ನಕ್ಷತ್ರ ಸೂಕ್ತ

Author : ಅನಸೂಯಾದೇವಿ

Pages 120

₹ 150.00




Year of Publication: 2014
Published by: ಶ್ರೀ ಅನ್ನಪೂರ್ಣ ಪ್ರಕಾಶನ
Address: #176, 12ನೇ ಮುಖ್ಯರಸ್ತೆ, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು-79
Phone: 23153226

Synopsys

`ನಕ್ಷತ್ರ ಸೂಕ್ತ’ ಕೃತಿಯು ಅನಸೂಯಾದೇವಿ ಅವರ ಕವನಸಂಕಲನ ಕೃತಿಯಾಗಿದೆ. ಮೂರು ಪ್ರಬುದ್ಧ ಮುಖ್ಯಪಾತ್ರಗಳ ಸುತ್ತ ತಿರುಗುವ ಕಥೆ .ಅಡಿ ಟಿಪ್ಪಣಿ ಹೇಳುತ್ತದೆ “ನನಗೊಂದು ಮಗು ಬೇಕು” ನಾಯಕಿ ಮಾರ್ದವಿ ಸಂಗೀತಗಾರಳು ವಿದ್ಯಾವಂತೆ ಹಾಗೂ ಸೌಮ್ಯ ಸ್ವಭಾವದ ರೂಪಸಿ .ಅವಳ ಪ್ರತಿ ಮಧುಕರ ಕಾಲೇಜು ಉಪನ್ಯಾಸಕನಾಗಿದ್ದವನು ಹಾಗೂ ದೇವಾಲಯದ ಅರ್ಚಕ ಸಂಸ್ಕೃತ ವಿದ್ವಾಂಸ ಹಾಗೂ ಪಿ.ಎಚ್.ಡಿ. ಬರೆಯುತ್ತಿರುವ ಭಾಸ್ಕರ ಸೋಮಯಾಜಿ. ಅವರ ಕಥೆಗೆ ಹಿರಿಯರ ಕಾಲದ ಶಾಪದ ವೃತ್ತಾಂತ ಆಸ್ತಿಗಾಗಿ ಅಣ್ಣತಮ್ಮಂದಿರ ದ್ವೇಷ ಕಲಹಗಳ ಹಿನ್ನೆಲೆ ತೆಗೆದುಕೊಂಡು ವಿವರಿಸುತ್ತಾ ಹೋಗುವ ಕಥೆಯ ಎಳೆ. ಇತ್ತೀಚಿನ ದಿನಗಳಲ್ಲಿ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದ ಕಾದಂಬರಿ ಇದು. ಬಾಲವಿಧವೆ ರಾಧಜ್ಜಿಯ ಹಕ್ಕಿಗಳೊಡನಿನ ಸಂಭಾಷಣೆ, ಅಣ್ಣನ ಮೋಸಕ್ಕೆ ಬಲಿಯಾದ ಶಾಂತಾರಾಮಜ್ಜ, ಅನ್ಯಾಯಕ್ಕೆ ಈಡಾಗಿ ವಿಷ ಕುಡಿದು ವಂಶಕ್ಕೆ ಶಾಪ ಕೊಟ್ಟ ಶಾಂತಾರಾಮನ ಪತ್ನಿ ಜಯಲಕ್ಷ್ಮಿ ಈ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ. ಪ್ರತಿಯೊಂದು ಮನೆತನದಲ್ಲಿ ಹುಡುಕಿದರೆ ಇಂತಹ ಕಥೆಗಳು ಸಿಗಬಹುದೇನೋ. ಆದರೆ ತಮ್ಮ ಪಾಪದ ಫಲ ಇಂದಿನ ತಮ್ಮ ಅವಸ್ಥೆ ಎಂದರಿಯುವವರು ಮಾತ್ರ ಇರುವುದಿಲ್ಲ.

About the Author

ಅನಸೂಯಾದೇವಿ
(31 October 1949)

ಕಥೆಗಾರ್ತಿ, ಕಾದಂಬರಿಗಾರ್ತಿ ಅನಸೂಯಾದೇವಿ ಅವರು ಸಂಗೀತ ವಿದುಷಿ. ಅವರು 1949 ಅಕ್ಟೋಬರ್‌ 31 ರಂದು ಜನಿಸಿದರು.  ಇವರು ಮೂಲತಃ ಬೆಂಗಳೂರಿನ ಬನಶಂಕರಿಯವರು.  ತಂದೆ ತಿಮ್ಮಯ್ಯ ಅಡಿಗ, ತಾಯಿ ಕಾವೇರಮ್ಮ.  ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಎಲ್ಲಾ ಪ್ರಕಾರದ ಬರಹಗಳು ಸುಮಾರು 430 ಕ್ಕೂ ಹೆಚ್ಚು ಪ್ರಕಟಗೊಂಡಿವೆ. ಕಾವ್ಯ : ’ಪ್ರಕೃತಿ ಪುರುಷ, ಕೇಶವ ನಮನ, ಅಮ್ಮ ನಿನ್ನ ನೆನಪಿಗೆ, ಅನನ್ಯ’ ಅವರ ಕಾವ್ಯ ಕೃತಿಗಳು. ’ಡಾ. ಅನಸೂಯಾದೇವಿಯವರ ಸಮಗ್ರ ಕತೆಗಳು, ದೀಪದ ಕೆಳಗೆ, ಉರಿಯ ಬೇಲಿ, ಅನಸೂಯ ಕತೆಗಳು’ ಅವರ ಕಥಾ ಸಂಕಲನ. ’ಆಕಾಶದ ಹಾಡು, ...

READ MORE

Related Books