ಜಾಜಿ ಮಲ್ಲಿಗೆ ಕವಿ ಎಂದೇ ಖ್ಯಾತರಾದ ಸತ್ಯಾನಂದ ಪಾತ್ರೋಟ ಅವರ ಪ್ರಮುಖ ಕವನ ಸಂಕಲನ ‘ಜಾಜಿ ಮಲ್ಲಿಗೆ’. ‘ಕಥೆ ಹೇಳಲೇ ಅಜ್ಜ, ಜಾಜಿ ಮಲ್ಲಿಗೆ, ನಾಡ ಕಟ್ಟಿದ ಜನ, ನಮ್ಮ ನೆಲಾ ನಮಗೆ ಕೊಡಿ, ಪಂಚೆಯುಡಿಗೆಯ ಮುದುಕ, ಬೆಳಗಾದರೆ ಇದೆ ನಿನ್ನ ಜಯಂತಿ, ಹಂದಿ, ಧಾರವಾಡದ ಮುಂಗಾರು ಮಳೆ, ಧಾರವಾಡದಲ್ಲಿ ಕೋಳಿ ಕೂಗುವುದಿಲ್ಲ, ಅನುಕೂಲ ಸಿಂಧು, ಮಲ್ಲಿಗೆ, ಮರೆತಿಲ್ಲ ಬಸವ, ಜಗದ ಕಣ್ಣು, ಶರಣೆಂದರೋ ಮಂಡೇಲಾ, ಹುಟ್ಟಬೇಕಾಗಿದೆ’ ಮುಂತಾದ ಕವನಗಳು ಇಲ್ಲಿವೆ. ಸಮಕಾಲೀನ ತಲ್ಲಣಗಳಿಗೆ ಕವಿ ಇಲ್ಲಿನ ಕವಿತೆಗಳ ಮೂಲಕ ಸ್ಪಂದಿಸಿರುವುದು ಓದುಗರನ್ನು ಪ್ರತಿಸ್ಪಂದಿಸುವಂತೆ ಪ್ರೇರೇಪಿಸುತ್ತದೆ.
ಸತ್ಯಾನಂದ ಪಾತ್ರೋಟ ಅವರು ಕನ್ನಡದ ಹೊಸ ಸಂವೇದನೆಯ ಕವಿ, ಲೇಖಕರು. ‘ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ..ಮನಸು-ಕನಸುಗಳಲ್ಲಿ ಜಾಜಿ ಮಲ್ಲಿಗೆ..ಎನ್ನುವ ಮೂಲಕ ನಾಡಿನಾದ್ಯಂತ ಜಾಜಿ ಮಲ್ಲಿಗೆ ಕವಿ ಎಂದೇ ಖ್ಯಾತರಾದವರು. ಕೃಷ್ಣಾ ನದಿ ತೀರದ ಸತ್ಯಾನಂದ ಪಾತ್ರೋಟ ದಲಿತ ಲೋಕದ ಬಂಡಾಯ ಪ್ರತಿಭೆ. ಇವರು ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಆರನೇ ದಲಿತ ಸಾಹಿತ್ಯ ಸಮ್ಮೇನಳದ ಅಧ್ಯಕ್ಷತೆ ವಹಿಸಿದ್ದರು. ಕವಿ ಸತ್ಯಾನಂದ ಪಾತ್ರೋಟ ಅವರ ಲೇಖನಿಯಿಂದ ಸೃಜಿಸಿದ ಕವನಗಳು ನಾಡಿನ ಶಾಲಾ ಕಾಲೇಜಿನಿಂದ ಆರಂಭಗೊಂಡು ವಿಶ್ವವಿದ್ಯಾಲಯದ ಪಠ್ಯಗಳಲ್ಲೂ ಸ್ಥಾನ ಪಡೆದಿವೆ. ಧಾರವಾಡದ ಕರ್ನಾಟಕ ವಿ.ವಿ.ಗುಲ್ಬರ್ಗ, ಮಂಗಳೂರು, ತುಮಕೂರು, ಬೆಳಗಾವಿ ರಾಣಿ ...
READ MORE