‘ಡುಂಡುಭ ವಿಲಾಸ’ ಧರಣಿದೇವಿ ಮಾಲಗತ್ತಿ ಅವರ ಕವನ ಸಂಕಲನ. ಈ ಕೃತಿಗೆ ಡಾ. ಮಳಲಿ ವಸಂತಕುಮಾರ್ ಅವರ ಮುನ್ನುಡಿ ಇದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಧರಣೀದೇವಿಯವರು ಮಹಾಕಾವ್ಯದ ನಿರ್ಮಿತಿಯಂತೆಯೇ ಬಿಡಿ ಕವಿತೆಗಳ ರಚನೆಯಲ್ಲೂ ನೈಪುಣ್ಯತೆ ಉಳ್ಳವರು. ಅದರಲ್ಲೂ ಚುಟುಕುಗಳಲ್ಲಿ - ಸಮಾಜದಲ್ಲಿನ ಓರೆಕೋರೆಗಳ ಅಸಮಾನತೆಗೆ ಚುರುಕು ಮುಟ್ಟಿಸುವುದರಲ್ಲಿ ನಿಸ್ಸೀಮರು. ಅವರ ಡುಂಡುಭ ವಿಲಾಪ ಕನ್ನಡ ಕಾವ್ಯಕ್ಷೇತ್ರದಲ್ಲಿ ಒಂದು ವಿನೂತನ ಹೆಸರು. ಹೆಸರು ಮಾತ್ರವಲ್ಲ ಕವಿತಾ ಸಂಕಲನ ಸಹ ವಿನೂತನವಾದುದು, ವಿಶಿಷ್ಟವಾದುದು. ಇಲ್ಲಿನ ಕವಿತೆಗಳನ್ನು ಓದಿದ ಯಾರಿಗೆ ಆದರೂ ಶ್ರೀಮತಿ ಧರಣೀದೇವಿ ಮಾಲಗತ್ತಿ ಅವರು ಒಬ್ಬ ಪ್ರಬುದ್ಧ ಪ್ರೌಢ ಗಂಭೀರ ಚಿಂತನಶೀಲ ಲೇಖಕಿ ಎಂಬುದು ಮನದಟ್ಟಾಗದೆ ಇರದು. ನನ್ನ ಮಗಳು ಡಾ. ವಸು ಮಳಲಿ ಬದುಕಿದ್ದ ದಿನಗಳಲ್ಲಿ ಅನೇಕ ಸಂದರ್ಭಗಳಲ್ಲಿ ಧರಣೀದೇವಿ ಅವರ ಬಗ್ಗೆ ಹೆಮ್ಮೆಯಿಂದ, ಅಭಿಮಾನದಿಂದ, ಆತ್ಮೀಯತೆಯಿಂದ ಮಾತನಾಡುತ್ತಿದ್ದಳು. ಅವರ ಆರೋಗ್ಯಕರ ಧ್ಯೇಯ ಧೋರಣೆಗಳ ಬಗ್ಗೆ ಪ್ರಶಂಸನೀಯ ಭಾವನೆಯನ್ನು ಹೊಂದಿದ್ದಳು. ಪ್ರಸ್ತುತ ಕೃತಿ ಇದಕ್ಕೆಲ್ಲ ನಿಜದರ್ಪಣದಂತಿದೆ ಎಂದಿದ್ದಾರೆ ಮಳಲಿ ವಸಂತಕುಮಾರ್.
ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ. 1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...
READ MORE