ಕವಿ ಕಾತ್ಯಾಯನಿ ಕುಂಜಿಬೆಟ್ಟು ಅವರ ಕವನ ಸಂಕಲನ ‘ಏಕತಾರಿ ಸಂಚಾರಿ’. ಈ ಸಂಕಲನದಲ್ಲಿ 45 ಕವಿತೆಗಳಿವೆ. ಕೃತಿಯ ಮುಖಪುಟವನ್ನು ಮುರಳೀಧರ ರಾಠೋಡೆ ಅವರು ಮಾಡಿದ್ದು, ಆರತಿ ಎಚ್.ಎನ್ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಬೆನ್ನುಡಿಯಲ್ಲಿ ಬರೆದಿರುವಂತೆ, ಪ್ರಖರ ಪ್ರತಿಮೆಗಳ ಪ್ರಭಾವಳಿ ಹೊತ್ತ ಅಪ್ಪಟ ಕಾವ್ಯಗುಚ್ಛವಿದು. ಕಾತ್ಯಾಯಿನಿಯ ಕವಿತೆಗಳಿಗೆ ಖಾಸಾ ಹೆಣ್ಣಿನ ಪದ್ಯಗಳು ಎಂಬ ಹಣೆಪಟ್ಟಿ ಒಪ್ಪುತ್ತದೆ. ಆದರೆ, ಒಲವ ಒಡಲಲ್ಲಿ ಅಂಕುರವಾಗಿ, ಅದರ ವಿವಿಧ ಆಯಾಮಗಳಲ್ಲಿ ಮಿಂದು ಬಂದ ತಾಜಾ ಸೃಜನ ಬರಹಗಳೆಂದರೆ ಇನ್ನು ಹೆಚ್ಚು ಒಪ್ಪುತ್ತದೆ. ಪತಂಗ ಪ್ರೀತಿಯೆಂಬ ದೀಪಕ್ಕೆ ಆಕರ್ಷಿತವಾಗಿ ಬಂದು ರೆಕ್ಕೆ ಸುಟ್ಟುಕೊಂಡರೂ, ಆ ಬೂದಿಯನ್ನೇ ತನ್ನ ಕಣ್ಣಿಗೆ ಕಾಡಿಗೆಯ ಸುರ್ಮಾ ಹಚ್ಚಿಕೊಂಡಂತೆ, ಪ್ರೀತಿಯ ಹಲವು ಭಾವಗಳಾದ ಮೋಹ ವಿರಹ ತಲ್ಲಣ ಕಂಪನ ವಂಚನೆ ನಿಷ್ಠೆಯ ಪಲ್ಲಟ ಸ್ವಮರುಕ ಕಾಡುವಿಕೆಗಳ ಅಗಾಧತೆಯನ್ನು ಇಂಚು ಇಂಚಾಗಿ ಭಾಷಾ ಕುಸುರಿ ಮಾಡುವುದರಲ್ಲಿ ಕಾತ್ಯಾಯಿನಿ ಸಿದ್ಧಹಸ್ತರು. ಕಾತ್ಯಾಯಿನಿಯ ಅದ್ಭುತ ಕರ್ತೃತ್ವ ಶಕ್ತಿ, ಭಾಷಾ ಪ್ರಭುತ್ವ, ಬಳಕುವ ಪದಲಾಲಿತ್ಯ, ಇವೆಲ್ಲಾ ಅವರ ಸಹಜ ನಡೆಯಂತೆ ಭಾಸವಾಗುವಷ್ಟು ಸೊಗಸಾಗಿ ಮೂಡಿಬಂದಿದೆ. ಭಾವಕ್ಕನುಗುಣವಾಗಿ ಬಳಸುವ ಸಶಕ್ತ ರೂಪಕಗಳು ಅವರಿಗೆ ಬಂದ ಬಳುವಳಿ. ಹೀಗಾಗಿ ಕಾತ್ಯಾಯಿನಿಯ ಬರಹ ಸಹೃದಯರ ಮನದಂಗಳದಲ್ಲಿ ಗಾಢ ಪರಿಣಾಮ ಬೀರುತ್ತದೆ.ಎಲ್ಲ ಪದ್ಯಗಳಲ್ಲಿ ಎದ್ದು ಕಾಣುವ ಅಂಶ ಕಾತ್ಯಾಯಿನಿಯ ಭಾವತೀವ್ರತೆ. ಈ ತೀವ್ರತೆಯ ಸುಳಿಯ ಸೆಳೆತಕ್ಕೆ ನೀವು ಸಿಗಲೇಬೇಕು ಎಂಬ ಪಣತೊಟ್ಟ ಕವಿತೆಗಳು ಒಂದು ಅನೂಹ್ಯ ಲೋಕದರ್ಶನ ಮಾಡಿಸುತ್ತವೆ ಎಂಬುದಾಗಿ ಹೇಳಿದ್ದಾರೆ.
ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಹುಟ್ಟೂರು ಉಡುಪಿಯ ಕಾಪು ಬಳಿಯ ಕರಂದಾಡಿ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಮುಂಬೈ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ “ವಿಶಾರದ' ಪದವಿ. ತುಳು ಕಾದಂಬರಿ 'ಕಬರ್ಗತ್ತಲೆ'ಗೆ ತುಳುಕೂಟ(ರಿ) ಉಡುಪಿಯ 'ಪಣಿಯಾಡಿ ಪ್ರಶಸ್ತಿ’, ಕನ್ನಡ ಕಾದಂಬರಿ 'ತೊಗಲುಗೊಂಬೆ'ಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ 'ಮಲ್ಲಿಕಾ' ಪ್ರಶಸ್ತಿ ಹಾಗೂ ಮೂಡಬಿದರೆಯ ವರ್ಧಮಾನ ಪ್ರತಿಷ್ಠಾನದ 'ಯುವ ವರ್ಧಮಾನ ಪ್ರಶಸ್ತಿ'; 'ಒಳದನಿಯ ಪಲುಕುಗಳು' ವಿಮರ್ಶಾಕೃತಿಗೆ ಕ.ಸಾ.ಪ. ಲೀಲಾವತಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ, ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ದ.ರಾ.ಬೇಂದ್ರೆ ...
READ MORE