ಎಂದಿಗೂ ತಾಜಾತನ-ಲವಲವಿಕೆಯನ್ನು ಬಿಡಲೊಲ್ಲದ ಕವಿತೆಗಳು ಚಿದಂಬರ ನರೇಂದ್ರ ಅವರದ್ದು. ವಿಶಿಷ್ಟ ಭಾಷೆಯಿಂದ ಪದ್ಯ ಕಟ್ಟುವ ಜಾಣ್ಮೆ, ಕಾವ್ಯಾಭಿವ್ಯಕ್ತಿ ಇತ್ಯಾದಿ ಓದುಗರನ್ನು ಸೆಳೆಯುತ್ತವೆ. ಕೃತಿಗೆ ಎಚ್. ಎಸ್. ಶಿವಪ್ರಕಾಶ್ ಬೆನ್ನುಡಿ ಬರೆದಿದ್ದು “ಗದ್ಯ ಮತ್ತು ಪದ್ಯ ಎರಡನ್ನೂ ಹೃದ್ಯವಾಗಿ ಬಳಸಿಕೊಳ್ಳುವ ಅವರ ರಚನೆಗಳು ಸಂಗೀತ, ಸಿನಿಮಾದಿ ಇತರೆ ಕಲೆಗಳಿಂದ ಪರಿಪುಷ್ಪವಾಗಿವೆ. ಈ ಕಾರಣದಿಂದಾಗಿ, ಇವತ್ತಿನ ದಿನಗಳಲ್ಲಿ ‘ಗಾಳೀ ಕೆನಿ’ ಒಂದು ಅಪರೂಪದ ಕೃತಿ” ಎಂದು ಪ್ರಶಂಸಿಸಿದ್ದಾರೆ.
ಚಿದಂಬರ ನರೇಂದ್ರ ಅವರು ಮೂಲತಃ ಧಾರವಾಡದವರು. ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಪ್ರಸ್ತುತ ಬೆಂಗಳೂರಿನ ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿನಿಮಾ, ಸಾಹಿತ್ಯದ ಓದು-ಬರಹ, ಕಾವ್ಯಾನುವಾದ ಅವರ ಹವ್ಯಾಸಗಳು. ಝೆನ್, ಸೂಫಿ ಕಾವ್ಯಮಾರ್ಗ ಮತ್ತು ಪಾಶ್ಚಿಮಾತ್ಯ-ಪೌರಸ್ತ್ಯ ಕವಿತೆಗಳ ಅನುವಾದದಲ್ಲಿ ಆಸಕ್ತರು. ‘ಚುಕ್ಕಿ ತೋರಸ್ತಾವ ಚಾಚಿ ಬೆರಳ’ ಅವರ ಮೊದಲ ಪ್ರಕಟಿತ ಕವನ ಸಂಕಲನ. ...
READ MORE