‘ಅವರು ಪುರಾವೆಗಳನ್ನು ಕೇಳುತ್ತಾರೆ’ ಪ್ರತಿಭಾ ನಂದಕುಮಾರ್ ಅವರ ಕವನ ಸಂಕಲನ. ನವ್ಯೋತ್ತರ ಕನ್ನಡ ಸಾಹಿತ್ಯ ಕಂಡ ಅಪರೂಪದ ಪ್ರತಿಭಾವಂತೆ. ನವನವೋನ್ಮೇಷಶಾಲಿನೀ ಪ್ರತಿಭೆ ಎನ್ನುವುದಕ್ಕೆ ಅನ್ವರ್ಥಕ ಹೆಸರಿನವರು ಪ್ರತಿಭಾ ನಂದಕುಮಾರ್. ಪ್ರತಿಮೆ-ಪ್ರತೀಕಗಳ ಮೂಲಕ ಹೊಸ ಬೆಡಗನ್ನು ಕಾವ್ಯಕ್ಕೆ ತುಂಬಿ ಓದುಗರನ್ನು ವಿಮರ್ಶಕರನ್ನು ಬೆರಗುಗೊಳಿಸಿದವರು. ಸ್ತ್ರೀವಾದಿ ಚಿಂತನೆಯ ಪ್ರತಿಭಾ ಅವರ ಕಾವ್ಯ ಒಂದು ಹೋರಾಟವೆಂಬಂತೆ ರೂಪು ಪಡೆದಿವೆ. ಪುರುಷ ಅಹಂ ಬೆಚ್ಚಿ ಬೀಳುವಂತೆ ಅನನ್ಯತೆಯ ಛಾಪನ್ನು ಒತ್ತಿದವರು. ಮಹಿಳೆಯರ ನೋವು-ಯಾತನೆ, ಮಾನಸಿಕ ಹಿಂಸೆ, ಜರ್ಜರಿತಗಳಿಗೆ ನಾಲಿಗೆಯಾಗಿ, ಶೋಷಣೆಯ ವಿರುದ್ಧ ಪ್ರತಿಭಾ ನಂದಕುಮಾರ್ ಅವರ ಕವಿತೆಗಳು ಮಾತಾಡುತ್ತವೆ.
ಲೇಖಕಿ ಪ್ರತಿಭಾ ನಂದಕುಮಾರ್ ಅವರು ಮೂಲತಃ ಬೆಂಗಳೂರಿನವರು. 1955 ಡಿಸೆಂಬರ್ 25ರಂದು ಜನಿಸಿದರು. ತಂದೆ-ವಿ. ಎಸ್. ರಾಮಚಂದ್ರರಾವ್, ತಾಯಿ- ಯಮುನಾಬಾಯಿ. ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದಿರುವ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪತಿ ನಂದಕುಮಾರ್ ಹಾಗೂ ಮಕ್ಕಳು ಅಭಿರಾಮ್ ಮತ್ತು ಭಾಮಿನಿ ಜೊತೆ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಪ್ರತಿಭಾ ನಂದಕುಮಾರ್ ಕಾವ್ಯಧರ್ಮವನ್ನೇ ...
READ MORE