ಲೇಖಕಿ, ಕವಯತ್ರಿ ಪಿ. ಚಂದ್ರಿಕಾ ಅವರ ’ ಒಬ್ಬಳೇ ಆಡುವ ಆಟ’ ಕವನ ಸಂಕಲನವು ನಲವತ್ತೊಂದು ಕವಿತೆಗಳ ಗುಚ್ಷ.
ಈ ಕವನ ಸಂಕಲನದಲ್ಲಿರುವ ಕಾವ್ಯ ರೀತಿ ಲೋಕದರ್ಶನದ ದೃಷ್ಟಿಯನ್ನು ಕಾಣಿಸುವಂತದ್ದು. ತಾಯಿಯ ಅಂತಃಕರಣದ , ಹೃದಯದ ಏಕಾಂತದೊಳಗಿನ ಲೋಕಾಂತಗಳನ್ನು ಆಲಿಸುವ , ಒಳಗಿನ ದನಿ-ನೋಟಗಳ ಜೊತೆ ಇವರ ಕವಿತೆಗಳು ವಿಹರಿಸುತ್ತವೆ.
’ಒಬ್ಬಳೇ ಆಡುವ ಆಟ’ ಇದೊಂದು ಧ್ವನಿಪೂರ್ಣ ಶೀರ್ಷಿಕೆ. ’ಮತ್ತೆ ಬೀಳುತ್ತದೆ ,ಅಳುಗುಳಿಯ ಪ್ರತಿ ಮನೆಗೆ ಕಾಳು ,ಹೀಗೆ ಹಾಕಿದರೂ ಹಾಗೆ ಹಾಕಿದರೂ ಲೆಕ್ಕ ಒಂದೇ’ ಎನ್ನುವ ಅವರ ಈ ಸಾಲುಗಳು ಹೆಣ್ಣಿನ ಸಂವೇದನೆಯನ್ನು ಕುರಿತು ಹೇಳುವಂತದ್ದು.
ಹೆಣ್ಣು ಗಂಡಿಗೆ ಸೋತು , ಹೆಣ್ಣು ಹೆಣ್ಣಿಗೆ ಸೋತು, ನೂತ ಸಂಬಂಧಗಳು ತಂತಾನೇ ಅರ್ಥಗಳ ಕಳೆಯುವಾಗ ಸೋತು ಸೋಲುಗಳಲ್ಲಿ ಅವಮಾನಕ್ಕೆ ನೋವಿಗೆ ಬಿಡಿಸಿಟ್ಟ ಪರಿಪರಿ, ಎನ್ನುವ ಬದುಕಿನ ಕುರಿತಾದ ರಚನೆಯು ಸೋಲು-ಗೆಲುವುಗಳ ನಿರ್ಧಾರ, ಸೋತು -ಗೆಲ್ಲುವ ಗೆದ್ದು -ಸೋಲುವ ಸಹವರ್ತನೆಗಳ ಸೂಕ್ಷ್ಮತೆಯನ್ನು ತಿಳಿಸುತ್ತದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಲ್ಲಿ ಜನಿಸಿದ ಚಂದ್ರಿಕಾ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗವನ್ನು ನಡೆಸಿದರು. ‘ಕನ್ನಡ ಸಾಹಿತ್ಯ ವಿಮರ್ಶೆಯ ಐತಿಹಾಸಿಕ ಅಧ್ಯಯನ’ ಇವರ ಪಿಎಚ್. ಡಿ ಪ್ರಬಂಧ. ಹಲವಾರು ಕಿರುತೆರೆ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಥಾ ವಿಸ್ತರಣೆ, ಸಂಭಾಷಣೆ, ಕಿರುಚಿತ್ರಗಳ ನಿರ್ದೇಶನ, ನಿರ್ಮಾಣ, ನಿರ್ವಹಣೆ, ರಾಜ್ಯಮಟ್ಟದ ವಿಚಾರ ಸಂಕಿರಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಕವಿತಾ ವಾಚನ, ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಹ ಸಂಪಾದಕಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆಯಾಗಿ ಕೆಲಸ ನಿರ್ವಹಣೆ ಮಾಡಿದ ಅನುಭವ ಲೇಖಕಿಯದು. ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ, ಸೂರ್ಯಗಂಧೀ ...
READ MORE