ಈ ಕೃತಿಯಲ್ಲಿ ಒಟ್ಟು 41 ಕವಿತೆಗಳಿವೆ. ಮುಂಬೈ ನಗರಗಳ ಗಲ್ಲಿಗಳಲ್ಲಿ ಪದೇ ಪದೇ ಚಲಿಸುವ ಶ್ರೀನಿವಾಸ ಜೋಕಟ್ಟೆ ಅವರ ಕವಿತೆಗಳು ಅಂತಿಮವಾಗಿ ತನ್ನ ತಾಯಿ ನೆಲದ ಬೇರಿಗಾಗಿ ಚಡಪಡಿಸುವುದನ್ನು ನಾವು ಇಲ್ಲಿ ಕಾಣಬಹುದು. ಭಾರತವನ್ನು ಕಾಡುವ ಅಭದ್ರತೆ ವೈಯಕ್ತಿಕವಾಗಿ ಕವಿಯ ಆಳದಿಂದಲೇ ಹುಟ್ಟಿರುವುದು. ಪ್ರತೀ ಕವಿತೆಗಳಲ್ಲೂ ಕಂಡೂ ಕಾಣದಂತೆ ಈ ತಳು ಆತಂಕವನ್ನು ನಾವು ಕವಿತೆಗಳ ಸಾಲುಗಳಲ್ಲಿ ಕಾಣಬಹುದು. ಕಾಶ್ಮೀರದ ಆ್ಯಪಲ್‌ನ್ನು ರೂಪಕವಾಗಿಟ್ಟು ಭಾರತದ ಒಳ ಸಂಘರ್ಷವನ್ನು ಹೇಳುವ ಅಖಂಡ ಭಾರತ ಗಣಪತಿಯ ಸಂದರ್ಭದಲ್ಲೇ ಹುಟ್ಟಿಕೊಳ್ಳುವ ಚಂದಾ ಕೇಳುವವರನ್ನು ವಸ್ತುವಾಗಿಟ್ಟು ಬರೆದ ಗಣಪನ ಸದ್ದು, ಮುಂಬೈಯ ಒಳ ನೋವುಗಳನ್ನು ಹೇಳುವ ಮುಂಬಯಿ ಬಿಸಿ, ಅಫ್ಘಾನಿಸ್ತಾನದ ದುರಂತವನ್ನು ಹೇಳುವ ಬುದ್ಧ, ಸುತ್ತಲ ಕುದ್ರತಗಳಿಗೆ ದೇವರಲ್ಲಿ ಮೊರೆಯಿಡುವ ನಾಸ್ತಿಕನ ಅಸಹಾಯಕತೆಯನ್ನು ತೆರೆದಿಡುವ ನಾಸ್ತಿಕನ ಸ್ವಗತ ಹೀಗೆ ಹಲವು ಉತ್ತಮ ಕವಿತೆಗಳನ್ನು ಒಳಗೊಂಡ ಈ ಕೃತಿಯೂ, ಇಂದಿನ ರಾಜಕೀಯ ದುರಂತಗಳಿಗೆ ಸ್ಪಂದಿಸುವ ಕವನ ಸಂಕಲನವಾಗಿದೆ.
ಸಾಹಿತಿ, ಪತ್ರಕರ್ತ 'ಶ್ರೀನಿವಾಸ ಜೋಕಟ್ಟೆ’ ಅವರು 1964 ಜುಲೈ 4 ಮಂಗಳೂರು ಜೋಕಟ್ಟೆಯಲ್ಲಿ ಜನಿಸಿದರು. ಪ್ರಸ್ತುತ ಮುಂಬಯಿ ನಗರದಲ್ಲಿ ವಾಸವಿದ್ದು, ಕನ್ನಡದ ದಿನಪತ್ರಿಕೆ 'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಜೋಶ್ರೀ', 'ಶ್ರೀಜೋ', ಎಂಬ ಕಾವ್ಯನಾಮದಿಂದಲೂ ಬರೆಯುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಹಿಮವರ್ಷ, ಊರಿಗೊಂದು ಆಕಾಶ, ಒತ್ತಿ ಬರುವ ಕತ್ತಲ ದೊರೆಗಳು. ಇವರ ಗದ್ದರ್ ಕವನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಕ್ಕೆ ಆಯ್ಕೆಯಾಗಿದೆ. ...
READ MORE