ. ಸಾಹಿತ್ಯ ಮತ್ತು ರಂಗಭೂಮಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಮೊದಲ ಕೃತಿ ' ತೋಚಿದ್ದೆ ಗೀಚಿದೆ' ಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಚೊಚ್ಚಲ ಕೃತಿ ಬಹುಮಾನ ಲಭ್ಯಯವಾಗಿದೆ. ಇದುವರೆಗೂ ನನ್ನ ಸಾಹಿತ್ಯ ಕ್ಷೇತ್ರದಲ್ಲಿ ಎರಡು ಬಾರಿ ಜಿಲ್ಲಾ ಕ.ಸಾ.ಪದಿಂದ ಗೌರವ ಸನ್ಮಾನ. ಹತ್ತಾರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಸನ್ಮಾನ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಉದಯೋನ್ಮುಖ ಯುವ ಸಾಹಿತಿ ಬಿರುದು ಸನ್ಮಾನ ಮಾಡಿದವು. ಕೃತಿ: ತೋಚಿದ್ದೆ ಗೀಚಿದೆ ...
READ MORE