ಖ್ಯಾತ ಲೇಖಕ ಡಾ. ಎಂ.ಜಿ. ದೇಶಪಾಂಡೆ ಅವರ ಕವನ ಸಂಕಲನ-ಕಾವ್ಯ ಚಿತ್ರಾಂಬರಿ. ಒಟ್ಟು ಐವತ್ತೆರಡು ಕವಿತೆಗಳಿವೆ .ಸಾರ್ಥಕದ ಕ್ಷಣಗಳು, ಎತ್ತ ನಿನ್ನ ಪಯಣ, ಸೋಪಾನ, ಅಭಿಶಾಪ ,ಕಸೋಟಿ, ಕಾರು ಮತ್ತು ಪರಿಸರ, ಬಾಲರಾಟ,ಉತ್ತರ ,ಆತ್ಮವಿಶ್ವಾಸ, ಹಾರೈಕೆ, ಕಾಯಕವೇ ಕೈಲಾಸ ,ಯಾರು ಹೊಣೆ, ಪಥಿಕನಿಗೆ, ನಾಂದಿ , ರಂಗೋಲಿ, ಯಾರಿಗಾಗಿ , ಏತಕ್ಕಾಗಿ ,ನಿರೀಕ್ಷೆ ,ಜ್ವಲಂತ ಪ್ರಶ್ನೆ ಬಾಳಪಯಣ, ಜೀವನ ಮೃತ್ಯು, ವಾಸ್ತವ, ಪ್ರಾತಃಸ್ಮರಣೀಯರು, ಪುಷ್ಪ , ರತ್ನಗಂಬಳಿ, ಸಾಂತ್ವನ .. ಹೀಗೆ ಇಲ್ಲಿನ ಕವಿತೆಗಳು ತುಷಾರ, ಮಯೂರ, ಮಲ್ಲಿಗೆ, ಮಂಗಳ, ಕರ್ಮವೀರ ಸೇರಿದಂತೆ ಪತ್ರಿಕೆಗಳಲ್ಲಿ ಚಿತ್ರ ಸಹಿತ ಪ್ರಕಟಗೊಳಿಸಿದೆ. ತುಷಾರ ,ಮಯೂರ ಪತ್ರಿಕೆಗಳು ಏರ್ಪಡಿಸಿದ್ದ ಚಿತ್ರಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಅನೇಕ ಕವಿತೆಗಳು ಇಲ್ಲಿವೆ. ಆಯಾ ಪತ್ರಿಕೆಗಳ ಕಾವ್ಯ ಚಿತ್ರಗಳು ಸಹಿತ ಇಲ್ಲಿವೆ . ಕಾವ್ಯಗಳಿಗೆ ಚಿತ್ರಗಳು ಮೂಡಿಸಿದ ಕಾರಣವಾಗಿ ‘ಕಾವ್ಯ ಚಿತ್ರಾಂಬರಿ’ ಎಂದು ಈ ಕೃತಿಗೆ ಹೆಸರಿಡಲಾಗಿದೆ . ಈ ಕಾವ್ಯಗಳಲ್ಲಿ ವಿವಿಧ ವಿಷಯಗಳ ಸಂಗ್ರಹವಿದೆ.
ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು. ಇವರ ಕಾವ್ಯನಾಮ ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ. ಕೊರೊನಾ ವೈರಸ್ ಪರಿಣಾಮ ಲಾಕ್ ...
READ MORE